HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಅಂಡಿಂಜೆ: ಎಕ್ರೆಗಟ್ಟಲೆ ರಬ್ಬರ್ ತೋಟಕ್ಕೆ ಬೆಂಕಿ; ನಷ್ಟ

fire copy 1

fire copyಅಂಡಿಂಜೆ: ಎಕ್ರೆಗಟ್ಟಲೆ ರಬ್ಬರ್ ತೋಟ ಬೆಂಕಿಗಾಹುತಿಯಾದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಿಂಜೆಯಲ್ಲಿ ಎ. 22ರಂದು ಸಂಭವಿಸಿದೆ.
ಅಂಡಿಂಜೆ ಗ್ರಾಮದ ಆರ್ದಡ್ಡ ಗೋಪಾಲ ಗೌಡರಿಗೆ ಸೇರಿದ ರಬ್ಬರ್ ತೋಟ ಇದಾಗಿದ್ದು, ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಮನೆಯರು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಗಾಳಿಗೆ ಬೆಂಕಿಯ ಕೆನ್ನಾಲಿಕೆ ವ್ಯಾಪಕವಾಗಿ ಫಸರಿಸಿತು. ತೋಟ ಸಮೀಪನೇ ಮನೆಗಳೂ ಇದ್ದು, ಅಗ್ನಿಶಾಮಕ ದಳದ ಕಾರ್ಯಾಚರಣೆ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ.
ಘಟನೆಗೆ ಕಾರಣ?: ರಬ್ಬರ್ ತೋಟದ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದು, ವಿದ್ಯುತ್ ಶಾರ್ಟ್ ಘಟನೆಗೆ ಕಾರಣವೆಂದು ಮೇಲ್ನೊಟಕ್ಕೆ ಅಂದಾಜಿಸಲಾಗಿದೆ.
ಇದಕ್ಕೂ ಮೊದಲು ಅಂಡಿಂಜೆ ಸಮೀಪದ ಮೂಡುಕೋಡಿಯಲ್ಲಿ ಬಾವಿಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಇದೇ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿ ತೆರಳಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಈ ಅವಘಢ ಸಂಭವಿಸಿದೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ವಸಂತ ಗೌಡ ಸಿಬ್ಬಂದಿಗಳಾದ ಶಂಕರ, ಅರುಣ್, ರಮೇಶ್ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.