ಎರಡು ಗ್ರಾ.ಪಂ. ಬಿಜೆಪಿ ಮೇಲುಗೈ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

bjp melu guy ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ವೇಣೂರು ಮತ್ತು ಆರಂಬೋಡಿ ಗ್ರಾಮ ಪಂಚಾಯತುಗಳ ೩೬ ಸ್ಥಾನಗಳಿಗೆ ಎ.೧೭ರಂದು ನಡೆದ ಚುನಾವಣೆಯ ಮತ ಎಣಿಕೆ ಪೂರ್ತಿಗೊಂಡಾಗ ಬಿಜೆಪಿ ಬೆಂಬಲಿತರು ಎರಡು ಗ್ರಾಮ ಪಂಚಾಯತುಗಳಲ್ಲೂ ಮೇಲುಗೈ ಸಾಧಿಸಿ ಪಂಚಾಯತದ ಆಡಳಿತವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ೫ ಗ್ರಾಮ ಪಂಚಾಯತುಗಳ ೫ ಸ್ಥಾನಗಳಿಗೆ ಇದೇ ಸಂದರ್ಭದಲ್ಲಿ ನಡೆದ ಉಪ ಚುನಾವಣೆಯಲ್ಲಿ ಲಾಲ ಗ್ರಾ.ಪಂ.ದಲ್ಲಿ ಬಿಜೆಪಿ ಬೆಂಬಲಿತರಾದ ಚಿದಾನಂದ ಶೆಟ್ಟಿ ಇವರು ಆವಿರೋಧ ಆಯ್ಕೆಯಾಗುವುದರೊಂದಿಗೆ ಬಿಜೆಪಿ ಬೆಂಬಲಿತರು ೩ ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ ಬೆಂಬಲಿತರು ೨ ಕ್ಷೇತ್ರಗಳನ್ನು ಪಡೆದುಕೊಂಡಿದ್ದಾರೆ.
ವೇಣೂರು ಗ್ರಾಮ ಪಂಚಾಯತದ ೨೪ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರ ನಡುವೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿ ಬೆಂಬಲಿತರು ೧೪ ಕ್ಷೇತ್ರಗಳಲ್ಲಿ ಜಯ ಸಾಧಿಸುವುದರೊಂದಿಗೆ ಪಂಚಾಯತದ ಅಧಿಕಾರದ ಗದ್ದುಗೆಗೆ ಏರಿದ್ದಾರೆ. ಇವರಿಗೆ ತೀವ್ರ ಪ್ರತಿಸ್ಪರ್ಧೆ ನೀಡಿದ್ದ ಇದುವರೆಗೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಬೆಂಬಲಿತರು ೧೦ ಕ್ಷೇತ್ರಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ.
ಆರಂಬೋಡಿ ಗ್ರಾಮ ಪಂಚಾಯತದ ೧೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಬಿಜೆಪಿ ಬೆಂಬಲಿತರು ೮ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿ ಪಂಚಾಯತದ ಅಧಿಕಾರವನ್ನು
ಮತ್ತೆ ತಮ್ಮ ವಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ಪೈಪೋಟಿ ನೀಡಿದ ಕಾಂಗ್ರೆಸ್ ೪ ಸ್ಥಾನಗಳನ್ನು ಪಡೆದುಕೊಂಡಿದೆ.
