ಉತ್ತರ-ದಕ್ಷಿಣ ಕಾರಿಡಾರ್ ಸುರಂಗ ಪೂರ್ಣ

ಗೋದಾವರಿ ಯಂತ್ರದ ಕೆಲಸ ಪೂರ್ಣಗೊಂಡಿದ್ದರಿಂದಾಗಿ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಉತ್ತರ ಭಾಗದ ಸುರಂಗ ಕೊರೆಯುವ ಕೆಲಸ ಪೂರ್ಣಗೊಂಡಂತಾಗಿದೆ. ಈಗಾಗಲೇ ಉತ್ತರ ಭಾಗದ ಜೋಡಿ ಸುರಂಗ ಮಾರ್ಗದಲ್ಲಿ ಒಂದು ಸುರಂಗದಲ್ಲಿ ಹಳಿ ಹಾಕುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಈಗ ಪೂರ್ಣಗೊಂಡಿರುವ ಇನ್ನೊಂದು ಮಾರ್ಗದಲ್ಲಿ ಹಳಿ  ಹಾಕುವ ಕೆಲಸ ಇನ್ನು ೧೦ ದಿನಗಳಲ್ಲಿ ಶುರುವಾಗಲಿದೆ.  ಇನ್ನು ಉತ್ತರ-ದಕ್ಷಿಣ ಕಾರಿಡಾರ್‌ನ ದಕ್ಷಿಣ ಭಾಗದಲ್ಲಿ ಕೃಷ್ಣ ಮತ್ತು ಕಾವೇರಿ ಯಂತ್ರಗಳು ಸುರಂಗ ಕೊರೆಯುವ ಕೆಲಸ ಮಾಡುತ್ತಿವೆ.  ೭೪೭  ಮೀ. ಸುರಂಗ ಕೊರೆಯುವ ಕೆಲಸದಲ್ಲಿ ಕೃಷ್ಣ ಟಿಬಿಎಂ ಮೆಜೆಸ್ಟಿಕ್‌ನಿಂದ ೨೫೦ ಮೀ. ಹಾಗೂ ಕಾವೇರಿ ಯಂತ್ರ ಕೇವಲ ೧೦೦ ಮೀ. ದೂರದಲ್ಲಿವೆ. ಕಾವೇರಿ ಯಂತ್ರ ಇನ್ನು ೪೦ ದಿನಗಳಲ್ಲಿ  ಮೆಜೆಸ್ಟಿಕ್ ತಲುಪಲಿದ್ದು, ಕೃಷ್ಣ ಇನ್ನು ಎರಡೂವರೆ ತಿಂಗಳಲ್ಲಿ ಕೆಲಸ ಮುಗಿಸಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.