HomePage_Banner_
HomePage_Banner_
HomePage_Banner_

ಮಡಂತ್ಯಾರು: ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ

Advt_NewsUnder_1

Madanthyar Ambedkar jayanthi copyಮಡಂತ್ಯಾರು: ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಘಟಕ ಹಾಗೂ ಮಡಂತ್ಯಾರು ವಲಯ ಘಟಕದ ಸಂಯುಕ್ತ ಆಶ್ರಯದಲ್ಲಿ ಮಹಾಮಾನವತಾವಾದಿ, ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೨೫ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಎ.24ರಂದು ಮಡಂತ್ಯಾರು ಮಾರಿಗುಡಿ ಬಳಿಯ ಅಂಬೇಡ್ಕರ್ ಭವನದಲ್ಲಿ ಜರುಗಿತು.
ಕುವೆಟ್ಟು ಜಿ.ಪಂ.ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಮಡಂತ್ಯಾರು ವಲಯ ಘಟಕದ ಅಧ್ಯಕ್ಷ ಮುತ್ತು ಪಾಂಡಿ ಅಧ್ಯಕ್ಷತೆ ವಹಿಸಿದ್ದರು. ದಿಕ್ಸೂಚಿ ಭಾಷಣ ಮಾಡಿದ ಪುಂಜಾಲಕಟ್ಟೆ ಆರಕ್ಷಕ ಠಾಣೆಯ ಆರಕ್ಷಕರಾದ ವೆಂಕಪ್ಪ ಪಿ.ಎಸ್.ರವರು ಅಂಬೇಡ್ಕರ್‌ರವರು ಕೇವಲ ಒಂದು ವ್ಯಕ್ತಿಯಲ್ಲ ಅದೊಂದು ಶಕ್ತಿ. ಮಾನವತೆಯ ಸಾಕಾರ ಮೂರ್ತಿ. ಅವರ ಹೋರಾಟದ ಚರಿತ್ರೆಯನ್ನು ಯುವ ಸಮೂಹ ಅಧ್ಯಯನ ಮಾಡಬೇಕು. ಶೋಷಿತರ ದಮನಿತರ ಧ್ವನಿಯಾದ ಅಂಬೇಡ್ಕರ್‌ರವರು ನಿಜಕ್ಕೂ ವಿಶ್ವರತ್ನ ಎನ್ನುತ್ತಾ ಅವರ ಹೋರಾಟದ ಚರಿತ್ರೆಯನ್ನು ಮನೋಜ್ಞವಾಗಿ ವಿವರಿಸಿದರು. ಮುಖ್ಯ ಅತಿಥಿಯಾಗಿದ್ದ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ವಾಣಿ ಪೆರಿಯೋಡಿಯವರು ಅಂಬೇಡ್ಕರ್‌ರವರು ಮಹಿಳೆಯರಿಗೆ ನೀಡಿದ ಸಂವಿಧಾನಾತ್ಮಕ ಕೊಡುಗೆಗಳ ಬಗ್ಗೆ ವಿವರಿಸುತ್ತಾ ಅಸ್ಪ್ರಶ್ಯತೆ ಎನ್ನುವುದು ಒಂದು ಸಾಮಾಜಿಕ ಪಿಡುಗು ಎಂದರು. ಅಳದಂಗಡಿ ಜಿ.ಪಂ.ಸದಸ್ಯ ಶೇಖರ್ ಕುಕ್ಕೇಡಿ, ಮಡಂತ್ಯಾರು ತಾ.ಪಂ. ಸದಸ್ಯೆ ಶ್ರೀಮತಿ ವಸಂತಿ ಲಕ್ಷ್ಮಣ ಕುಲಾಲ್, ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ, ಮಡಂತ್ಯಾರು ಗ್ರಾ.ಪಂ.ಸದಸ್ಯ ಕಿಶೋರ್ ಶೆಟ್ಟಿ ಮೂಡಾಯೂರು, ತಾಲೂಕು ಘಟಕದ ಗೌರವಾಧ್ಯಕ್ಷ ಸೋಮ ಕೆ., ಪ್ರಧಾನ ಕಾರ್ಯದರ್ಶಿ ಶರತ್ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಬ್ಯಾಂಕ್ ಮೆನೇಜರ್ ಅಮ್ಮು ಕುಮಾರ್, ಮಮತಾ ಎಂ. ಶೆಟ್ಟಿ, ಶೇಖರ್ ಕುಕ್ಕೇಡಿ, ವಸಂತಿ ಲಕ್ಷ್ಮಣ ಕುಲಾಲ್, ಸೋಮ ಕೆ., ವೆಂಕಪ್ಪ ಪಿ.