ಸುದ್ದಿ ಬಿಡುಗಡೆ ಹೆರಾಲ್ಡ್ ಪಿಂಟೋ ಅವರ ಹಿರಿಯ ಸಹೋದರ ಸಿರಿಲ್ ಪಿಂಟೋ ಹೃದಯಾಘಾತದಿಂದ ನಿಧನ

siril_pinto copy

ಉಜಿರೆ: ಉಜಿರೆ ಗ್ರಾಮದ ಹಲಕೆ ಕಾಲಿನ್‌ವಿಲ್ಲಾ ಮನೆಯ ನಿವಾಸಿ ಸಿರಿಲ್ ಪಿಂಟೋ (49ವ.) ಅವರು ಏ. 10 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ವಿದೇಶದಲ್ಲಿ ಉದ್ಯೋಗದಲ್ಲಿದ್ದವರು ಕೆಲ ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಮುಂದಿನ ತಿಂಗಳು ನಡೆಯಯಬೇಕಾಗಿದ್ದ ಅವರ ತಂದೆಯ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಹಾಗೂ ಮೂಲ ಮನೆಯ ಹೊಸ ಮನೆ ಗೃಹಪ್ರವೇಶದ ತಯಾರಿಗಳು ನಡೆಯುತ್ತಿದ್ದ ನಡುವೆಯೇ ಅವರು ನಿಧನರಾಗಿರುವುದು ಅವರ ಮನೆಯವರಿಗೆ ತೀವ್ರ ಆಘಾತಕ್ಕೆ ಕಾರಣವಾಗಿದೆ.
ಮೃತರು ತಂದೆ ಚಾರ್ಲ್ಸ್ ಪಿಂಟೋ, ತಾಯಿ ಫಿಲೋಮಿನಾ ಪಿಂಟೋ, ಪತ್ನಿ ರೀಟಾ ಸಿರಿಲ್ ಪಿಂಟೋ ಮತ್ತು ಏಕೈಕ ಪುತ್ರ ಕಾಲಿನ್ ಪಿಂಟೋ, ಸಹೋದರಿ ತೆರೇಸಾ ಪಿಂಟೋ, ಸಹೋದರರಾದ ಸಿಪ್ರಿಯಾನ್ ಪಿಂಟೋ, ಧರ್ಮಗುರುಗಳಾಗಿರುವ ಸಹೋದರ ರೆ| ಫಾ| ವಿಲಿಯಂ ಪಿಂಟೋ, ಸುದ್ದಿ ಬಿಡುಗಡೆ ಪತ್ರಿಕೆಯ ವಿಶೇಷ ಸಂಚಿಕೆ ವಿಭಾಗದ ಮುಖ್ಯಸ್ಥರಾಗಿರುವ ಹೆರಾಲ್ಡ್ ಪಿಂಟೋ ಸೇರಿದಂತೆ ಬಂಧುವರ್ಗದವರನ್ನು ಅಗಲಿದ್ದಾರೆ. ಅವರ ಸಹೋದರ ಸಹೋದರಿಯರು ವಿದೇಶದಲ್ಲಿರುವುದರಿಂದ ಅವರ ಆಗಮನದ ಬಳಿಕ ಮೃತರ ಅಂತ್ಯ ಸಂಸ್ಕಾರ ವಿಧಿಗಳು ಏ. ೧೩ ರಂದು ಸಂಜೆ ೪ ಗಂಟೆಗೆ ಸಂತ ಅಂತೋಣಿ ಚರ್ಚ್ ಉಜಿರೆಯಲ್ಲಿ ನಡೆಯಲಿದೆ ಎಂದು ಅವರ ಮನೆಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.