ವೇಣೂರು ಗ್ರಾ.ಪಂ : ೧೪ ಬಿಜೆಪಿ-೧೦ ಕಾಂಗ್ರೆಸ್
ವೇಣೂರು ಗ್ರಾಮ ಪಂಚಾಯತ ೧ನೇ ಕ್ಷೇತ್ರದಲ್ಲಿ ೪ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದು, ಕಾಂಗ್ರೆಸ್ ಬೆಂಬಲಿತರಾದ ಕಸ್ತೂರಿ ಸದಾನಂದ ಪೂಜಾರಿ ೨೬೦, ರಾಜೇಶ್ ಪೂಜಾರಿ ೩೧೭, ವಿಕ್ಟರ್ ಮಿನೆಜಸ್ ೩೮೪, ಶಾರದಾ ವಸಂತ ೨೯೧ ಮತಗಳನ್ನು ಪಡೆದು ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿರಾದ ಗಣೇಶ್ ಮೂಲ್ಯ ೩೦೧, ನಾಗಪ್ಪ ೩೧೩, ವಿಮಲ ರಾಜು ಪೂಜಾರಿ ೨೫೩, ಸುಜಾತ ಗಣೇಶ್ ೨೨೯ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ವೇಣೂರು ೨ನೇ ಕ್ಷೇತ್ರದಲ್ಲಿ ೩ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೨ ಕಾಂಗ್ರೆಸ್ ಮತ್ತು ೧ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರಾದ ರೊನಾಲ್ಡ್ ಡಿ’ಸೋಜಾ ೩೩೦, ಶಹನಾಜ್ ೩೦೮ ಹಾಗೂ ಬಿಜೆಪಿ ಬೆಂಬಲಿತರಾದ ನೇಮಯ್ಯ ಕುಲಾಲ್ ೩೬೮ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತರಾದ ಸೇಸ ಎಂ. ೩೬೪, ಬಿಜೆಪಿ ಬೆಂಬಲಿತರಾದ ವಿಮಲ ವಿಶ್ವನಾಥ ದೇವಾಡಿಗ ೩೦೮, ಸುಕುಮಾರ್ ಜೈನ್ ೩೨೦ ಸೋಲು ಕಂಡಿದ್ದಾರೆ.
ಕರಿಮಣೇಲು ೧ನೇ ಕ್ಷೇತ್ರದಲ್ಲಿ ೩ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ೩ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿ ಬೆಂಬಲಿತರಾದ ಅಣ್ಣು ೩೪೨, ಶೋಭಾ ಅರಣಾ ಹೆಗ್ಡೆ ೪೦೩, ಶೋಭಾ ಯಾನೆ ನಯನ ೩೩೧ ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತರಾದ ವಿಶ್ವನಾಥ್ ೩೩೧, ಸುಜೇಕಾ ಗುಣಪಾಲ್ ೩೩೬, ಸುಧಾ ೩೧೦ ಮತಗಳನ್ನು ಪಡೆದು ಪರಾಜಯಗೊಂಡಿದ್ದಾರೆ.
ಕರಿಮಣೇಲು ೨ನೇ ಕ್ಷೇತ್ರದಲ್ಲಿ ೩ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೨ ಬಿಜೆಪಿ ಮತ್ತು ೧ ಕಾಂಗ್ರೆಸ್ ಸ್ಥಾನ ಪಡೆದುಕೊಂಡಿದೆ. ಬಿಜೆಪಿ ಬೆಂಬಲಿತರಾದ ಪುಷ್ಪ ಆನಂದ ಪೂಜಾರಿ ೨೫೩, ಯಶೋಧರ ಹೆಗ್ಡೆ ೨೬೯, ಕಾಂಗ್ರೆಸ್ ಬೆಂಬಲಿತರಾದ ಮಾರ್ಗರೇಟ್ ಕೊರೆಯಾ ೨೨೭ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತರಾದ ಅರವಿಂದ ಶೆಟ್ಟಿ ೨೬೩, ರತ್ನವತಿ ಜಯೇಂದ್ರ ೨೨೩, ಬಿಜೆಪಿ ಬೆಂಬಲಿತರಾದ ಮಾಲತಿ ಹೆಗ್ಡೆ ೨೦೦, ಪಕ್ಷೇತರಾದ ದೇಜಪ್ಪ ಶೆಟ್ಟಿ ಪಿ. ೨೧೧ ಮತ ಪಡೆದು ಪರಾಭವಗೊಂಡಿದ್ದಾರೆ.
