ಗದ್ದೆ-ತೋಟಕ್ಕೆ ಬೆಂಕಿ: ಸ್ಥಳೀಯರ ಸಮಯಪ್ರಜ್ಷೆಯಿಂದ ತಪ್ಪಿದ ಅನಾಹುತ

mukukodi totakke benki copy

ಮೂಡುಕೋಡಿ: ಮೂಡುಕೋಡಿ ಗ್ರಾಮದ ಅಲೆಕ್ಕಿ ವಸಂತ ಹೆಗ್ಡೆಯವರ ಗದ್ದೆ ಹಾಗೂ ಅಡಿಕೆ ತೋಟಕ್ಕೆ ಮೇ ೨ರಂದು ಬಿದ್ದ ಬೆಂಕಿಯನ್ನು ಬೆಳ್ತಂಗಡಿ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ನಂದಿಸಿದ್ದಾರೆ. ಸ್ಥಳೀಯವಾಗಿ ಕಾಡು ಪ್ರದೇಶ ಇದ್ದು, ಭಯಭೀತಗೊಂಡಿದ್ದ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ವೇಣೂರು ಗ್ರಾ.ಪಂ. ಸದಸ್ಯ ರಾಜೇಶ್ ಪೂಜಾರಿ ಮೂಡುಕೋಡಿ ಸ್ಥಳೀಯರೊಂದಿಗೆ ಕಾರ್ಯಾಚರಣೆಯಲ್ಲಿ ಸಹಕರಿಸಿದರು. ಅಗ್ನಿಶಾಮಕ ದಳ ತಲುಪುವಷ್ಟರಲ್ಲಿ ಭಾಗಶಃ ಬೆಂಕಿ ನಂದಿಸಲಾಗಿತ್ತು. ಪ್ರಭಾರ ಉಪ ಠಾಣಾಧಿಕಾರಿ ವಸಂತ ಗೌಡ, ಸಿಬ್ಬಂದಿಗಳಾದ ಚಾಕೋ ಕೆ.ಜಿ., ಉಸ್ಮಾನ್ ಹಾಗೂ ದಯಾನಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.