ಉಲ್ಟಾ ಹೊಡೆದ ಪಾಕ್

ಪಾಕಿಸ್ತಾನಕ್ಕೆ ಎಫ್-೧೬ ಯುದ್ಧ ವಿಮಾನಗಳನ್ನು ಪೂರೈಸುವ ಕುರಿತು ಅಮೆರಿಕ ಪೂರ್ತಿ ಹಣ ಪಾವತಿಸಿ ವಿಮಾನಗಳನ್ನು ಖರೀದಿ ಮಾಡಿ ಎಂದು ತಾಕೀತು ಮಾಡಿದ ಬೆನ್ನಲ್ಲೇ, ಪಾಕಿಸ್ತಾನ ತಮಗೆ ವಿಮಾನ ಪೂರೈಸದಿದ್ದರೆ ಬೇರೆಡೆಯಿಂದ ಪಡೆಯುತ್ತೇವೆ ಎಂದು ಅಮೇರಿಕಾಗೆ ಮರು ಉತ್ತರ ನೀಡಿದೆ. ಪಾಕಿಸ್ಥಾನಕ್ಕೆ ಎಫ್-೧೬ ಯುದ್ಧ ವಿಮಾನಗಳನ್ನು ಮಾರುವ ಕುರಿತು ಅಮೆರಿಕ ಸಂಸತ್ತಿನ ಒಪ್ಪಿಗೆ ಇದೆ. ಆದರೆ ಇದಕ್ಕಾಗಿ ವಿದೇಶ ಸೇನಾ ನಿಧಿಯನ್ನು ಬಳಸುವುದಕ್ಕೆ ಕೆಲವು ಪ್ರಮುಖ ಸದಸ್ಯರ ವಿರೋಧವಿದೆ. ಆದ್ದರಿಂದ ಪಾಕಿಸ್ತಾನ ತನ್ನ ರಾಷ್ಟ್ರೀಯ ನಿಧಿಯನ್ನು ಬಳಸಿಕೊಂಡು ಪ್ರಸ್ತಾವಿತ ಎಫ್-೧೬ ಯುದ್ಧ ವಿಮಾನಗಳನ್ನು ಖರೀದಿಸಬೇಕು ಎಂದು ಎಂದು ಅಮೆರಿಕದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಜಾನ್ ಕರ್ಬಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.