ಬೆಳಾಲು ಗ್ರಾಮಸಭೆ: ಕುಡಿಯುವ ನೀರಿಗೆ ಮೊದಲ ಆಧ್ಯತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

belal grama sabhe

 ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಸೇರಿದಂತೆ ದ. ಕ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ತುರ್ತು ಪರಿಹಾರಕ್ಕಾಗಿ ಮುಂದಿನ ಕೆಲವಾರು ದಿನಗಳಲ್ಲಿ ಖಾಸಗಿಯವರ ನೀರಿನ ಸ್ಥಾವರ, ಕೊಳವೆ ಬಾವಿ ಹಾಗೂ ಇನ್ನಿತರ ಜಲಮೂಲಗಳನ್ನು ನಿಯಮಾನುಸಾರ ವಶಪಡಿಸಿಕೊಂಡು ಪರಿಹಾರ ವ್ಯವಸ್ಥೆಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಆದೇಶಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮೇ. ೨ ರಂದು ನಡೆದ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿಶೇಷ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ:
ಕುಡಿಯುವ ನೀರಿನ ಸೌಲಭ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸರಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲ. ಕೊಳವೆ ಬಾವಿ ಕೊರೆದಿದ್ದೇವೆ ಎಂದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಿ ವ್ಯವಸ್ಥೆ ಏನು ಮಾಡಲಾಗಿದೆ ಎಂಬುದು ಮುಖ್ಯ. ಸಬೂಬು ಹೇಳಲು ಈ ಸಭೆ ಕರೆದಿಲ್ಲ. ಪರಿಹಾರ ಕೇಳಲು ಕರೆಯಲಾಗಿದೆ. ಮೆಸ್ಕಾಂ, ಇಂಜಿನಿಯರಿಂಗ್ ವಿಭಾಗ ಮತ್ತು ಪಿಡಿಒ ಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಕೊಳವೆ ಬಾವಿ ಸಂಪರ್ಕಕ್ಕೆ ಬೇಕಾದ ವಿದ್ಯುತ್ ಕಾಮಗಾರಿಗಳನ್ನು ವಿಳಂಬ ಮಾಡದೆ ತಕ್ಷಣ ಮಾಡಬೇಕು. ಇಲಾಖಾ ಪತ್ರವ್ಯವಹಾರಗಳು ಮತ್ತೆ ನಡೆಯಲಿ. ಅಲ್ಲದೆ ಸಲಕರಣೆಗಳ ಕೊರತೆ ಇದೆ ಎಂದು ಅಧಿಕಾರಿಗಳು ಸಬೂಬು ಹೇಳಬಾರದು. ಖಾಸಗಿಯವರಿಂದ ಖರೀದಿಸಿದಲ್ಲಿ ಸರಕಾರ ಅದರ ಬಿಲ್ಲು ಪಾವತಿಸಲಿದೆ ಎಂದು ಸಚಿವರು ತಿಳಿಸಿದರು.
ಗುತ್ತಿಗೆದಾರರಿಗೆ ಸರಕಾರದಿಂದ ಹಣ ಪಾವತಿಗೆ ಬಾಕಿ ಇಲ್ಲ. ಕುಡಿಯುವ ನೀರಿನ ಹೆಚ್ಚಿನ ಸಮಸ್ಯೆ ಇರುವುದು ಮಂಗಳೂರು ತಾಲೂಕು. ಎರಡನೇ ಸಮಸ್ಯೆ ಬಂಟ್ವಾಳಕ್ಕೆ. ಮೂರನೇ ಪಟ್ಟಿಯಲ್ಲಿ ಬೆಳ್ತಂಗಡಿ ತಾಲೂಕು ಇದೆ. ಸುಳ್ಯ ಕೊನೆಯಲ್ಲಿದೆ ಎಂದ ಸಚಿವರು, ಜನರಿಗೆ ನೀರಿನ ಸಮಸ್ಯೆ ಪರಿಹಾರಕ್ಕೆ ಉದಾಸೀನ ತೋರುವ ಅಧಿಕಾರಿಗಳನ್ನು ನಿರ್ದಾಕ್ಷೀಣ್ಯವಾಗಿ ಕ್ರಮಕ್ಕೆ ಒಳಪಡಿಸಲಾಗುವುದು ಎಂದರು.
