HomePage_Banner_
HomePage_Banner_
HomePage_Banner_

ಕಳೆಂಜ ಗ್ರಾಮ – ಕುಂಟ್ಯಾನ ಪರಿಸರಕ್ಕೊಂದು ಬೇಕು ಕುಡಿಯುವ ನೀರಿನ ವ್ಯವಸ್ಥೆ ದಶಕಗಳಿಂದ ಈ ಪ್ರದೇಶ ಕುಡಿಯುವ ನೀರಿನ ವ್ಯವಸ್ಥೆ ಅವಗಣನೆಯಾಗಿದೆ

Advt_NewsUnder_1

kalenja nirina samasye copyಕಳೆಂಜ : ನೀರಿನ ಸೆಲೆಯೇ ಇರುವ ಪಶ್ಚಿಮಘಟ್ಟ ಪ್ರದೇಶದ ತಪ್ಪಲಿನ ಗ್ರಾಮಗಳಿಗೂ ಕುಡಿಯುವ ನೀರಿನ ತತ್ವಾರ ತಲಪುತ್ತಿದೆ ಅನ್ನುವುದಕ್ಕೆ ಇದೀಗ ನೂತನವಾಗಿ ಅಸ್ತಿತ್ವಕ್ಕೆ ಬಂದ ಕಳೆಂಜ ಗ್ರಾ.ಪಂ. ನ ೧ ನೇ ವಾರ್ಡಿನಲ್ಲಿ ಬರುವ ಕುಂಟ್ಯಾನ ಪರಿಸರವೇ ಒಂದು ಸಾಕ್ಷಿ.
ಕುಂಟ್ಯಾನವನ್ನು ಕೇಂದ್ರವಾಗಿರಿಸಿ ಸುತ್ತಮುತ್ತಲಿನ ಬೇಂಗದಗಂಡಿ ಪ. ಜಾತಿ ಕಾಲನಿ, ಪುಂಡೈದ ಬನ, ದಾಸೋಡಿ, ಕೆದುಂಬೊಟ್ಟು, ನಡುಜಾರು, ಪರಮಜಲು ಎಂಬಲ್ಲಿಯ ಅಂದಾಜು ೧೦೦ ಕ್ಕಿಂತಲೂ ಅಧಿಕ ಮನೆಗಳಿಗೆ ಬೇಸಗೆಯಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್ ರಚನೆಯಾಗಬೇಕಾಗಿದೆ.
ಈ ಹಿಂದಿನ ಜಿ.ಪಂ. ಅವಧಿ ಯಲ್ಲಂತೂ ಅನೇಕ ಬಾರಿ ಕುಡಿಯುವ ನೀರಿಗಾಗಿ ಈ ಭಾಗದ ಜನತೆ ಮನವಿಗಳನ್ನು ಮಾಡುತ್ತಲೇ ಇದ್ದರೂ ಯಾವುದೇ ಜನಪ್ರತಿನಿಧಿಗಳೂ ಈ ವರೆಗೂ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸಲೇ ಇಲ್ಲವೆಂದು ಸ್ಥಳೀಯ ತೋಮಸ್ ಹೇಳ್ತಾರೆ. ಇತ್ತೀಚೆಗಿನ ಕೆಲ ವರ್ಷಗಳಿಂದ ಬೇಸಗೆಯ ತಿಂಗಳಲ್ಲಿ ಕುಡಿಯುವ ನೀರಿಗೆ ತೀರಾ ಹಾಹಾಕಾರವಿದ್ದು ಈ ವರ್ಷವಂತೂ ಕಾಡುತ್ತಿರುವ ಸುಡುಬಿಸಿಲು ಈ ಭಾಗದ ಬಾವಿ, ಕೊಳ್ಳಗಳ ಇದ್ದ ನೀರನ್ನು ಬರಿದು ಗೊಳಿಸಿದೆ. ಈಗಲೇ ಈ ಪರಿಸರದ ಸುಮಾರು ಮನೆಗಳವರು ಕುಡಿಯುವ ನೀರಿಗೆ ಕೆಲ ದೂರ ದಿಂದ ಹೊತ್ತು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೆರೆಯ ಪುದುವೆಟ್ಟು ಗ್ರಾ.ಪಂ. ಮತ್ತು ಕಳೆಂಜ ಗ್ರಾ.