HomePage_Banner_
HomePage_Banner_
HomePage_Banner_

ಎ. 23 : ನವಜೀವನ ಆರೈಕೆ-ಬೆಂಬಲ ಕೇಂದ್ರದ ದಶಮಾನೋತ್ಸವ

Advt_NewsUnder_1

jeevanostava jeevanostava 2

jeevanostava.1ಬೆಳ್ತಂಗಡಿ: ದ.ಕ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರ ಕಾಶಿಬೆಟ್ಟು ಇವರ ಜಂಟಿ ಆಶ್ರಯದಲ್ಲಿ ಜೀವನೋತ್ಸಾವವು ಜ್ಞಾನ ನಿಲಯ, ಉದಯನಗರ, ಬೆಳ್ತಂಗಡಿಯಲ್ಲಿ ಎ. 23ರಂದು ನಡೆಯಿತು.
ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್ ಸಂಸ್ಥಾಪಕರಾದ ಡಾ| ಮೋಹನ್ ಆಳ್ವ ನೆರವೇರಿಸಿದರು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷರಾದ ವಂ| ಲಾರೆನ್ಸ್ ಮುಕ್ಕುಯಿ ವಹಿಸಿದ್ದರು.
ಗೌರವ ಅತಿಥಿಗಳಾಗಿ ಕರ್ನಾಟಕ ಸರಕಾರ ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಹಾಗೂ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಧಾನ ಸಭಾ ಕ್ಷೇತ್ರ ಶಾಸಕ ಜೆ. ಆರ್. ಲೋಬೋ ಉಪಸ್ಥಿತಿಯಲ್ಲಿರುವರು.
ಅತಿಥಿಗಳಾಗಿ ತುಳುಕೂಟ ಕುವೈಟ್ ಸ್ಥಾಪಕಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಬೆಂಗಳೂರು ಕ್ರಾಸ್ ಸಂಸ್ಥೆ ನಿರ್ದೇಶಕರು ವಂ.ಫಾ| ಸೆಬಾಸ್ಟಿಯನ್ ಫೆರ್ನಾಂಡೀಸ್, ಕ್ಯಾಥೋಲಿಕ್ ಹೆಲ್ತ್ ಎಸೋಸಿಯೇಶನ್ ಆಫ್ ಕರ್ನಾಟಕ ವಂ.ಫಾ| ಸಂತೋಷ್ ಡಾಯಸ್, ಬೆಳ್ತಂಗಡಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಶ್ರೀಮತಿ ಸರಸ್ವತಿ, ರೋಶ್ನಿ ನಿಲಯ ಮಂಗಳೂರು ಮಾಜಿ ಪ್ರಾಂಶುಪಾಲರು ವಂ| ಡಾ| ಜೆಸಿಂತಾ ಡಿ.ಸೋಜ, ಎಸ್.ಡಿ.ಎಂ ಕಾಲೇಜು ಉಜಿರೆ ಸಮಾಜಕಾರ್ಯ ವಿಭಾಗ, ಮುಖ್ಯಸ್ಥರು ಪ್ರೊ. ರವಿಶಂಕರ್, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರ ಕಾಶಿಬೆಟ್ಟು ವೈದ್ಯಾಧಿಕಾರಿಗಳು ಡಾ| ಮುರಳೀಕೃಷ್ಣ ಇರ್ವತ್ರಾಯ, ಹೊಂಗಿರಣ ಪೊಸಿಟಿವ್ ನೆಟ್‌ವರ್ಕ್ ಮಂಗಳೂರು ಅಧ್ಯಕ್ಷೆ ಶ್ರೀಮತಿ ಸೀಮ ಮಥಾಯಸ್, ಬೆಳ್ತಂಗಡಿ ಕಾಶಿಬೆಟ್ಟು ನವಚೈತನ್ಯ ಸಂಘ ಅಧ್ಯಕ್ಷರು, ಶ್ರಿಮತಿ ಪ್ರೇಮ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.