ಬೆಳ್ತಂಗಡಿಯಲ್ಲಿ ಕೃಷಿ ಅಭಿಯಾನಕ್ಕೆ ಚಾಲನೆ ಆರ್ಥಿಕ ಪರಿಧಿ ಮೀರಿದರೆ ರೈತರ ಬಾಳು ದುಸ್ತರ: ಶಾಸಕ ಬಂಗೇರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

raitha jatha (3) copy

ಬೆಳ್ತಂಗಡಿ : ಕೃಷಿಯಿಂದ ತಕ್ಷಣ ಲಾಭ ಬರುವುದಿಲ್ಲ. ಕಷ್ಟಪಟ್ಟು ದುಡಿದರೆ ಅದಕ್ಕೆ ಪ್ರಕೃತಿಮಾತೆ ಒಳ್ಳೆಯ ಫಲವನ್ನು ಖಂಡಿತ ಕೊಡುತ್ತಾಳೆ. ನಮ್ಮ ಆರ್ಥಿಕ ವ್ಯಾಪ್ತಿಯನ್ನು ಮೀರಿ ನಾವು ಆಡಂಬರದ ಹಾದಿ ಹಿಡಿದರೆ ನಮ್ಮನ್ನು ನಾವೇ ಸಾಲಕ್ಕೆ ತಳ್ಳಿಕೊಂಡಂತಾಗುತ್ತದೆ ಹಾಗಾದರೆ ನಮ್ಮ ಬದುಕು ದುಸ್ತರವಾಗುತ್ತದೆ ಎಂಬ ಎಚ್ಚರಿಕೆಯ ಮಾತುಗಳನ್ನು ಶಾಸಕ ವಸಂತ ಬಂಗೇರ ಹೇಳಿದರು.
ಇಲಾಖೆ ನಡಿಗೆ ರೈತರ ಬಾಗಿಲಿಗೆ ಎಂಬ ಶಿರೋನಾಮೆಯಡಿ ಕೃಷಿ ಇಲಾಖೆ ವತಿಯಿಂದ ತಾಲೂಕಿನ ೩ ಹೋಬಳಿಗಳಲ್ಲಿ ತಲಾ ೩ ದಿನಗಳಂತೆ ೯ ದಿನಗಳಲ್ಲಿ ಹಮ್ಮಿಕೊಂಡಿರುವ ಕೃಷಿ ಅಭಿಯಾನ ಮತ್ತು ರೈತ ಯಾತ್ರೆ ಉದ್ಘಾಟನೆಯನ್ನು ಸೆ.೮ರಂದು ನೆರವೇರಿಸಿ ಅವರು ಮಾತನಾಡಿದರು.
ಬೆಳ್ತಂಗಡಿ ಅಂಭೇಡ್ಕರ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಜಯಂತಿ ಪಾಲೇದು ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಸದಸ್ಯ ಕೆ. ಶೈಲೇಶ್ ಕುಮಾರ್ ಕುರ್ತೋಡಿ ಮಾತನಾಡಿ, ಇಲಾಖೆಗಳು ರೈತರಿಗೆ ವಿವಿಧ ಸಬ್ಸಿಡಿ ಮತ್ತು ಬಡ್ಡಿರಹಿತ ಸಾಲಗಳನ್ನು ನೀಡುವ ಬದಲು ಬೆಳೆ ಬೆಳೆಯುವ ರೈತರಿಗೆ ಕ್ಷೇತ್ರ ಅಧ್ಯಯನ ಆಧರಿಸಿ ನೇರವಾಗಿ ದೊರೆಯುವಂತೆ ಪ್ರೋತ್ಸಾಹ ಧನ ನೀಡಬೇಕು ಎಂದರು. ಉಜಿರೆ ಕ್ಷೇತ್ರ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಮಾತನಾಡಿ, ಜಿಲ್ಲಾಧಿಕಾರಿಗಳು ತೊಂದರೆಯಲ್ಲಿರುವ ರೈತರು ಸಾಲವನ್ನು ಸದ್ಯಕ್ಕೆ ಕಟ್ಟಬೇಕಾಗಿಲ್ಲ ಎಂದು ಹೇಳಿಕೆಗಳನ್ನು ನೀಡಿದ್ದು, ನಿಯಮ ಮೀರುವ ರೈತರಿಗೆ ಸಹಕಾರಿ ಸಂಘದಲ್ಲಿ ಮತ್ತೆ ೧೬ ಶೇ. ಬಡ್ಡಿ ತುಂಬಬೇಕಾಗುತ್ತದೆ. ಇದು ಆತನನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಅದರ ಬದಲಾಗಿ ಬಡ್ಡಿರಹಿತ ಸಾಲದ ವಾಯಿದೆಯನ್ನು ಮುಂದುವರಿಸುವಲ್ಲಿ ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು. ಬೆಳ್ತಂಗಡಿ ಎ.