ಶ್ರದ್ಧಾ ಭಕ್ತಿಯಿಂದ ಧರ್ಮ ಜಾಗೃತಿ ಸಾಧ್ಯ: ಪ್ರೊ| ಎಸ್. ಪ್ರಭಾಕರ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 Astami samaropa kiriyadi ಉಜಿರೆ : ವೃತ್ತಿ ಜೀವನದಲ್ಲಿ ಶ್ರದ್ಧಾ ಭಕ್ತಿಯಿಂದ ಮಾಡುವಂತಹ ಎಲ್ಲಾ ಕೆಲಸಗಳಿಂದ ಧರ್ಮ ಜಾಗೃತಿ ಸಾಧ್ಯ ಎಂದು ಉಜಿರೆ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ಹೇಳಿದರು.
ಅವರು ಸೆ.6ರಂದು ದೊಂಪದಪಲ್ಕೆಯಲ್ಲಿ ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆದ ಬೆಳ್ಳಿಹಬ್ಬದ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಧನೆ ಮಾಡಿದ ಉತ್ಸಾಹಿ ಕಾರ್ಯಕರ್ತ ತಂಡ ಅಭಿನಂದನಾರ್ಹರು ಎಂದರು. ಇನ್ನೋರ್ವ ಮುಖ್ಯ ಅತಿಥಿ ಬೆಳ್ತಂಗಡಿ ಆರಕ್ಷಕರ ಠಾಣೆ ವೃತ್ತ ನಿರೀಕ್ಷಕ ಲಿಂಗಪ್ಪ ಪೂಜಾರಿ ಭಾಗವಹಿಸಿ ಮಾತನಾಡುತ್ತಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರನ್ನೂ ಜೊತೆ ಗೂಡಿಸುವುದರೊಂದಿಗೆ ಸನಾತನ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಉದಯಕುಮಾರ್ ಸಂಪಿಗೆತ್ತಾಯ ಮದ್ದಡ್ಕ ಇವರು ವಹಿಸಿ ಭಜನಾ ಮಂಡಳಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಬೆಳ್ಳಿ ಹಬ್ಬದ ಅಂಗವಾಗಿ ಸಾಧನೆಗೈದ ಕಿರಿಯಾಡಿ ದೇವಸ್ಥಾನದ ಪ್ರಧಾನ ಅರ್ಚಕ ಅನಂತರಾಮ ಕಾರಂತ, ಕೃಷ್ಣಾಷ್ಟಮಿಯ ಸ್ಥಾಪಕ ಸಲಹೆಗಾರ, ಉಡುಪಿ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ದುಗ್ಗೇ ಗೌಡ, ಉಜಿರೆ ಅಂಚೆ ವಿತರಕ ದಿನೇಶ ಗೌಡ ಕೋಡಿಜಾಲು, ನಾಟಿ ವೈದ್ಯ ಸುರೇಶ ಗೌಡ ಮಾಲ್ಡಡ್ಕ ಇವರುಗಳನ್ನು ಸನ್ಮಾನಿಸಲಾಯಿತು. ಅರ್ಹ ೧೦ ಬಡ ವಿದ್ಯಾರ್ಥಿಗಳಿಗೆ ವಸ್ತ್ರದಾನ ಹಾಗೂ ಮೂವರಿಗೆ ವೈದ್ಯಕೀಯ ಧನಸಹಾಯ ವಿತರಿಸಲಾಯಿತು.
ವೇದಿಕೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಬೆಳ್ಳಿ ಹಬ್ಬ ಸಮಿತಿ ಸಲಹಾ ಅಧ್ಯಕ್ಷ ರವಿಚಂದ್ರ ಚಕ್ಕಿತ್ತಾಯ, ಮಧುಸೂದನ್ ರಾವ್, ಕಾರ್ಯದರ್ಶಿ ಮಾಧವ ಗೌಡ ಕೊಡಂಗೆ, ಉಪಾಧ್ಯಕ್ಷ ಕೆ ಶ್ರೀಧರ ಬಂಗೇರ ಉಪಸ್ಥಿತರಿದ್ದರು. ಪ್ರಧಾನ ಸಂಚಾಲಕ ಪರಮೇಶ್ವರ ಸ್ವಾಗತಿಸಿದರು. ಅಧ್ಯಕ್ಷ ಡಿ. ಭಗೀರಥ ಪ್ರಸ್ತಾವಿಕವಾಗಿ ಮಾತನಾಡಿದರು. ಸ್ಮಿತೇಶ್ ಎಸ್. ಬಾರ್ಯ ಮತ್ತು ಮಾನಸ ಕಾರ್ಯಕ್ರಮ ನಿರೂಪಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಧರ್ಣಪ್ಪ ಗೌಡ ಧರಣಿ ವಂದಿಸಿದರು.
ಇದೇ ಸಂದರ್ಭದಲ್ಲಿ ಸಹಕಾರ ನೀಡಿದ ಹಾಗೂ ಮಾಜಿ ಅಧ್ಯಕ್ಷರುಗಳಾಗಿ ಶ್ರಮಿಸಿದವರನ್ನು ಗೌರವಿಸಲಾಯಿತು. ಮಕ್ಕಳಿಗೆ, ಸಾರ್ವಜನಿಕರಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಘ್ನೇಶ ಕಿರಿಯಾಡಿ, ರಮೇಶ ಗೌಡ, ಯಾದವ ಕುಲಾಲ್, ಗಾಯತ್ರಿ, ಸೋಮನಾಥ, ಮುರಳೀಧರ, ಶೀನಪ್ಪ ಗೌಡ, ಸೀತಾರಾಮ ಗೌಡ, ರಾಜೇಶ್ವರಿ ಚಂದ್ರಕಾಂತ, ಸನ್ಮಾನಿತರ ಪರಿಚಯ ಹಾಗೂ ವಿಜೇತರ ಪಟ್ಟಿ ವಾಚಿಸಿದರು.
ಬಳಂಜ ಶ್ರೀ ಉಮಾ ಮಹೇಶ್ವರ ಯುವಕ ಮಂಡಲದ ಸದಸ್ಯರಿಂದ ನೃತ್ಯಗಾನ ವೈಭವ ಹಾಗೂ ಆಸರೆ ಕಲಾವಿದರಿಂದ ಬಲಿಪು ವಿಠಲ ಬಲಿಪು ನಾಟಕ ಪ್ರದರ್ಶನಗೊಂಡಿತು.

ಚಿತ್ರ: ಕಿರಣ್ ಸ್ಟುಡಿಯೋ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.