ಎಸ್., ಶ್ರೀಮತಿ ಅಂಬಿಕಾ ಇವರುಗಳನ್ನು ಸನ್ಮಾನಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಗಾರರಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಸಂಶೋಧಕ ಯಶು ಕುಮಾರ್‌ರವರು ಆದಿದ್ರಾವಿಡ ಸಮಾಜದ ಅವಳಿ ವೀರ ಪುರುಷರಾದ ಕಾನದ ಕಟದರು ಶೋಷಣೆಯ ವಿರುದ್ದ ಹೋರಾಡಿದ ವೀರಗಾಥೆಯನ್ನು ವಿವರಿಸಿ ಅವರ ಹೋರಾಟದ ಇತಿಹಾಸಗಳನ್ನು ತಿಳಿಯುವ ಪ್ರಯತ್ನ ಮಾಡದಿರುವುದು ಖೇದಕರ ಎಂದರು. ಇನ್ನೋರ್ವ ಮುಖ್ಯ ಭಾಷಣಗಾರರಾದ ಆಳ್ವಾಸ್ ಕಾಲೇಜಿನ ಎಂ.ಎಸ್. ಡಬ್ಲ್ಯೂ. ವಿದ್ಯಾರ್ಥಿನಿ ಕು| ಅನ್ವಯ ಎಂ. ಮಾತನಾಡಿ ಯುವ ಶಕ್ತಿಯನ್ನು ಜಾಗೃತಗೊಳಿಸಲು ಜಾತಿ ಸಂಘಟನೆಗಳು ಕಾರ್ಯಕ್ರಮ ರೂಪಿಸಬೇಕು ಎಂದರು. ತಾಲೂಕು ಘಟಕದ ಅಧ್ಯಕ್ಷ ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಸಂ.ಸ ತಾಲೂಕು ಶಾಖೆಯ ಸಂಚಾಲಕ ರಮೇಶ್ ಆರ್., ಆ.ಸ.ಸೇ.ಸಂಘ ತಾಲೂಕು ಘಟಕದ ಉಪಾಧ್ಯಕ್ಷ ದಿನೇಶ್ ಕೆ., ಮಂಗಳೂರು ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಶ್ರೀಮತಿ ಅಂಬಿಕಾ, ಮಾಲಾಡಿ ಅಂಬೇಡ್ಕರ್ ಜನ್ಮದಿನಾಚರಣಾ ಸಮಿತಿ ಅಧ್ಯಕ್ಷ ಸುಕೇಶ್ ಹಾಗೂ ಸ್ವ ಸಹಾಯ ಗುಂಪುಗಳ ಅಧ್ಯಕ್ಷರುಗಳಾದ ಆನಂದ, ಶ್ರೀಮತಿ ಚಂಪಾ, ಶ್ರೀಮತಿ ಪ್ರಮೀಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಘಟಕಗಳ ಸದಸ್ಯರಿಂದ ’ನೃತ್ಯ ವೈಭವ’ ಮತ್ತು ರಾತ್ರಿ ಯುವ ಪ್ರತಿಭೆಗಳಿಂದ ’ಗಾನ ಮಾಧುರ್ಯ’ ರಸಮಂಜರಿ ಜರುಗಿತು. ತಾಲೂಕು ಘಟಕದ ಪದಾಧಿಕಾರಿಗಳು, ಧರ್ಮಸ್ಥಳ ಹಾಗೂ ವಿವಿಧ ವಲಯ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾದರು. ಉಮೇಶ್ ಎಂ. ಹಾಗೂ ಶ್ರೀಮತಿ ಅನಿತಾ ಸ್ವಾಗತಿಸಿದರು. ಶ್ರೀಮತಿ ಸುಮಿತ್ರಾ ಮತ್ತು ಅಮೃತ್ ಧನ್ಯವಾದವಿತ್ತರು. ಗೋಪಾಲಕೃಷ್ಣ ಕೆ. ಹಾಗೂ ಶ್ರೀಮತಿ ಲೀಲಾವತಿ, ಉಮೇಶ್ ಎಂ. ಕಾರ್ಯಕ್ರಮ ನಿರೂಪಿಸಿದರು.
ವರದಿ: ಜಿ.ಕೆ. ಮಡಂತ್ಯಾರು. ಚಿತ್ರ: ಕಾರ್ತಿಕ್ ಧರ್ಮಸ್ಥಳ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.