ರಾಜ್ಯದ ನಮ್ಮ ೩ ಜಿಲ್ಲೆಗಳು ಮಾತ್ರ ಬರಪೀಡಿತ ಎಂದು ಘೋಷಿಸಲು ಬಾಕಿ: ಡಿ. ಸಿ ಇಬ್ರಾಹಿಂ
ರಾಜ್ಯದ ೨೭ ಜಿಲ್ಲೆಗಳನ್ನು ಈಗಾಗಲೇ ಬರಪೀಡಿತ ಜಿಲ್ಲೆಗಳು ಎಂದು ಘೋಷಿಸಿ ಆಗಿದೆ. ದ. ಕ, ಉಡುಪಿ ಮತ್ತು ಕೊಡಗು ಮಾತ್ರ ಬಾಕಿ ಇದೆ. ೧೭೦ ತಾಲೂಕುಗಳ ಪೈಕಿ ೧೩೦ ತಾಲೂಕುಗಳು ಬರಪೀಡಿತವಾಗಿದೆ. ನೀರಿನ ಸಮಸ್ಯೆ ಹಿಂದೆಂದೂ ಕಂಡುಕೇಳರಿಯದ ರೀತಿಯಲ್ಲಿ ಆಗಿದ್ದು ತಾಪಮಾನ ಕೂಡ ೪೦ ಡಿಗ್ರಿ ಸೆಲ್ಸಿಯಸ್ ಮೇಲ್ಪಟ್ಟಿದೆ ಎಂದ ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ ಅವರು. ಪಂಚಾಯತ್ ನೀರಿನ ಮೂಲದ ಪಕ್ಕದಲ್ಲಿ ಖಾಸಗಿಯವರು ಕೊರೆದಿರುವ ಕೊಳವೆ ಬಾವಿಯಿಂದಾಗಿ ಸರಕಾರದ ಕೊಳವೆ ಬಾವಿಗೆ ತೊಂದರೆಯಾಗಿದ್ದಲ್ಲಿ ಅಂತಹ ಕೊಳವೆ ಬಾವಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಈ ರೀತಿ ಖಾಸಗಿಯವರಿಗೆ ಅನುಮತಿ ನೀಡಿದ್ದೇ ತಪ್ಪು ಎಂದು ಪಿಡಿಒಗಳನ್ನು ಎಚ್ಚರಿಸಿದರು.
೩೬ ಬೇಡಿಕೆ, ೩೪ ಕ್ಕೆ ಪರಿಹಾರ, ೪೧ ಕಾಮಗಾರಿಗೆ ಮಂಜೂರಾತಿ ಸಿಕ್ಕಿದೆ: ಇಒ
ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸೂರ್ಯನಾರಾಯಣ ಭಟ್ ಮಾತನಾಡಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ೩೬ ದೂರುಗಳು ಬಂದಿದ್ದು ೩೪ನ್ನು ಪಂಚಾಯತ್ ಮಟ್ಟದಲ್ಲೇ ಪರಿಹರಿಸಲಾಗಿದೆ. ೨ ಪ್ರಕರಣಗಳು ಹೆಚ್ಚಿನ ಸಮಸ್ಯೆಗಳಾಗಿರುವುದರಿಂದ ತನಿಖೆ ಹಂತದಲ್ಲಿದೆ. ಟಾಸ್ಕ್‌ಫೊರ್ಸ್ ನಲ್ಲಿ ೫೦ ಲಕ್ಷ ಅನುದಾನ ಬಂದಿದ್ದು ಈ ಪೈಕಿ ೧೨ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ೪೧ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದೆ ಎಂದರು.