ಪಂ. ಗೆ ಸೇರಿದ ಈ ಪ್ರದೇಶಗಳು ಆಸುಪಾಸಲ್ಲಿದ್ದು ಪುದುವೆಟ್ಟು ಗ್ರಾ.ಪಂ.ನ ಕುಡಿಯುವ ನೀರಿನ ಪೈಪ್ ಲೈನ್‌ಗಳು ಇದೇ ಪ್ರದೇಶದ ರಸ್ತೆಯಲ್ಲಿ ಹಾದು ಹೋಗಿದೆ. ಕುಡಿಯಲು ತೀರಾ ತತ್ವಾರವಿರುವ ಕೆಲ ಮನೆಗಳಿಗಾದರೂ ಈ ನೆರೆಯ ಗ್ರಾ.ಪಂ. ನ ಪೈಪ್ ಲೈನ್ ನಿಂದ ನೀರು ಕೊಡಬಹುದಾಗಿದ್ದರೂ ಗ್ರಾ.ಪಂ. ಬೇರೆ ಅನ್ನುವ ತಾಂತ್ರಿಕ ಅಡಚಣೆಯೂ ಇದಕ್ಕೆ ಅಡ್ಡಿಯಾಗಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದ ಗ್ರಾ.ಪಂ.ಗೆ ಅನುದಾನವೇ ಬಂದಿಲ್ಲವೆನ್ನುವ ಕೊರಗಿನ ಮಧ್ಯೆಯೂ ಈ ವಾರ್ಡಿನ ಗ್ರಾ.ಪಂ. ಸದಸ್ಯೆ ಉಷಾ ಇಲ್ಲಿನ ಜನರ ನೀರಿನ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯಿರುವ ಈ ಭಾಗದ ಎಲ್ಲಾ ಮನೆಗಳವರನ್ನು ಭೇಟಿ ಮಾಡಿ ಅವರಿಂದ ಸಹಿ ಸಂಗ್ರಹಿಸಿ ಜಿ.ಪಂ. ಸದಸ್ಯರಿಗೆ , ಬೆಳ್ತಂಗಡಿ ಶಾಸಕರಿಗೆ ಮನವಿಯನ್ನು ಸಿದ್ದಪಡಿಸಿದ್ದಾರೆ. ಈ ಭಾಗದ ಸ್ಥಳೀ ಯರು ಸದ್ಯ ಕುಡಿಯುವ ನೀರಿನ ತೀರಾ ಅಗತ್ಯತೆ ಇದ್ದಲ್ಲಿಗೆ ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಮತ್ತು ಕುಂಟ್ಯಾನ ಪರಿಸರದಲ್ಲಿ ಯಾವುದಾದರೂ ಸರಕಾರಿ ಸ್ಥಳವನ್ನು ಗುರುತಿಸಿ ಮುಂದಿನ ಹಂತದ ಕ್ರಿಯಾಯೋಜನೆ ಸಂದರ್ಭ ಈ ಭಾಗದ ಕುಡಿಯುವ ನೀರಿನ ಸಮಸ್ಯೆಯನ್ನು ಸರಿಪಡಿಸಿ ಎಂದು ವಿಜಯಕರ್ನಾಟಕ ಪತ್ರಿಕೆಯ ನೀರಿನ ತತ್ವಾರ ಅಭಿಯಾನದ ಮೂಲಕ ಸಂಬಂದ ಪಟ್ಟ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿಯನ್ನು ಮಾಡಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳುತ್ತೇನೆ
ನಾನು ಈ ಭಾಗದ ಹೊಸ ಚುನಾಯಿತ ಜನಪ್ರತಿನಿಧಿಯಾಗಿದ್ದು ಇಲ್ಲಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಅನಾರೋಗ್ಯ ಕಾರಣ ಮನೆಯಲ್ಲೇ ಉಳಿದಿದ್ದರೂ ಸುದ್ದಿ ಅಭಿಯಾನಕ್ಕೆ ನಾನೂ ಸ್ಪಂದಿಸಬೇಕೆಂದು ಕೂಡಲೇ ಈ ಸ್ಥಳಕ್ಕೆ ಭೇಟಿ ನೀಡಿದ್ದೇನೆ.
