ಮಳೆಗಾಗಿ ಕೃತಕ ಪರ್ವತ

ತೈಲ ಶ್ರೀಮಂತಿಕೆಯ ಉತ್ತುಂಗದಲ್ಲಿರುವ ದುಬೈ, ಇದೀಗ, ಮಳೆಯತ್ತ ಹೆಚ್ಚು ಗಮನ ಹರಿಸುತ್ತಿದೆ. ಮೋಡ ಬಿತ್ತನೆಗೆ ಕೋಟಿ ಕೋಟಿ ಸುರಿದ ದುಬೈ ದೊರೆಗಳು ಕೃತಕ ಪರ್ವತವನ್ನೇ ನಿರ್ಮಿಸುವತ್ತ ಚಿತ್ತ ಹರಿಸಿದ್ದಾರೆ. ಅಮೆರಿಕ ಮೂಲದ ನ್ಯಾಶನಲ್ ಸೆಂಟರ್ ಫಾರ್ ಅಟ್ಮಾಸ್ಪಿಯರ್ ರಿಸರ್ಚ್ ಸಂಸ್ಥೆ ಈ ಯೋಜನೆಯ ಮಾದರಿ ನಿರ್ಮಾಣದ ಹೊಣೆ ಹೊತ್ತಿದೆ. ವಿಜ್ಞಾನಿ, ಸಂಶೋಧಕ ರೋಲಫ್ ಬ್ರೂಂಟ್ಜೆಸ್ ಈ ಯೋಜನೆಯ ನೇತೃತ್ವ ವಹಿಸಿದ್ದಾರೆ. ಪರ್ವತಗಳಿಂದ ವಾತಾವರಣದ ಮೇಲಾಗುವ ಪರಿಣಾಮದ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಎಷ್ಟು ಎತ್ತರವಾಗಿರಬೇಕು, ಎಷ್ಟು ಇಳಿಜಾರಾಗಿರಬೇಕೆಂಬ ಬಗ್ಗೆ ಆಳವಾದ  ಅಧ್ಯಯನ ನಡೆಸುತ್ತಿದ್ದೇವೆ, ದುಬೈನ ನ್ಯಾಶನಲ್ ಸೆಂಟರ್ ಆಫ್ ಮೀಟಿರೋಲಜಿ & ಸೈಸ್ಮೋಲಜಿ ಸಹಯೋಗದೊಂದಿಗೆ ಈ ಯೋಜನೆ ನಡೆಯುತ್ತಿದ್ದು ಇದಕ್ಕಾಗಿ ಈಗಾಗಲೇ ೨೪೦ ಕೋಟಿ ರೂಪಾಯಿಗಳನ್ನು ಸಹ ಸಂಶೋಧನಾ ಸಂಸ್ಥೆ ಪಡೆದುಕೊಂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.