ಮೂಡುಕೋಡಿ ೧ನೇ ಕ್ಷೇತ್ರದಲ್ಲಿ ೨ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೧ಬಿಜೆಪಿ ಮತ್ತು ೧ ಕಾಂಗ್ರೆಸ್ ಪಾಲಾಗಿದೆ. ಬಿಜೆಪಿ ಬೆಂಬಲಿತರಾದ ರಾಜೇಶ್ ಪೂಜಾರಿ ೪೨೩ ಮತ್ತು ಕಾಂಗ್ರೆಸ್ ಬೆಂಬಲಿತರಾದ ಜೆಸ್ಸಿ ಪೀರೇರಾ ೩೨೮ ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರಾದ ರಂಜಿನಿ ಜಯಂತ ಶೆಟ್ಟಿ ೨೬೫, ಕಾಂಗ್ರೆಸ್ ಬೆಂಬಲಿತರಾದ ಸುದರ್ಶನ ಕೋಟ್ಯಾನ್ ೨೯೫, ಪಕ್ಷೇತರರಾದ ಎಂ. ಸೂರ್ಯಪ್ರಭಾ ಸತೀಶ್‌ಕುಮಾರ್ ೨೮೫ ಮತಗಳನ್ನು ಪಡೆದು ಸೋಲುಂಡಿದ್ದಾರೆ.
ಮೂಡುಕೋಡಿ ೨ನೇ ಕ್ಷೇತ್ರದಲ್ಲಿ ೩ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೩ ಸ್ಥಾನಗಳು ಬಿಜೆಪಿ ಪಾಲಾಗಿದೆ. ಬಿಜೆಪಿ ಬೆಂಬಲಿತರಾದ ಮೋಹಿನಿ ವಿಶ್ವನಾಥ ಶೆಟ್ಟಿ ೩೬೬, ಲಕ್ಷ್ಮಣ ಪೂಜಾರಿ ೩೫೭, ಹರೀಶ್ ಪಿ.ಎಸ್. ೩೬೯ ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತರಾದ ಝಕ್ರಿಯ ಎಂ.೩೧೧, ಮಮತಾ ೨೭೩, ರವೀಂದ್ರ ೩೦೪ ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಬಜಿರೆ ೧ ಕ್ಷೇತ್ರದಲ್ಲಿ ೩ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೩ ಸ್ಥಾನಗಳು ಬಿಜೆಪಿ ಪಾಲಾಗಿದೆ. ಬಿಜೆಪಿ ಬೆಂಬಲಿತರಾದ ಅರುಣ್ ಕ್ರಾಸ್ತಾ ೩೪೮, ಗಂಗಾಶೇಖರ ೨೮೦, ಲೀಲಾವತಿ ಆನಂದ ಸಲ್ಯಾನ್ ೩೩೬ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತರಾದ ಅಶೋಕ್ ಪೂಜಾರಿ ೩೧೩, ವಿಮಲ ಗಿರಿಯಪ್ಪ ೨೫೨, ಸುನಿತಾ ೨೩೦ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಬಜಿರೆ ೨ನೇ ಕ್ಷೇತ್ರದಲ್ಲಿ ೩ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೨ ಕಾಂಗ್ರೆಸ್ ೧ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ ಬೆಂಬಲಿತರಾದ ವಿಶಾಲಾಕ್ಷಿ ಶೇಖರ ಪೂಜಾರಿ ೩೩೮, ಗ್ರಾ.ಪಂ. ಅಧ್ಯಕ್ಷ ಸತೀಶ್ ಹೆಗ್ಡೆ ೩೮೬, ಬಿಜೆಪಿ ಬೆಂಬಲಿತರಾದ ಲೋಕಯ್ಯ ಪೂಜಾರಿ ೩೩೬ ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತರಾದ ಗೋಪಾಲ ಟೈಲರ್ ೨೯೨, ಬಿಜೆಪಿ ಬೆಂಬಲಿತರಾದ ಮಲ್ಲಿಕಾ ಬಾಡಾರು ೨೮೩, ಸುನೀಲ್ ಪೂಜಾರಿ ೩೩೨ ಮತಗಳನ್ನು ಪಡೆದು ಸೋಲುಂಡಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರಾದ ಲೋಕಯ್ಯ ಪೂಜಾರಿ ಮತ್ತು ಸುನೀಲ್ ಪೂಜಾರಿ ಅವರಿಗೆ ಮತ ಎಣಿಕೆಯಲ್ಲಿ ಸಮಾನ ೩೩೪ ಮತಗಳು ಲಭಿಸಿತು. ಈ ಸಂದರ್ಭದಲ್ಲಿ ಮರುಏಣಿಕೆಗೆ ಮಾಡಿದ ಮನವಿಯಂತೆ ಚುನಾವಣಾಧಿಕಾರಿಗಳು ಮರು ಮತ ಎಣಿಕೆ ಮಾಡಿದಾಗ ಲೋಕಯ್ಯ ಪೂಜಾರಿಯವರಿಗೆ ೪ ಅಧಿಕ ಮತಗಳು ಲಭಿಸಿ ೩೩೬ ಮತಗಳು ದೊರೆತು ಲೋಕಯ್ಯ ಪೂಜಾರಿ ಸದಸ್ಯರಾಗಿ ಆಯ್ಕೆಯಾದರು.