ಮುಂದಿನ ಕ್ರಿಯಾ ಯೋಜನೆಯಲ್ಲಿ ಈ ಭಾಗದ ಬೇಡಿಕೆಯನ್ನು ಸೇರಿಸುತ್ತೇನೆ. ಟ್ಯಾಂಕಿಗೆ ಸೂಕ್ತ ಸ್ಥಳವನ್ನು ಈ ಪ್ರದೇಶದಲ್ಲಿ ಗುರುತಿಸಬೇಕಾಗಿದೆ. ಅಲ್ಲದೆ ತಕ್ಷಣದ ತೀರಾ ಬೇಡಿಕೆಯಿರುವ ಕಡೆಗೆ ನೆರೆಯ ಗ್ರಾ.ಪಂ. ಪೈಪ್ ಲೈನ್ ನಿಂದ ಯಾ ಕೊಳವೆ ಬಾವಿಯಿದ್ದಲ್ಲಿ ಅದರಿಂದ ನೇರವಾಗಿ ಪೈಪ್ ಲೈನ್ ನಲ್ಲಿ ನೀರನ್ನು ಕೊಡುವ ಬಗ್ಗೆಯೂ ಪುದುವೆಟ್ಟು ಗ್ರಾ.ಪಂ. ನಲ್ಲಿ ವಿಷಯವನ್ನು ಪ್ರಸ್ತಾಪಿಸುತ್ತೇನೆ. ಕಳೆಂಜ ಹೊಸ ಗ್ರಾ.ಪಂ.ನಲ್ಲಿ ಯಾವುದೇ ಹಣಕಾಸು ವ್ಯವಸ್ಥೆಯೇ ಇಲ್ಲದಿರುವುದು ಇಲ್ಲಿನ ತುರ್ತು ಸ್ಪಂದನೆಗೆ ಅಡ್ಡಿಯಾಗಲಿದೆ. ತುರ್ತು ಅಗತ್ಯಕ್ಕಾಗಿ ನಮ್ಮ ಇಲಾಖಾ ಇಂಜಿನಿಯರ್ ಗಳನ್ನು ಸ್ಥಳಕ್ಕೆ ಕರೆಸಿ ಸೂಕ್ತ ಕ್ರಮಕೈಗೊಳ್ಳಲು ಪ್ರಯತ್ನಿಸುತ್ತೇನೆ. – ಕೊರಗಪ್ಪ ನಾಯ್ಕ್, ಜಿ.ಪಂ. ಸದಸ್ಯ

ಪರಿಹಾರಕ್ಕಾಗಿ ಆಗ್ರಹ
ಕುಂಟ್ಯಾನ ಪರಿಸರದ ಹಲವು ಪ್ರದೇಶಗಳಿಗೆ ಕುಡಿಯುವ ನೀರಿನ ಅಭಾವವಿರುವುದನ್ನು ಸ್ಥಳೀಯ ಗ್ರಾ.ಪಂ. ಸದಸ್ಯೆ ಉಷಾ ಸುದ್ದಿ ಪತ್ರಿಕೆಯ ಗಮನಕ್ಕೆ ತಿಳಿಸಿದ್ದಾರೆ. ಅದರಂತೆ ಈ ಭಾಗದ ಸಮಸ್ಯೆಯನ್ನು ವರದಿ ಮಾಡಲು ಹೋದಾಗ ಸ್ಥಳೀಯ ಅನೇಕ ಮನೆಗಳವರು ತಮ್ಮ ಕಷ್ಟವನ್ನು ಪತ್ರಿಕೆಯಲ್ಲಿ ನಿವೇದಿಸಿಕೊಂಡು ಸುದ್ದಿ ಅಭಿಯಾನದ ಮೂಲಕ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರಿಕೆ ಜಿ.ಪಂ. ಸದಸ್ಯರ ಗಮನಕ್ಕೂ ಈ ಸಮಸ್ಯೆಯನ್ನು ತಂದಿದೆ. ಅನಾರೋಗ್ಯ ಕಾರಣದಿಂದ ಮನೆಯಲ್ಲೇ ಉಳಿದಿದ್ದರೂ ತನ್ನ ಕ್ಷೇತ್ರದ ಸಮಸ್ಯೆಯನ್ನು ಅರಿತ ಕೆಲವೇ ಗಂಟೆಯೊಳಗೆ ಅವರೂ ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
– ಸುಬ್ರಹ್ಮಣ್ಯ ಶಗ್ರಿತ್ತಾಯ ಕೊಕ್ಕಡ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.