ಗ್ರಾ. ಪಂ. ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳಿಗೆ ನೀರಿಂಗಿಸುವ ಯೋಜನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Madanthyaru grama sabhe copy ಮಡಂತ್ಯಾರು : ಮಡಂತ್ಯಾರು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷ ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಮೇ.೨ರಂದು ಪಂಚಾಯತು ಸಭಾ ಭವನದಲ್ಲಿ ಜರುಗಿತು.
ಉಪಾಧ್ಯಕ್ಷೆ ಶ್ರೀಮತಿ ಜಯಂತಿ, ಜಿ.ಪಂ ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ, ತಾ.ಪಂ ಸದಸ್ಯೆ ವಸಂತಿ, ನೋಡೆಲ್ ಅಧಿಕಾರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ, ಗ್ರಾ.ಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಭಾರ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಅವರು ಸ್ವಾಗತಿಸಿ, ಗತ ಸಭೆಯ ವರದಿ, ವಾರ್ಡ್ ಸಭೆಯ ಬೇಡಿಕೆಗಳು, ಜಮಾ-ಖರ್ಚಿನ ವಿವರಗಳುಳ್ಳ ವರದಿ ವಾಚಿಸಿದರು.
ಮಡಂತ್ಯಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು. ಬೇರ್ಕಳ ಪ್ರದೇಶದಲ್ಲಿ ನೀರು ಪೂರೈಕೆ ಸಮರ್ಪಕವಾಗಿಲ್ಲ, ಟ್ಯಾಂಕ್ ಮೂಲಕ ನೀರು ಪೂರೈಸಿ ಎಂದು ಕೆ.ಎ ಸಾಲು ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆಯಿತ್ತರು. ಪಂಚಾಯತು ವ್ಯಾಪ್ತಿಯಲ್ಲಿ ಕೊಳವೆ ಬಾವಿಯನ್ನು ಕೊರೆದು ನೀರು ಕೊಡಲಾಗುತ್ತಿದೆ. ಅಲ್ಲದೆ ಖಾಸಗಿಯವರ ಕೊಳವೆ ಬಾವಿಗಳಿವೆ. ಆದರೆ ಭೂಮಿಗೆ ನೀರು ಇಂಗಿಸುವ ಕೆಲಸಗಳಾಗುತ್ತಿಲ್ಲ ಇದರ ಬಗ್ಗೆ ಯೋಜನೆ ರೂಪಿಸಿ ಎಂದು ಮಾಜಿ ಅಧ್ಯಕ್ಷ ಶೈಲೇಶ್ ಸಲಹೆಯಿತ್ತರು.
ಪಂಚಾಯತು ವ್ಯಾಪ್ತಿಯಲ್ಲಿ ಕೊಳವೆ ಬಾವಿಗೆ ನೀರಿಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ೪ ಕಡೆಗಳಲ್ಲಿ ಇದನ್ನು ಪಂಚಾಯತು ವತಿಯಿಂದ ಮಾಡಲಾಗಿದೆ ಎಂದ ಪಿಡಿಒ ಇಮ್ತಿಯಾಜ್ ಅವರು ವೈಯಕ್ತ ಕೊಳವೆ ಬಾವಿಗೆ ನೀರಿಂಗಿಸುವ ಕಾರ್ಯಕ್ರಮಕ್ಕೆ ಸಹಾಯ ನೀಡುವುದಾಗಿ ತಿಳಿಸಿದರು. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಾರ್ವಜನಿಕ ಕೆರೆಯಿದೆ ಮಡಂತ್ಯಾರು ಗ್ರಾ.ಪಂ ವ್ಯಾಪ್ತಿಯಲ್ಲಿಯೂ ಸಾರ್ವಜನಿಕ ಕೆರೆ ನಿರ್ಮಿಸಲು ಅರ್ಧ ಎಕ್ರೆ ಜಾಗ ಮೀಸಲಿಡುವಂತೆ ರಿಚ್ಚರ್ಡ್ ರೊಡ್ರಿಗಸ್ ಸಲಹೆಯಿತ್ತರು.