ಓವರ್ ಹೆಡ್ ಟ್ಯಾಂಕ್‌ಗಳ ತನಿಖೆ ನಡೆಯಲಿ: ಶಾಸಕ ಬಂಗೇರ ಆಗ್ರಹ
ತಾಲೂಕಿನಲ್ಲಿ ಎಲ್ಲೆಲ್ಲಾ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಿಸಲಾಗಿದೆ ಅದೆಲ್ಲವೂ ಇಂಜಿನಿಯರ್‌ಗಳು ತಿಂದು ಹಾಕಿದ್ದಾರೆ. ಎಲ್ಲೆಲ್ಲಾ ಇದೆ ಮತ್ತು ಅದಕ್ಕೆಲ್ಲಾ ನೀರು ಹೋಗುತ್ತಿದೆಯೇ ಎಂದು ಕಿರಿಯ ಇಂಜಿನಿಯರ್‌ಗಳನ್ನು ಕೇಳಿ ಎಂದು ತಾಕೀತು ಮಾಡಿದ ಶಾಸಕ ವಸಂತ ಬಂಗೇರ ಅವರು, ಆ ಎಲ್ಲಾ ಕಾಮಗಾರಿಗಳ ತನಿಖೆಯಾಗಬೇಕು. ತಪ್ಪಿತಸ್ಥರನ್ನು ಅಮಾನತಿನಲ್ಲಿಡಬೇಕು. ಮೊದಲು ಸರಿಇಲ್ಲದೇ ಇರುವ ಟ್ಯಾಂಕಿಗಳನ್ನು ಕೆಡವಿ ನಂತರ ಇಂಜಿನಿಯರ್‌ಗಳನ್ನೂ ಕೆಡವಿಹಾಕಿ ಎಂದು ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ
ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಆಗ್ರಹಿಸಿದರು.
ಜಿ. ಪಂ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷೆ ಕಸ್ತೂರಿ ಪಂಜ, ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಪುತ್ತೂರು ಪ್ರಭಾರ ಎಸಿ ಪ್ರಮೀಳಾ, ತಹಶಿಲ್ದಾರ್ ಪ್ರಸನ್ನಮೂರ್ತಿ, ಉಪಸ್ಥಿತರಿದ್ದರು.
ಜಿ.ಪಂ ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಕೆ. ಕೆ ಶಾಹುಲ್ ಹಮೀದ್, ಕೊರಗಪ್ಪ ನಾಯ್ಕ, ಮಮತಾ ಎಂ ಶೆಟ್ಟಿ, ಸೌಮ್ಯಾಲತಾ ಮತ್ತು ಅಮಿತಾ ಇವರು ಉಪಸ್ಥಿತರಿದ್ದು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಹೇಳಿಕೊಂಡರು.
ಕುವೆಟ್ಟು ಪಂಚಾಯತ್‌ನ ಓಡಿಲ್ನಾಳ ಎಂಬಲ್ಲಿ ಪಂಚಾಯತ್ ಕೆಟ್ಟು ಹೋಗಿದೆ ಎಂದು ಘೋಷಿಸಿದ್ದ ಕೊಳವೆ ಬಾವಿಗೆ ಗ್ರಾಮಸ್ಥರೇ ಪಂಪು ಹಾಕಿ ನೀರು ಹೊರತೆಗೆದಿದ್ದಾರೆ ಎಂದು ಶಾಸಕರು ಗಮನಕ್ಕೆ ತಂದರು. ಅದಕ್ಕೆ ಉತ್ತರಿಸಿದ ಪಿಡಿಒ, ಆ ನೀರು ಟ್ಯಾಂಕಿಗೆ ಹೋಗುವುದಿಲ್ಲ. ೬ ಹೆಚ್.ಪಿ ಮೋಟಾರು ಆದರೂ ಬೇಕಾಗಬಹುದು. ಅಲ್ಲದೆ ಪಂಚಾಯತ್‌ನಿಂದ ಇಳಿಸಿದ ೨ ಪಂಪುಗಳಿಗೆ ತೊಂದರೆಯಾಗಿದೆ ಎಂದರು. ರೆಖ್ಯಾ, ಕಳೆಂಜ, ಅರಸಿನಮಕ್ಕಿ, ಅಂಡಿಂಜೆ, ಮಡಂತ್ಯಾರು, ಶಿಶಿಲ ಗ್ರಾಮದ ಮುಚ್ಚಿನಡ್ಕ ಎಸ್‌ಸಿ, ಎಸ್ಟಿ ಕಾಲನಿ, ತಣ್ಣೀರುಪಂತ, ಮೊದಲಾದೆಡೆ ಇರುವ ನೀರನ ಸಮಸ್ಯೆ ಬಗ್ಗೆ ಜಿ.ಪಂ ಸದಸ್ಯರಾದ ಶೇಖರ್ ಕುಕ್ಕೇಡಿ, ಕೊರಗಪ್ಪ ನಾಯ್ಕ, ಶಾಹುಲ್ ಹಮೀದ್, ಧರಣೇಂದ್ರ ಪಿ ಅವರು ಅಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉಮೇಶ್ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.

