ನಡ ಗ್ರಾಮದ ಅಪ್ಪುರವರಿಗೆ ಭೂತಕಟ್ಟಲು ಅಜಿಲ ಸೀಮೆ ಅರಸರಿಂದ ಪಟ್ಟಿ

appu nada ನಡ: ನಡ ಗ್ರಾಮದ ನೆಲ್ಲಿಗುಡ್ಡೆ ಕುಂಡ ಪರವರವರ ಮಗನಾದ ಅಪ್ಪು ನಡರವರಿಗೆ ಮಾ. ೨೭ರಂದು ಅಜಿಲ ಸೀಮೆಯ ೧೬ ಮಾಗಣೆಯ ಭೂತ ಕಟ್ಟುವ ಅರಸು ಪಟ್ಟಿ (ಅಧಿಕಾರ) ವನ್ನು ಅಜಿಲ ಸೀಮೆಯ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲರು ಕೊಟ್ಟಿರುತ್ತಾರೆ. ಆದ್ದರಿಂದ ಅಜಿಲ ಸೀಮೆಯ ಭೂತಕಟ್ಟುವ ಅಧಿಕಾರವನ್ನು ಪಡೆದಂತಾಯಿತು.
ಅಪ್ಪುರವರು ಹದಿನೆಂಟು ವರ್ಷಗಳ ಹಿಂದೆ ಬಂಗೇರಾ ಸೀಮೆಯ ನಾಲ್ಕು ಮಾಗಣೆಯ ಭೂತ ಕಟ್ಟುವ ಪಟ್ಟಿ (ಅಧಿಕಾರ)ವನ್ನು ದಿ| ಯುವರಾಜ ಅಜ್ರಿ ನಡಗುತ್ತು ಇವರಿಂದ ಪಡಕೊಂಡಿದ್ದಾರೆ. ನಂತರದ ದಿನಗಳಲ್ಲಿ ಮುಂಡಾಜೆ, ಪಜಿರಡ್ಕ ದೇವಸ್ಥಾನ, ತೆಂಕಕಾರಂದೂರು ದೇವಸ್ಥಾನ, ಬೆಳ್ತಂಗಡಿ ಕುತ್ಯಾರು ದೇವಸ್ಥಾನಗಳಲ್ಲಿ ರಾಜನ್ ದೈವಗಳಾದ, ಕೊಡಮಣಿತ್ತಾಯ, ಪಿಲಿಚಾಮುಂಡಿ, ಮೂರ್ತಿಲ್ಲಾಯ, ಮೂಜಿಲ್ನಾಯ, ರಕ್ತೇಶ್ವರಿ, ಸಾರಮಾಕಲಿ ಇತರ ದೈವಗಳಿಗೆ ಕೂಡ ಭೂತ ಭೂತ ಕಟ್ಟುವ ಮತ್ತು ಮೂಡಿಗೆರೆ ತಾಲೂಕಿನ ಹಿರೆಬೈಲು, ಕಳಸ, ಎಳಂದೂರು ಹಾಗೂ ಇತರ ದೇವಸ್ಥಾನಗಳಲ್ಲಿ ಕೂಡ ಭೂತ ಕಟ್ಟುತ್ತಿದ್ದಾರೆ. ಇವರಿಗೆ ಹಲವು ಕಡೆ ಸನ್ಮಾನಗಳು ಚಿನ್ನದ ಉಂಗುರ ಹಾಗೂ ಬೆಳ್ಳಿ ಕಡಗಗಳನ್ನು ಹಾಕಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.