ವೇಣೂರು, ಆರಂಬೋಡಿ ಗ್ರಾ.ಪಂ. ಚುನಾವಣೆ ನಾಮಪತ್ರ ಸಲ್ಲಿಕೆ ಶುರು; ಇನ್ನು ಅಭ್ಯರ್ಥಿಗಳೊಂದಿಗೆ ನಾಯಕರೂ ಬ್ಯುಸಿ

  ವೇಣೂರು: ವೇಣೂರು ಮತ್ತು ಆರಂಬೋಡಿ ಗ್ರಾಮ ಪಂಚಾಯತುಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ವೇಣೂರು ಗ್ರಾಮ ಪಂಚಾಯತ್‌ಗೆ ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಅವರು ಚುನಾವಣಾಧಿಕಾರಿಯಾಗಿ ನಾಮಪತ್ರ ಪಡೆದುಕೊಳ್ಳುತ್ತಿದ್ದು, ಆರಂಬೋಡಿ ಗ್ರಾಮ ಪಂಚಾಯತ್‌ಗೆ ಪಂ.ರಾಜ್.ಇಂ.ಉ. ವಿಭಾಗದ ತಮಣ್ಣಗೌಡ ಪಾಟೀಲ್ ಅವರು ಚುನಾವಣಾಧಿಕಾರಿಯಾಗಿ ನಾಮಪತ್ರ ಪಡೆದುಕೊಂಡರು.
ಎ. ೭ನೇ ತಾರೀಕು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಎ. 11ರಂದು ನಾಮಪತ್ರ ವಾಪಾಸು ಪಡೆಯಲು ಕೊನೆಯ ದಿನವಾಗಿದ್ದು, ಅಂತಮ ಅಭ್ಯರ್ಥಿಗಳ ಪಟ್ಟಿ ಅಂದು ಲಭ್ಯವಾಗಲಿದೆ.
ಮತ ಪ್ರಚಾರ: ಇತ್ತೀಚೆಗಷ್ಟೇ ಮುಗಿದ ತಾ.ಪಂ., ಜಿ.ಪಂ. ಚುನಾವಣೆಯ ಕಾವು ಆರುವ ಮೊದಲೇ ಇಲ್ಲಿ ಗ್ರಾಮ ಪಂಚಾಯತು ಚುನಾವಣೆ ಘೋಷಣೆಗೊಂಡಿದ್ದು, ನೂತನ ನಾಯಕರುಗಳು ಮತ್ತೆ ಮತ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ.
ಹೊಸ ಮುಖಗಳು: ಪಕ್ಷಗಳಲ್ಲಿ ಹಿರಿಯ ನಾಯಕರಿಗೆ, ಕಾರ್ಯಕರ್ತರಿಗೆ ಸೀಟು ನೀಡುವುದು ವಾಡಿಕೆ. ಆದರೆ ಈ ಗ್ರಾಮ ಪಂಚಾಯತು ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರು ನಾಮಪತ್ರ ಸಲ್ಲಿಸುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ತೋರಿಸಿರುವುದು ಕಂಡು ಬಂದಿದೆ.
ವೇಣೂರು ಗ್ರಾಮ ಪಂಚಾಯತು: ೨೪ ಸದಸ್ಯ ಬಲವನ್ನು ಹೊಂದಿರುವ ವೇಣೂರು ಗ್ರಾ.ಪಂ.ಗೆ ಸೋಮವಾರ ಒಂದೇ ದಿನ ೪೪ ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಸಿದವರಲ್ಲಿ ಹೊಸ ಮುಖಗಳಲ್ಲದೆ ಮಾಜಿ. ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರೂ ಇದ್ದಾರೆ.

ವಾರ್ಡ್‌ಗಳಲ್ಲಿ ಸಲ್ಲಿಕೆಯಾದ ನಾಮಪತ್ರ
ವೇಣೂರು ಗ್ರಾ.ಪಂ.: ವೇಣೂರು | ವಾರ್ಡ್‌ನಲ್ಲಿ ೭, ವೇಣೂರು ||ವಾರ್ಡ್‌ನಲ್ಲಿ ೫, ಬಜಿರೆ | ವಾರ್ಡ್‌ನಲ್ಲಿ ೬, ಬಜಿರೆ ||ರಲ್ಲಿ ೬, ಕರಿಮಣೇಲು |ರಲ್ಲಿ ೬, ಕರಿಮಣೇಲು ||ರಲ್ಲಿ ೭, ಮೂಡುಕೋಡಿ |ರಲ್ಲಿ ೨, ಮೂಡುಕೋಡಿ ||ರಲ್ಲಿ ೫ ನಾಮಪತ್ರ ಸಲ್ಲಿಕೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.