ಬಳಂಜ : ಇತಿಹಾಸ ಪ್ರಸಿದ್ದ ಬಳಂಜ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೂತನ ಧ್ವಜಸ್ತಂಭವನ್ನು ಮೇ.8 ರಂದು ತರಲಾಯಿತು.
ಕುತ್ಲೂರು ಭಾಗದ ಬೋವಾಡಿ ಎಂಬಲ್ಲಿ ಧ್ವಜಸ್ತಂಭಕ್ಕೆ ಕೊಡಿಮರದ ಪೂಜಾ ವಿಧಿ-ವಿಧಾನವನ್ನು ತಂತ್ರಿಗಳ ನೇತೃತ್ವದಲ್ಲಿ ನಡೆಸಿ ಕೊಡಿಮರವನ್ನು ಬಳಂಜ ನಾಲ್ಕೂರು ಗ್ರಾಮದ ಸಾವಿರಾರು ಭಗವದ್ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ಬಳಂಜ ದೇವಸ್ಥಾನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಬಳಂಜ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಶರಾದ ಶೀತಲ್ ಪಡಿವಾಳ್, ಚಂದನಾ ಪಡಿವಾಳ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್ದಡ್ಕ, ಕಾರ್ಯದರ್ಶಿ ಅನಿಲ್ ನಾಯ್ಗ ಅಟ್ಲಾಜೆ, ಧ್ವಜಸ್ತಂಭ ಸಮಿತಿ ಸಂಚಾಲಕ ಪ್ರಭಾಕರ ಹೆಗ್ಡೆ ಕೋಡಿ, ತಾ.ಪಂ ಮಾಜಿ ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ ನಾಲ್ಕೂರು, ಪ್ರಮೋದ್ ಕುಮಾರ್ ಜೈನ್, ಸುರೇಶ್ ಶೆಟ್ಟಿ ಕುರೆಲ್ಯ, ದಿನೇಶ್ ಪೂಜಾರಿ ಅಂತರ, ಚಂದ್ರಶೇಖರ್ ಪಿ.ಕೆ, ಬಾಲಕೃಷ್ಣ ಪೂಜಾರಿ ಯೈಕುರಿ, ಸದಾಶಿವ ಶೆಟ್ಟಿ, ರಂಜಿತ್ ಹೆಚ್.ಡಿ ಸುಧಾಮ, ಸತೀಶ್ ಶೆಟ್ಟಿ ಕುರೆಲ್ಯ, ಗುರು ಹೆಗ್ಡೆ ದರಿಮಾರ್, ಪ್ರವೀಣ್ ಲಾಂತ್ಯಾರು, ರಮಾನಾಥ ರೈ ಪಂಬಾಜೆ, ಗಣೇಶ್ ಬೊಂಟ್ರೊಟ್ಟು, ದಿನೇಶ್ ಕುಂದ್ರೊಟ್ಟು, ಸತೀಶ್ ಹೆಗ್ಡೆ ಕಟ್ಟೆ, ವಿಶ್ವನಾಥ ಹೊಳ್ಳ ನಾಲ್ಕೂರು ಹಾಗೂ ಬಳಂಜ-ನಾಲ್ಕೂರು ಭಗವದ್ಭಕ್ತರು ಉಪಸ್ಥಿತರಿದ್ದರು.