HomePage_Banner_
HomePage_Banner_
HomePage_Banner_

ಲಾಯಿಲ ಬೃಹತ್ ರಕ್ತದಾನ ಶಿಬಿರ

Advt_NewsUnder_1

kabaddi 1

kabaddi 3ಲಾಯಿಲ: ಉತ್ಸಾಹಿ ಯುವಕ ಮಂಡಲ (ರಿ) ಲಾಯಿಲ ಮತ್ತು ವರುಣ್ ಟ್ರಾವೆಲ್ಸ್, ಬೆಳ್ತಂಗಡಿ ಇದರ ಆಶ್ರಯದಲ್ಲಿ ದ.ಕ., ಉಡುಪಿ, ಕೊಡಗು ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಉತ್ಸಾಹಿ-ವರುಣ್ ಟ್ರೋಪಿ- 2016 ಹಾಗೂ ಬೃಹತ್ ರಕ್ತದಾನ ಶಿಬಿರ ಮತ್ತು ಸಾಂಸ್ಕೃತಿಕ ವೈಭವವು ಲಾಯಿಲ ಪಡ್ಲಾಡಿ ಶಾಲಾ ವಠಾರದಲ್ಲಿ ಎ. 30ರಂದು ನಡೆಯಿತು.
ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ನೆರವೇರಿಸಿದರು. ಅಧ್ಯಕ್ಷತೆಯನ್ನು ಲಾಯಿಲ ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ವೀಣಾ ರಾವ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಮೇ| ಜ| ಎಂ.ವಿ. ಭಟ್, ಲಾಯಿಲ ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ಎಸ್.ಕೆ.ಡಿ.ಆರ್.ಡಿ.ಪಿ ಮೇಲ್ವಿಚಾರಕ ಸುರೇಶ್ ಹಾಗೂ ಗೌರವ ಉಪಸ್ಥಿತಿಯಲ್ಲಿ ಲಾಯಿಲ ಗ್ರಾ.ಪಂ. ಸದಸ್ಯ ಕೃಷ್ಣಪ್ಪ ಪೂಜಾರಿ, ಲಾಯಿಲ ಗ್ರಾ.ಪಂ. ಸದಸ್ಯ ಶ್ರೀಮತಿ ಅಮಿತಾ, ಲಾಯಿಲ ಗ್ರಾ.ಪಂ. ಸದಸ್ಯ ಶ್ರೀಮತಿ ಆಶಾ ಸಲ್ಡಾನ, ಪಡ್ಲಾಡಿ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ನಿರಂಜನ್ ಜೈನ್, ಲಾಯಿಲ ಉತ್ಸಾಹಿ ಯುವಕ ಮಂಡಲ ಅಧ್ಯಕ್ಷ ಹರೀಶ್ ಎಲ್. ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕಿನ ರಾಮಚಂದ್ರ ಉಪಸ್ಥಿತರಿದ್ದರು.
ಗಿರೀಶ್ ಡೊಂಗ್ರೆ ಪ್ರಸ್ತಾವಿಕ ಮಾತನಾಡಿದರು. ಜಯಾನಂದ ಕಾರ್ಯಕ್ರಮ ನಿರೂಪಿಸಿದರು. ರುಕ್ಮಯ್ಯ ಕನ್ನಾಜೆ ಧನ್ಯವಾದವಿತ್ತರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.