ನಾರಾವಿ: ಗ್ರಾ.ಪಂ. ನೌಕರರ ಸಂಘದ ಸಭೆ

naravi

ನಾರಾವಿ: ಬೆಳ್ತಂಗಡಿ ತಾಲೂಕು ಗ್ರಾ.ಪಂ. ನೌಕರರ ಸಂಘದ ಸಭೆಯು ಸಂಘದ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ ಧರ್ಮಸ್ಥಳ ಇವರ ಅಧ್ಯಕ್ಷತೆಯಲ್ಲಿ ನಾರಾವಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ಸಭೆಯಲ್ಲಿ ಸಂಘದ ಬೈಲಾ ರಚಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಬೆಳ್ತಂಗಡಿ ತಾ. ಪಂ. ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತರಾದ ಶೇಖರ ನಾಯ್ಕ ಇವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತ್ಯಪ್ರಸಾದ್ ಹೆಬ್ಬಾರ್, ಕಾರ್ಕಳ ತಾಲೂಕು ಗ್ರಾಮ ಪಂಚಾಯತ್ ನೌಕರರ ಸಂಘದ ಅಧ್ಯಕ್ಷ ಸೈಫುಲ್ಲಾ, ಬೆಳ್ತಂಗಡಿ ಗ್ರಾಮ ಪಂಚಾಯತ್ ನೌಕರರ ಸಂಘದ ಪದಾಧಿಕಾರಿಗಳು, ಬೆಳ್ತಂಗಡಿ ಹಾಗೂ ಕಾರ್ಕಳ ತಾಲೂಕಿನ ಗ್ರಾಮ ಪಂಚಾಯತ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ಉಜಿರೆ ವರದಿ ವಾಚಿಸಿದರು. ಸತೀಶ್ ನಾರಾವಿ ನಿರೂಪಿಸಿ, ಸತೀಶ್ ಹೊಸಂಗಡಿ ಸ್ವಾಗತಿಸಿ, ವಸಂತ ಮೆಲಂತಬೆಟ್ಟು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.