HomePage_Banner_
HomePage_Banner_

ಕಡಿರುದ್ಯಾವರ ಗ್ರಾ.ಪಂ.ದಲ್ಲಿ ರಾಷ್ಟ್ರಧಜ ಯಾಕೆ ಹಾರಿಸುವುದಿಲ್ಲ: ಗ್ರಾಮಸ್ಥರ ಪ್ರಶ್ನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Kadirudyavara gramasabhe copyಕಡಿರುದ್ಯಾವರ : ಕಡಿರುದ್ಯಾವರ ಗ್ರಾಮ ಪಂಚಾಯತ್‌ನ ೨೦೧೫-೧೬ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ ವನಿತಾರವರ ಅಧ್ಯಕ್ಷತೆಯಲ್ಲಿ ಏ.೧೫ರಂದು ಪಂಚಾಯತ್ ವಠಾರದಲ್ಲಿ ಜರಗಿತು. ಉಪಾಧ್ಯಕ್ಷ ಸಂತೋಷ್ ಗೌಡ ವಳಂಬ್ರ, ಲಾಲ ಜಿ.ಪಂ. ಸದಸ್ಯೆ ಶ್ರೀಮತಿ ಸೌಮ್ಯಲತಾ, ಮಿತ್ತಬಾಗಿಲು ತಾ.ಪಂ. ಸದಸ್ಯ ಜಯರಾಂ, ಸದಸ್ಯರಾದ ಅಶೋಕ್ ಕುಮಾರ್, ನೋಣಯ್ಯ ಗೌಡ, ನೇಮಿರಾಜ ಗೌಡ, ಹೇಮಾವತಿ, ರೇಣುಕಾ, ಯಶೋಧ, ವಿಮಲ ಉಪಸ್ಥಿತರಿದ್ದರು.
ಪಂಚಾಯತು ಅಭಿವೃದ್ಧಿ ಅಧಿಕಾರಿ ಶ್ರೀಮತಿ ದೇವಕಿ, ಅನುಪಾಲನಾ ವರದಿ, ಲೆಕ್ಕಪತ್ರ, ಇತ್ಯಾದಿ ಪ್ರಕ್ರಿಯೆ ನಡೆಸಿಕೊಟ್ಟರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿಯವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು.
ಕೃಷಿ ಇಲಾಖೆ ವತಿಯಿಂದ ನಾರಾಯಣ ಸುವರ್ಣ, ಅರಣ್ಯ, ಪಶು ಸಂಗೋಪನೆ, ಕಂದಾಯ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ಮತ್ತು ವಿವರಗಳನ್ನು ಗ್ರಾಮಸ್ಥರಿಗೆ ವಿವರಿಸಿದರು.
ಪ್ರಾರಂಭದಲ್ಲಿ ಈ ಬಾರಿಯ ವಾರ್ಡ್ ಸಭೆ ಗ್ರಾಮ ಸಭೆಯ ಆಮಂತ್ರಣ ಪತ್ರಿಕೆ ಗ್ರಾಮಸ್ಥರಿಗೆ ಹಂಚಿದ ವಿವರವನ್ನು ತಿಳಿಯ ಬಯಸಿದ ಮಿತ್ತಬಾಗಿಲು ಪಂಚಾಯತ್‌ನ ಮಾಜಿ ಉಪಾಧ್ಯಕ್ಷ ಉದಯಾಕರ ಹೆಬ್ಬಾರ್ ಹಾಗೂ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ಈ ಬಾರಿ ಎಲ್ಲಾ ಮನೆಗಳಿಗೆ ತಲುಪಲಿಲ್ಲ, ಉದಾಹರಣೆಗೆ ನಮಗೆ ಸಿಗಲಿಲ್ಲ ಎಂದರು.
ಪಂಚಾಯತು ವತಿಯಿಂದ ಉಪಾಧ್ಯಕ್ಷ ಸಂತೋಷ್ ಕುಮಾರ್ ಮತ್ತು ಸದಸ್ಯ ನೇಮಿರಾಜ ಗೌಡ ಮಾತನಾಡಿ, ಎಲ್ಲಾ ಮನೆಗಳಿಗೂ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಆದರೂ ನಮ್ಮಿಂದ ಪ್ರಮಾದ ಆಗಿದ್ದರೆ, ಮುಂದೆ ಈ ರೀತಿ ಆಗದ ಹಾಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಎಲ್ಲಾ ಗ್ರಾ. ಪಂಚಾಯತುಗಳಲ್ಲಿ ರಾಷ್ಟ್ರದ್ವಜ ಹಾರಾಟ ಕಡ್ಡಾಯವಾಗಿದೆ. ಆದರೆ ನಮ್ಮ ಕಡಿರುದ್ಯಾವರ ಪಂಚಾಯತ್‌ನಲ್ಲಿ ರಾಷ್ಟ್ರಧ್ವಜ ಹಾರಾಟ ಯಾಕಿಲ್ಲ ಎಂದು ಮಾಜಿ ಉಪಾಧ್ಯಕ್ಷ ಉದಯಕರ ಹೆಬ್ಬಾರ್ ಪಿ.ಡಿ.ಓ. ರಲ್ಲಿ ಪ್ರಶ್ನಿಸಿದರು. ಈ ಸಂದರ್ಭ ಮಾತನಾಡಿದ ಪಿ.ಡಿ.ಓ. ದೇವಕಿ ಧ್ವಜಕಟ್ಟೆಯ ಕಂಬ ತೆಂಗಿನ ಗರಿ ಬಿದ್ದು ತುಂಡಾಗಿದ್ದು, ನಂತರ ಹಾರಿಸಲಿಲ್ಲ ಎಂದು ಸ್ಪಷ್ಟಪಡಿಸಿದರು. ಹೇಡ್ಯದಿಂದ ವಳಂಬ್ರದ ವರೆಗೆ ಮಳೆಗಾಲದ ಮೊದಲು ಚರಂಡಿ ದುರಸ್ಥಿ ಬಗ್ಗೆ ಶ್ರೀಮತಿ ಲೋಕೇಶ್ವರಿ ವಿನಯಂದ್ರ ಪ್ರಸ್ತಾಪಿಸಿದರು. ಗ್ರಾಮಸ್ಥರಿಂದ ತೆರಿಗೆ ಹೊರೆಯ ಬಗ್ಗೆ ಪ್ರಸ್ತಾಪಿಸಲಾಯಿತು.
