ಅಂಡಿಂಜೆ: ವಿಶೇಷ ಗ್ರಾಮ ಸಭೆ

andinje vishesa grama shabe copy ಅಂಡಿಂಜೆ : ಗ್ರಾಮೋದಯದಿಂದ ಭಾರತ ಉದಯ ಅಭಿಯಾನ ರಾಷ್ಟ್ರೀಯ ಪಂಚಾಯತು ದಿವಸ ನಮ್ಮ ಗ್ರಾಮ ನಮ್ಮ ಯೋಜನೆ ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತು ಅಧ್ಯಕ್ಷರಾದ ಮೋಹನ ಅಂಡಿಂಜೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ತಿಲಕ್ ಪ್ರಸಾದ್ ಭಾಗವಹಿಸಿದ್ದರು.ಈ ಸಭೆಯಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆಯಡಿಯಲ್ಲಿ ಅನುಷ್ಠಾನ ಮಾಡುವ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು. ಪ್ರಧಾನ ಮಂತ್ರಿಯವರು ದೂರದರ್ಶನ ಮಾದ್ಯಮದ ಮೂಲಕ ಭಾಷಣದ ಕನ್ನಡ ಅನುವಾದದಲ್ಲಿ ವಿವರಣೆಯನ್ನು ಧರ್ಮಸ್ಥಳ ಪ್ರೌಢಶಾಲೆಯ ಸಹಶಿಕ್ಷಕರಾದ ಜಯರಾಮಯ್ಯ ಇವರು ಸಭೆಯಲ್ಲಿ ಸವಿವರವಾಗಿ ಮಾಹಿತಿಯನ್ನು ನೀಡಿದರು ಸಭೆಯಲ್ಲಿ ತಾಲೂಕು ಪಂಚಾಯತು ಸದಸ್ಯರಾದ ಸುಧೀರ್.ಆರ್ ಸುವರ್ಣ ಗ್ರಾಮಪಂಚಾಯತು ಉಪಾದ್ಯಕ್ಷರಾದ ಶ್ರೀಮತಿ ಭವಾನಿ ಪಂಚಾಯತು ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪಂಚಾಯತು ಸಿಬ್ಬಂದಿ ಶೀನ.ಕೆ ಇವರು ನಿರೂಪಿಸಿ, ಪಂಚಾಯತು ಲೆಕ್ಕ ಸಹಾಯಕರಾದ ಹೇಮಂತ್ ಕುಮಾರ್ ಎನ್.ಎಲ್ ಸ್ವಾಗತಿಸಿ, ಪಂಚಾಯತು ಸದಸ್ಯರಾದ ವಿಠಲ ಪೂಜಾರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.