HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಪಚುನಾವಣೆ : 3 ಬಿಜೆಪಿ – 2 ಕಾಂಗ್ರೆಸ್ ಸದಸ್ಯರ ಆಯ್ಕೆ

upa chunavaneತಾಲೂಕಿನ 5 ಗ್ರಾಮ ಪಂಚಾಯತುಗಳ 5 ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಲಾಯಿಲ ಗ್ರಾ.ಪಂ. 2ನೇ ಕ್ಷೇತ್ರದಲ್ಲಿ ಚಿದಾನಂದ ಶೆಟ್ಟಿ ಆವಿರೋಧ ಆಯ್ಕೆಯಾಗಿದ್ದಾರೆ. ಚಾರ್ಮಾಡಿ ಗ್ರಾ.ಪಂ. ತೋಟತ್ತಾಡಿ 2ನೇ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತರಾದ ಶೋಭ ಸಿಬಿ 464 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಸುನಂದ ಶೀನಪ್ಪ ಗೌಡ 339 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಕಣಿಯೂರು ಗ್ರಾಮ ಪಂಚಾಯತದ ಉರುವಾಲು 2ನೇ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರಾದ ಯಶೋಧ ಎನ್ 404 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಇವರ ಎದುರಾಳಿ ಕಾಂಗ್ರೆಸ್ ಬೆಂಬಲಿತ ಜ್ಯೋತಿ 246 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಕಲ್ಮಂಜ ಗ್ರಾಮ ಪಂಚಾಯತ ಕಲ್ಮಂಜ 1ನೇ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತರಾದ ರಾಧಾಕೃಷ್ಣ ಗೌಡ 428 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತರಾದ ರಾಧೇಶ ಗೌಡ ೨೮೫ ಮತಗಳನ್ನು ಪಡೆದು ಪರಾಜಯಗೊಂಡಿದ್ದಾರೆ. ಮಚ್ಚಿನ ಗ್ರಾ.ಪಂ. ಮಚ್ಚಿನ 1ನೇ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರಾದ ಜಾನಕಿ ರವಿ ಕೋಲಾಜೆ ಅವರು 281 ಮತಗಳನ್ನು ಪಡೆದು ಚುನಾಯಿತರಾದರೆ, ಅವರ ಎದುರಾಳಿ ಕಾಂಗ್ರೆಸ್ ಬೆಂಬಲಿತರಾದ ಪವಿತ್ರ ಪುರಂದರ 141 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.