ಉದ್ದಾರ ಕಾಲು ಸಂಕದ ಅಪಾಯದ ಸ್ಥಿತಿಯ ಬಗ್ಗೆ ಉದಯಾಕರ ಹೆಬ್ಬಾರ್ ಪ್ರಸ್ತಾಪಿಸಿದರು. ಕಡಿರುದ್ಯಾವರದಿಂದ ಅತೀ ಸಮೀಪದ ದಾರಿಯಾಗಿ ಬಂಗಾಡಿ ಹೈಸ್ಕೂಲ್, ವಾಣಿಜ್ಯ ಬ್ಯಾಂಕ್, ಬೆಳ್ತಂಗಡಿಗೆ ಸಂಪರ್ಕಿಸುವ ಉದ್ದಾರ ಕಾಲು ಸಂಕದ ದುರಸ್ಥಿ ಆಗಬೇಕು, ಈ ಬಾರಿ ದುರಸ್ಥಿ ಆಗದಿದ್ದರೆ ಪ್ರಾಣ ಹಾನಿಯಾಗುವ ಸ್ಥಿತಿ ಎದುರಾಗಬಹುದು ಎಂಬ ಎಚ್ಚರಿಕೆಯ ಬಗ್ಗೆ ತಿಳಿಸಿದರು.
ಪಂಚಾಯತ್ ವತಿಯಿಂದ ಉಪಾಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ ಉದಯಾಕರ ಹೆಬ್ಬಾರ್ ಪ್ರಸ್ತಾಪಿಸಿದ ವಿಷಯ ಹೌದು, ಇದಕ್ಕೊಂದು ಪ್ರಸ್ತಾಪವನ್ನು ಶಾಸಕರಲ್ಲಿ ಇಟ್ಟಿದ್ದೇವೆ. ಬೆಳ್ಳೂರು-ಇಂದಬೆಟ್ಟು ಸಂಪರ್ಕಕ್ಕೆ ರಸ್ತೆ ಹಾಗೂ ಸೇತುವೆಗೆ ೪ ಕೋಟಿ ಮಂಜೂರುಗೊಂಡಿದೆ. ಮಂಜೂರಾದ ಸೇತುವೆಯನ್ನು ಕಡಿರುದ್ಯಾವರ ಉದ್ದಾರದಿಂದ ಬಂಗಾಡಿಗೆ ಸಂಪರ್ಕ ಸೇತುವೆಯಾಗಿ ಮಾಡಬೇಕೆಂದು ತಿಳಿಸಿದ್ದೇವೆ ಎಂದರು.
ಜಿ.ಪಂ. ಸದಸ್ಯೆ ಶ್ರೀಮತಿ ಸೌಮ್ಯಲತಾ ಮಾತನಾಡಿ ಜಿಲ್ಲಾ ಪಂಚಾಯತು ವತಿಯಿಂದ ಕಾಲುಸಂಕಕ್ಕೆ ನನ್ನಿಂದಾದ ಪ್ರಯತ್ನ ಮಾಡುತ್ತೇನೆ ಎಂದರು. ತಾ.ಪಂ. ಸದಸ್ಯ ಜಯರಾಮ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಅಲ್ಲದೆ ಗ್ರಾಮಸಭೆಗಳಿಗೆ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಬರಬೇಕಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂದರು. ಮಾರ್ಗದರ್ಶಿ ಅಧಿಕಾರಿ ಮಾತನಾಡಿ ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ರಕ್ಷಣೆ, ಮಕ್ಕಳ ಮಾರಾಟ ಹಾಗೂ ಸಾಗಾಟದ ಬಗ್ಗೆ, ಬಾಲ್ಯ ವಿವಾಹ ಇವುಗಳನ್ನು ತಡೆಯಬೇಕು. ಇದಕ್ಕಾಗಿ ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕಾನೂನು ಕ್ರಮಗಳಿವೆ ಎಂದರು. ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಎಲ್ಲರ ಸಹಕಾರ ಕೋರಿದರು. ಪಿ.ಡಿ.ಓ. ಶ್ರೀಮತಿ ದೇವಕಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಪಂ. ಸದಸ್ಯೆ ಹೇಮಾವತಿ ಪ್ರಾರ್ಥಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.