ಗ್ರಾಮ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಬರಬೇಕು ಎಂದು ಕಳೆದ ಗ್ರಾಮ ಸಭೆಯಲ್ಲಿ ಹೇಳಿದೆ. ಇಂದಿನ ಸಭೆಗೆ ಹೆಚ್ಚಿನ ಅಧಿಕಾರಿಗಳು ಬಂದಿಲ್ಲ ಅವರನ್ನು ಸಭೆಗೆ ಕರೆಸುವ ಕೆಲಸ ನೋಡೆಲ್ ಅಧಿಕಾರಿ ಮಾಡಬೇಕು ಎಂದು ರಾಜಶೇಖರ್ ಶೆಟ್ಟಿ ಒತ್ತಾಯಿಸಿದರು. ಈ ಸಂದರ್ಭ ನೋಡೆಲ್ ಲಕ್ಷ್ಮಣ ಶೆಟ್ಟಿಯವರು ಮಾತನಾಡಿ ಸಭೆಗೆ ಆರು ಇಲಾಖೆಯ ಅಧಿಕಾರಿಗಳು ಬಂದಿಲ್ಲ. ಅವರಿಗೆ ನೋಟೀಸು ನೀಡಿ ಮುಂದಿನ ಸಭೆಗೆ ಬರುವಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಮೆಸ್ಕಾಂನಿಂದ ಪುಂಜಾಲಕಟ್ಟೆ-ಮಂಜಲಪಲ್ಕೆ ಲಿಂಕ್ ಕೊಡುವುದು, ಮಡಂತ್ಯಾರು ಪೇಟೆಯಲ್ಲಿ ರಿಕ್ಷಾ ಪಾರ್ಕಿಂಗ್ ಬಳಿ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಇದನ್ನು ಸರಿಪಡಿಸುವುದು, ಸರಕಾರ ಕುಮ್ಕಿ ಭೂಮಿಯನ್ನು ರೈತರಿಗೆ ನೀಡಲು ಕ್ರಮ ಕೈಗೊಳ್ಳಬೇಕು, ಸಕಾಲದಲ್ಲಿ ನಿಗದಿತ ಅವಧಿಯೊಳಗೆ ದಾಖಲೆಗಳನ್ನು ಕೊಡಬೇಕು, ಕುಕ್ಕುಳ, ಪಾರೆಂಕಿ ಗ್ರಾಮವನ್ನು ಬೆಳ್ತಂಗಡಿ ಹೋಬಳಿಗೆ ಸೇರಿಸಬೇಕು, ಮಡಂತ್ಯಾರು ಪೇಟೆಯಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂಬ ಬೇಡಿಯನ್ನು ನಾಗರಿಕರು ಮಂಡಿಸಿದರು.
ಈ ವರ್ಷ ಮಚ್ಚಿನ ಹಿ.ಪ್ರಾ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿ ಆರಂಭ ಹಾಗೂ ಮಾಲಾಡಿ ಶಾಲೆಯಲ್ಲಿ ೮ ತರಗತಿ ಆರಂಭಗೊಳ್ಳಲಿದೆ ಎಂದು ಶಿಕ್ಷಣ ಸಂಯೋಜಕರು ಸಭೆಗೆ ತಿಳಿಸಿದರು. ಅರ್ತಿಲದಲ್ಲಿ ಇರುವ ಡ್ಯಾಮ್‌ನ ಅಡಿಯಲ್ಲಿದ್ದ ಕಲ್ಲನ್ನು ಸ್ಪೋಟಕ ಬಳಸಿ ತೆಗೆದಿರುವುದರಿಂದ ಈಗ ಡ್ಯಾಮ್‌ನಲ್ಲಿ ನೀರು ಸೋರುತ್ತಿದ್ದು, ಇಲ್ಲಿ ಇನ್ನೊಂದು ಡ್ಯಾಮ್ ನಿರ್ಮಿಸುವಂತೆ ಆ ಭಾಗದ ನಾಗರಿಕರು ಆಗ್ರಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.