ಜೂನಿಯರ್ ಇಂಜಿನಿಯರ್ ತಿಪ್ಪೇಸ್ವಾಮಿ ಸಸ್ಪೆಂಡ್‌ಗೆ ಸಿಎಸ್‌ಗೆ ಸೂಚನೆ

ಉಸ್ತುವಾರಿ ಸಚಿವರಿಂದ ಪೂರ್ವ ನಿರ್ಧರಿತವಾಗಿದ್ದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಇದ್ದ ಸಭೆಗೆ ಪ್ರಾರಂಭದಲ್ಲಿ ಗೈರಾಗಿದ್ದ ಮೆಸ್ಕಾಂ ಇಇ ಉಮೇಶ್ಚಂದ್ರ ಅವರನ್ನು ಬಂಟ್ವಾಳದಿಂದ ಸಭೆಗೆ ಕರೆಸಲಾಯಿತು. ಈ ನಡುವೆ ಸಭೆಗೆ ಹಾಜರಾಗದೆ ರಜೆಯಲ್ಲಿ ತೆರಳಿದ್ದ ಜೂನಿಯರ್ ಇಂಜಿನಿಯರ್ ತಿಪ್ಪೇಸ್ವಾಮಿ ಅವರಿಗೆ ನೋಟೀಸು ಮಾಡುವಂತೆ ಪ್ರಾರಂಭದಲ್ಲಿ ಸೂಚಿಸಿದ ಸಚಿವರು, ಮತ್ತೆ ಮತ್ತೆ ಅವರ ಬಗ್ಗೆ ಸಭೆಯಲ್ಲಿ ದೂರುಗಳು ಕೇಳಿಬಂದಾಗ ಅವರನ್ನು ಅಮಾನತಿನಲ್ಲಿಡುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಅವರಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಅನುಮತಿ ಪಡೆಯದೆ ರಜೆ ಮಾಡುವಂತಿಲ್ಲ: ಸಿಎಸ್ ಶ್ರೀವಿದ್ಯಾ
ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಅವರು ಮಾತನಾಡಿ, ಮುಂದಿನ ೧೦- ೧೫ ದಿನಗಳಲ್ಲಿ ಪಿಡಿಒ ಸೇರಿದಂತೆ ಯಾವುದೇ ಅಧಿಕಾರಿಗಳು ಸಕಾರಣವಿಲ್ಲದೆ, ಸಂಬಂಧಪಟ್ಟವರಿಂದ ಅನುಮತಿ ಪಡೆಯದೆ ರಜೆ ಹಾಕಿ ತೆರಳು ವಂತಿಲ್ಲ. ಅಲ್ಲದೆ ರವಿವಾರ, ಸರಕಾರಿ ರಜೆ ಎಂಬಿತ್ಯಾದಿ ಕಾರಣ ನೀಡಿ ಕರೆ ಸ್ವೀಕರಿಸದೇ ಇರುವಂತಿಲ್ಲ ಎಂದು ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.