ಕಡಿರುದ್ಯಾವರ : ಅಡಿಕೆ ತೋಟಕ್ಕೆ ಕಾಡಾನೆಗಳ ಗುಂಪು ದಾಳಿ

  kadirudayavara kadane.1ಕಡಿರುದ್ಯಾವರ : ಮೆ 3ರಂದು ಕಡಿರುದ್ಯಾವರ ಗ್ರಾಮದ ಕಡ್ತಿಕುಮೆರು ಎಂಬಲ್ಲಿ ರತ್ನವತಿ ದೇವಯ್ಯ ಗೌಡರ ಅಡಿಕೆ ತೋಟಕ್ಕೆ ೩ ಕಾಡಾನೆಗಳ ಗುಂಪು ದಾಳಿ ನಡೆಸಿ ಅಡಿಕೆ ಮರಗಳನ್ನು ಬುಡ ಸಮೇತ, ಅರ್ಥಕ್ಕೆ ಮುರಿದು ಮತ್ತು ಬಾಳೆ ಮತ್ತು ತೆಂಗಿನ ಗಿಡಗಳನ್ನು ನಾಶ ಪಡಿಸಿದ್ದು, ಅಪಾರ ಪ್ರಮಾಣದ ಆರ್ಥಿಕ ನಷ್ಟವಾಗಿದ್ದು, ಬೆಳ್ತ ಂಗಡಿ ವಲಯ ಅರಣ್ಯಾಧಿಕಾರಿಗಳಾದ ಹೆಚ್ ಸುಂದರ ಶೆಟ್ಟಿ ಮತ್ತು ಸಿಬ್ಬಂದಿಯವರು ಕಾಡಾನೆಗಳಿಂದ ಹಾನಿಗೊಳಗಾಗಿ ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಗಳಿಂದ ನಾಶಕ್ಕೆ ಒಳಗಾದ ಕೃಷಿಗೆ ಪರಿಹಾರ ನೀಡಲು ಕ್ರಮಕೈಗೊಂಡಿರುತ್ತಾರೆ. ನಂತರ ಸ್ಥಳೀಯ ಗ್ರಾಮಸ್ಥರು ಈ ಭಾಗದಲ್ಲಿ ಯಾವಾಗಲೂ ಕಾಡಾನೆಗಳು ಪದೇ ಪದೇ ಬಂದು ಕೃಷಿಯನ್ನು ನಾಶಮಾಡುತ್ತಿದ್ದು ಕಾಡಾನೆಗಳು ನಾಡಿಗೆ ಭಾರದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.