ಆರ್.ಎಸ್.ಎಸ್: ಸ್ವಚ್ಚತಾ ಕಾರ್ಯಕ್ರಮ

Advt_NewsUnder_1
Advt_NewsUnder_1

rss swachate copy ಗುರುವಾಯನಕೆರೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಗುರುವಾಯನಕೆರೆ ಮಂಡಲ ಇದರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಎ.24ರಂದು ನಡೆಯಿತು. ಗುರುವಾಯನಕೆರೆಯ ಅರೆಮಲೆಬೆಟ್ಟ ದ್ವಾರದಿಂದ ಗುರುವಾಯನಕೆರೆ ಅಯ್ಯಪ್ಪ ಗುಡಿಯ ವರೆಗಿನ ರಸ್ತೆ ಬದಿಯಲ್ಲಿ ರಾಶಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್‌ಚೀಲ ಹಾಗೂ ಇತರ ಪ್ಲಾಸ್ಟಿಕ್‌ಯುಕ್ತ ವಸ್ತುಗಳನ್ನು ಕಾರ್ಯಕರ್ತರು ಹೆಕ್ಕಿ ಗೋಣಿ ಚೀಲದಲ್ಲಿ ತುಂಬಿಸಿ, ಗ್ರಾಮ ಪಂಚಾಯತದ ತ್ಯಾಜ್ಯ ಘಟಕಕ್ಕೆ ತಂದು ಹಾಕಿದರು. ರಸ್ತೆ ಬದಿಯ ಇಕ್ಕಡೆಗಳಲ್ಲಿ ಪಾಸ್ಟಿಕ್ ತೊಟ್ಟೆ, ಬಾಟಲಿ ಸೇರಿದಂತೆ ಇತರ ವಸ್ತುಗಳನ್ನು ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಬೀಸಾಡುತ್ತಿದ್ದು, ಸುಮಾರು ಐವತ್ತಕ್ಕೂ ಮಿಕ್ಕಿ ಆರ್.ಎಸ್.ಎಸ್ ಕಾರ್ಯಕರ್ತರು ಇದನ್ನು ಸ್ವಚ್ಚಗೊಳಿಸಿ, ಜನರಲ್ಲಿ ಪರಿಸರ ಜಾಗೃತಿಯ ಅರಿವನ್ನು ಮೂಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.