ಹತ್ತು ಪ.ಪಂ ಕಾಲೋನಿ ರಸ್ತೆ ಕಾಂಕ್ರೀಟೀಕರಣಕ್ಕೆ ರೂ.1.65ಕೋಟಿ ಮಂಜೂರು: ಬಂಗೇರ

Laila kannena ST kaloni copyಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳ 10 ಪರಿಶಿಷ್ಟ ಪಂಗಡದ ಕಾಲನಿಗಳ ರಸ್ತೆ ಕಾಂಕ್ರಿಟೀಕರಣಕ್ಕೆ ಸರಕಾರ ರೂ.1.65 ಕೋಟಿ ಮಂಜೂರು ಗೊಳಿಸಿದ್ದು, ಶಾಸಕ ಕೆ.ವಸಂತ ಬಂಗೇರ ಅವರು ಮೇ 5ರಂದು ಈ ರಸ್ತೆಗಳ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ, ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿದರು.
ಮಂಜೂರಾದ ಕಾಮಗಾರಿಗಳ ವಿವರ: ಮಲವಂತಿಗೆ ಗ್ರಾಮದ ಪರಂಬೇರು ಪರಿಶಿಷ್ಟ ಪಂಗಡದ ಕಾಲೋನಿಗೆ ಕಾಂಕ್ರೀಟ್ ರಸ್ತೆ ರೂ.20ಲಕ್ಷ, ಇಂದಬೆಟ್ಟು ಗ್ರಾಮದ ಪಾಲೇದಬೆಟ್ಟು -ಪರಿಯಾರ ಪರಿಶಿಷ್ಟ ಪಂಗಡದ ಕಾಲೋನಿ ರಸ್ತಗೆ ಕಾಂಕ್ರಿಟೀಕರಣ ರೂ.20ಲಕ್ಷ, ನಾವೂರು ಗ್ರಾಮದ ಪುಳಿತ್ತಡಿ- ಮುತ್ತಾಜೆ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಕಾಂಕ್ರಿಟೀಕರಣ ರೂ.20ಲಕ್ಷ, ನಡ ಗ್ರಾಮದ ಬೋಜಾರ ಪರಿಶಿಷ್ಟ ಪಂಗಡದ ಕಾಲೋನಿ ರಸ್ತೆ ಕಾಂಕ್ರೀಟೀಕರಣ ರೂ. 20ಲಕ್ಷ, ಲಾಲ ಗ್ರಾಮದ ಬರೆಂಗಾಡಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಕಾಂಕ್ರಿಟೀಕರಣ ರೂ.20ಲಕ್ಷ, ಲಾಲ ಗ್ರಾಮದ ಕಕ್ಯೇನ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಕಾಂಕ್ರಿಟೀಕರಣ ರೂ.20ಲಕ್ಷ, ಸವಣಾಲು ಗ್ರಾಮದ ಕುಕ್ಕುಜೆ -ಅಲಂಬು- ಹನ್ಯಾಡಿ ಪರಿಶಿಷ್ಟ ಪಂಗಡದ ಕಾಲೋನಿ ರಸ್ತೆ ಕಾಂಕ್ರಿಟೀಕರಣ ರೂ.20ಲಕ್ಷ, ನಡ ಗ್ರಾಮದ ಕಂಬುಜೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಕಾಂಕ್ರೀಟೀಕರಣ ರೂ. 25 ಲಕ್ಷ, ಸವಣಾಲು ಗ್ರಾಮದ ಇತ್ತಿಲ-ಪೇಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಕಾಂಕ್ರೀಟೀಕರಣ ರೂ.20ಲಕ್ಷ, ಮೊಗ್ರು ಗ್ರಾಮದ ಕರಂಬಾರು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಕಾಂಕ್ರಿಟೀಕರಣ ರೂ.20ಲಕ್ಷ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.