HomePage_Banner_
HomePage_Banner_

ಹೊಸಂಗಡಿ: ನನ್ನ ಮನೆ-ಸೌರ ಮನೆ ಯೋಜನೆಗೆ ಚಾಲನೆ ‘ಸೌರ ಶಕ್ತಿಯನ್ನು ಬಳಸಿ ವಿದ್ಯುತ್ ಸ್ವಾಲಂಬನೆಯ ಪರಿಕಲ್ಪನೆ ಶ್ಲಾಘನೀಯ

hosangadi nanna mane nanna soura ge chalane copyಹೊಸಂಗಡಿ: ಹೊಸಂಗಡಿ ಗ್ರಾಮ ಪಂಚಾಯತ್‌ನ ಸೌರ ಕಾಲೊನಿಯ ಪರಿಕಲ್ಪನೆಯ ಚಿಂತನೆ ಮಹತ್ವದ್ದಾಗಿದೆ, ಇದು ದೇಶಕ್ಕೆ ಮಾದರಿ. ವ್ಯರ್ಥವಾಗುವ ಸೌರ ಶಕ್ತಿಯನ್ನು ಬಳಸಿ ವಿದ್ಯುತ್ ಸ್ವಾಲಂಬನೆಯನ್ನು ಸಾಧಿಸುವ ಗುರಿಯನ್ನು ಹೊಂದಿರುವ ಪಂಚಾಯತ್‌ನ ಪರಿಕಲ್ಪನೆ ನಿಜಕ್ಕೂ ಶ್ಲಾಘನೀಯ ಎಂದು ಮಂಗಳೂರು ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಶೀನ ಶೆಟ್ಟಿ ಹೇಳಿದರು.
ಅವರು ಗ್ರಾಮ ಪಂಚಾಯತು ಹೊಸಂಗಡಿ, ಕಾಲೊನಿ ಅಭಿವೃದ್ಧಿ ಸಮಿತಿ ಮಳಿಯಾಲಪಲ್ಕೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪೆರಿಂಜೆ ಮಳಿಯಾಲಪಲ್ಕೆ ಕ್ರೀಡಾಂಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೨೫ನೇ ಜನ್ಮದಿನಾಚರಣೆ, ಮಾದರಿ ಮನೆ-ಸುಸ್ಥಿರ ಸ್ವಾವಲಂಬಿ ಸಮುದಾಯ ಯೋಜನೆಗೆ ಚಾಲನೆ ಮತ್ತು ನನ್ನ ಮನೆ-ಸೌರ ಮನೆ ಎಂಬ ವಿನೂತನ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯುತ್ ಪೂರೈಕೆಯ ಅಭಾವದ ಮಧ್ಯೆ ನಿರಂತರ ಬೆಳಕು ಮೂಡಿಸುವ ಸೌರ ಶಕ್ತಿಯ ಬಳಕೆಗೆ ದೇಶದ ಪ್ರೇರಣಾ ಶಕ್ತಿ ಡಾ| ಅಂಬೇಡ್ಕರ್‌ರವರ ೧೨೫ನೇಯ ಜನ್ಮದಿನಾಚರಣೆಯಂದೇ ‘ನನ್ನ ಮನೆ-ಸೌರ ಮನೆ ಎಂಬ ಯೋಜನೆಗೆ ಚಾಲನೆ ನೀಡಿರುವುದು ಹೆಮ್ಮೆಯ ವಿಷಯ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಸಮಾಜದ ಕಟ್ಟಕಡೆಯ ಮಂದಿಗೂ ಸರ್ಕಾರದ ಯೋಜನೆಗಳು ಲಭಿಸಬೇಕು. ಈ ನಿಟ್ಟಿನಲ್ಲಿ ಹೊಸಂಗಡಿ ಸಮಾಜಕ್ಕೆ ಅನುಕೂಲ ವಾಗುವ ವಿನೂತನ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಲ್ಲಿನ ಕಾರ್ಯಕ್ರಮ ಗಳನ್ನು ಧರ್ಮಸ್ಥಳದ ಡಾ| ಹೆಗ್ಗಡೆಯವರು ಪ್ರಶಂಶಿಸಿರುವುದು ಹೆಮ್ಮೆಯ ವಿಷಯ ಎಂದರು. ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾ ವಸಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ನಮ್ಮ ಗ್ರಾಮ ಸೌರ ಗ್ರಾಮ ಎಂಬ ಯೋಜನೆಯಡಿ ಮಳಿಯಾಲಪಲ್ಕೆ ಕಾಲೊನಿಯನ್ನು ನನ್ನ ಮನೆ ಸೌರ ಮನೆ ಕಾಲೊನಿಯಾಗಿ ಘೋಷಣೆ ಮಾಡಲಾಯಿತು. ಡಾ. ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆಗೈದರು. ಹೊಸಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಲಲಿತಾ ಟಿ. ಹೆಗ್ಡೆ, ಹೊಸಂಗಡಿ ಕ್ಷೇತ್ರದ ತಾ.ಪಂ. ಸದಸ್ಯ ಓಬಯ್ಯ ಆರಂಬೋಡಿ, ಬೆಂಗಳೂರು ಸೆಲ್ಕೋ ಸೋಲಾರ್ ಲೈಟ್ ಪ್ರೈ. ಲಿಮಿಟೆಡ್‌ನ ಸಹಾಯಕ ಜನರಲ್ ಮೆನೇಜರ್ ಗುರುಪ್ರಕಾಶ್ ಶೆಟ್ಟಿ, ವೇಣೂರು ಮೆಸ್ಕಾಂನ ಕಿರಿಯ ಇಂಜಿನಿಯರ್ ಬೂಬ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ವೇಣೂರು ವಲಯದ ಮೇಲ್ವಿಚಾರಕ ಶ್ರೀನಿವಾಸ ಗೌಡ, ಜನ ಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ, ಪೆರಿಂಜೆ ಅಂಬಾವನ ಫ್ರೆಂಡ್ಸ್‌ನ ಗಿರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಹರಿಪ್ರಸಾದ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕು| ಸರಿತಾ ಬಳಗ ಪ್ರಾರ್ಥಿಸಿದರು. ಪಂಚಾಯತು ಸದಸ್ಯ ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿ ಕಾಲೊನಿ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ರವಿ ಬೊಳ್ಳಾಜೆ ವಂದಿಸಿದರು. ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.