ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ೨೦೧೫ರಲ್ಲಿ ಋಣಾತ್ಮಕ ಪಥದಲ್ಲಿದೆ ಎಂಬುದಾಗಿ ಹೇಳಿರುವ ಅಮೆರಿಕದ ವರದಿಗೆ ಭಾರತ ಪ್ರಬಲವಾಗಿ ಪ್ರತಿಕ್ರಿಯಿಸಿದೆ. ಭಾರತ, ಭಾರತದ ಸಂವಿಧಾನ ಮತ್ತು ಸಮಾಜವನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳುವಲ್ಲಿ ವರದಿ ವಿಫಲವಾಗಿದೆ ಎಂದು ಭಾರತ ಹೇಳಿದೆ. ಯುಎಸ್ಸಿಐಆರ್ಎಫ್ನಂತಹ ವಿದೇಶೀ ಸಂಸ್ಥೆಗೆ ಭಾರತೀಯ ನಾಗರಿಕರ ಸಂವಿಧಾನಬದ್ಧವಾಗಿ ರಕ್ಷಿಸಲಾದ ಹಕ್ಕುಗಳ ಸ್ಥಿತಿಗತಿ ಬಗ್ಗೆ ಪ್ರಕಟಿಸಲು ಯಾವುದೇ ಅಧಿಕಾರ ಇದೆ ಎಂದು ಸರ್ಕಾರ ಭಾವಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.