ಪವರ್ ಹೌಸ್ ಬ್ಯಾಟರಿಯ 3ನೇ ಶಾಖೆ ಶುಭಾರಂಭ

madanthyar power house copyಮಡಂತ್ಯಾರು : ಗ್ರಾಹಕರಿಗೆ ಗುಣಮಟ್ಟ ಹಾಗೂ ಉತ್ತಮವಾದ ಪ್ರಮಾಣಿಕ ಸೇವೆಯನ್ನು ನೀಡುತ್ತಾ ಬಂದಿರುವ ಕುಂದಾಪುರ, ಉಜಿರೆ, ಬೆಳ್ತಂಗಡಿಯಲ್ಲಿ ತನ್ನ ಶಾಖೆಯನ್ನು ಹೊಂದಿದ್ದು ಇದೀಗ ಮಡಂತ್ಯಾರು ಮಹಾವೀರ ಕಾಂಪ್ಲೇಕ್ಸ್‌ನಲ್ಲಿ ಪವರ್ ಹೌಸ್‌ನ 3ನೇ ಶಾಖೆಯ ಉದ್ಘಾಟನಾ ಸಮಾರಂಭವು ಮೇ.8ರಂದು ಜರುಗಿತು. ಸಂಸ್ಥೆಯ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಸಂಸ್ಥೆಯು ಈ ಭಾಗದ ಜನರಿಗೆ ಪ್ರಮಾಣಿಕ ಸೇವೆಯನ್ನು ನೀಡುವುದರ ಜೊತೆಗೆ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಲಕರ ಮಾತಾ-ಪಿತರಾದ ನೇಮಿರಾಜ ಹೆಗ್ಡೆ ಮತ್ತು ವಿಜಯಲಕ್ಷ್ಮೀ ಬಾವಂತಬೆಟ್ಟು, ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕ್ರೇಡಿಟ್ ಕೋ ಅಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಲ್ಯಾನ್ಸಿ ಪಿಂಟೋ, ಮಡಂತ್ಯಾರು ಪ್ರಾ.ಕೃ.ಪ.ಸ ಸಂಘದ ನಿರ್ದೇಶಕ ಮಹಾವೀರ ಬಲ್ಲಾಳ್, ಮಾಲಾಡಿ ತಾ.ಪಂ ಸದಸ್ಯ ಜೋಯಲ್ ಮೆಂಡೋನ್ಸಾ, ಮಡಂತ್ಯಾರು ಪ್ರಾ.ಕೃ.ಪ.ಸ ಸಂಘದ ಅಧ್ಯಕ್ಷ ಅರವಿಂದ ಜೈನ್, ಪ್ರವೀಣ್ ಕುಮಾರ್ ಪಾಡ್ಯಾರುಬೀಡು, ಧರ್ಮಸ್ಥಳ ಡಿ.ಎಂ.ಸಿ ಅಕ್ಷಯ ಜೈನ್, ಕಾಂಪ್ಲೇಕ್ಸ್ ಮಾಲಕ ರಾಜವೀರ ಜೈನ್, ಮಿತ್ರಸೇನ್ ಶೆಟ್ಟಿ ಅಳದಂಗಡಿ, ವಿಜಯ ಬ್ಯಾಂಕ್ ಮ್ಯಾನೇಜರ್ ಶ್ರವನ್ ಜೈನ್, ಪವರ್ ಆನ್ ಬ್ಯಾಟರಿ ಮಾಲಕ ಶೀತಲ್ ಜೈನ್, ಪವರ್ ಹೌಸ್ ಬ್ಯಾಟರಿ ಮಾಲಕ ಜೀತು ಜೈನ್, ಉಜಿರೆ ಮಾನಸ ಎಂಟರ್ ಪ್ರೈಸಸ್‌ನ ಮಾಲಕ ಪ್ರದೀಪ್ ಕುಮಾರ್ ಜೈನ್ ಶಿರ್ಲಾಲು, ಉಜಿರೆ ಜೈನ್ ಮೊಬೈಲ್ಸ್‌ನ ಅಭಿಜಿತ್ ಜೈನ್, ಸುಪ್ರಿತ್ ಜೈನ್ ಅಳದಂಗಡಿ, ಮಡಂತ್ಯಾರು ಅಪರಾ ಮೊಬೈಲ್ಸ್‌ನ ಮಾಲಕ ಅರವಿಂದ್ ಜೈನ್ ಉಪಸ್ಥಿತರಿದ್ದರು. ಆಗಮಿಸಿದ ಗಣ್ಯರನ್ನು, ಬಂಧು ಮಿತ್ರರನ್ನು ಸಂಸ್ಥೆಯ ಮಾಲಕ ಜೀತು ಸ್ವಾಗತಿಸಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.