ಆರಂಬೋಡಿ ಗ್ರಾ.ಪಂ : ಬಿಜೆಪಿ ೮- ಕಾಂಗ್ರೆಸ್ ೪
ಆರಂಬೋಡಿ ೧ನೇ ಕ್ಷೇತ್ರದಲ್ಲಿ ೪ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪ ಸ್ಥಾನ ಬಿಜೆಪಿ ಪಡೆದುಕೊಂಡಿದೆ. ಬಿಜೆಪಿ ಬೆಂಬಲಿತರಾದ ಹೆಚ್. ಪ್ರಭಾಕರ್ ೬೭೧, ರೇಖಾ ೫೮೯, ವಿಜಯ ೬೯೫, ವಿಜಯ ನಾಯ್ಕ ೫೯೭ ಮತ ಪಡೆದು ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತರಾದ ಮೋಹಿನಿ ೪೧೦, ಯಮುನಾ ೩೭೪, ರಮೇಶ್ ಮಂಜಿಲ ೪೪೭, ಶಾಂತ ೪೪೫ ಹಾಗೂ ಪಕ್ಷೇತರರಾದ ಗಿಲ್ಬರ್ಟ್ ರೇಗೋ ೧೯೯ ಮತ ಪಡೆದು ಸೋಲು ಅನುಭವಿಸಿದ್ದಾರೆ.
ಆರಂಬೋಡಿ ೨ನೇ ಕ್ಷೇತ್ರದಲ್ಲಿ ೪ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪ ಸ್ಥಾನ ಬಿಜೆಪಿ ಪಾಲಾಗಿದೆ. ಬಿಜೆಪಿ ಬೆಂಬಲಿತರಾದ ಆಶಾ ಎಸ್. ಶೆಟ್ಟಿ ೫೪೦, ಪ್ರಭಾವತಿ ೫೦೫, ಶಶಿಧರ ಶೆಟ್ಟಿ ೫೩೫, ಸತೀಶ್ ಪೂಜಾರಿ ೫೧೮ ಮತಪಡೆದು ಜಯಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತರಾದ ಆನಂದ ಶೆಟ್ಟಿ ೩೨೫, ಗೀತಾ ೩೨೬, ಪುಷ್ಪಲತಾ ಶೆಟ್ಟಿ ೩೨೦, ಹರೀಶ್ ಹಿಂಗಾಣಿ ೩೫೧ ಮತ ಪಡೆದು ಸೋಲು ಕಂಡಿದ್ದಾರೆ.
ಗುಂಡೂರಿ ೧ನೇ ಕ್ಷೇತ್ರದಲ್ಲಿ ೪ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಬೆಂಬಲಿತರಾದ ಗೋಪಾಲ ೪೦೩, ಭವಿತಾ ಯಾನೆ ಮಂಜುಳಾ ೩೭೭, ಪಿ.ರಮೇಶ್ ಪೂಜಾರಿ ೪೨೨, ಹರೀಶ್ ಕುಮಾರ್ ೪೯೭ ಮತ ಪಡೆದು ಜಯ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತಾದ ಪ್ರವೀಣ್ ಪೂಜಾರಿ ೨೨೪, ಯೋಗೀಶ್ ೨೭೯, ಸದಾನಂದ ೨೨೨, ಸುಮಿತ್ರಾ ೨೧೮ ಮತ ಪಡೆದು ಪರಾಜಯಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.