ಪಿ.ಎಂ.ಸಿ. ಅಧ್ಯಕ್ಷ ಧರಣೇಂದ್ರ ಕುಮಾರ್ ಮಾತನಾಡಿ, ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಸರಕಾರ ಸ್ಥಾಪಿಸಿದ ಸಂಸ್ಥೆಯೇ ಎಪಿಎಂಸಿ. ಆದರೆ ಬಹುತೇಕ ರೈತರಿಗೆ ಈ ವಿಚಾರವೇ ಗೊತ್ತಿಲ್ಲ. ಕೆಲ ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಅಡಿಕೆಗೆ ಭಾರೀ ಬೆಲೆಯಿದ್ದು ಎಪಿಎಂಸಿ ಯಲ್ಲಿ ರೈತರು ತಮ್ಮ ಬೆಳೆಗಳನ್ನು ಸುರಕ್ಷಿತವಾಗಿ ದಾಸ್ತಾನಿರಿಸಿದರೆ ಈ ಟೆಂಡರ್ ಮೂಲಕ ಬೆಳೆಗಾರರಿಗೆ ಉತ್ತಮ ದರ ನೀಡಲು ಸಾಧ್ಯವಿದೆ. ಬಿಳಿ ಚೀಟಿಯಲ್ಲಿ ವ್ಯವಹಾರ ನಡೆಸುವುದನ್ನು ಬಿಡಬೇಕು ಎಂದರು. ಜಂಟಿ ಕೃಷಿ ನಿರ್ದೇಶಕ ಡಾ| ಹೆಚ್. ಕೊಂಡೇಗೌಡ ಮಾತನಾಡಿ ರೈತರು ಸಮಗ್ರ ಕೃಷಿ ತತ್ವ ಅಳವಡಿಸಿಕೊಂಡರೆ ಯಾವತ್ತೂ ನಷ್ಟ ಬರಲು ಸಾಧ್ಯವಿಲ್ಲ ಎಂದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ನ.ಪಂ. ಅಧ್ಯಕ್ಷೆ ನಳಿನಿ ವಿಶ್ವನಾಥ, ಬೆಳ್ತಂಗಡಿ ಕೃಷಿ ಸಮಾಜ ಅಧ್ಯಕ್ಷ ಮಹಾವೀರ ಜೈನ್, ತಾ.ಪಂ. ವ್ಯವಸ್ಥಾಪಕ ಗಣೇಶ್ ಪೂಜಾರಿ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿ, ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕಿ ಶ್ರೀಮತಿ ದಿವ್ಯಾ, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಸುಭಾಶ್ಚಂದ್ರ, ತಾ| ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ, ಎಪಿಎಂಸಿ ಕಾರ್ಯದರ್ಶಿ ಕೃಷ್ಣ ಮೂರ್ತಿ, ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ, ಪುತ್ತೂರು ತಾ| ಸಹಾಯಕ ಕೃಷಿ ನಿರ್ದೇಶಕ ಶಿವಶಂಕರ್, ಆರ್‌ಎಫ್‌ಒ ಸುಂದರ ಶೆಟ್ಟಿ, ಗ್ರಾ. ಯೋ ಯೋಜನಾಧಿಕಾರಿ ರೂಪಾ ಜಿ. ಜೈನ್ ಮೊದಲಾದವರು ಉಪಸ್ಥಿತರಿದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಲಕ್ ಪ್ರಸಾದ್ ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಕೃಷಿ ಅಧಿಕಾರಿ ನಾರಾಯಣ ಪೂಜಾರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
ಚಿದಾನಂದ ಹೂಗಾರ್ ಧನ್ಯವಾದವಿತ್ತರು. ಕಾರ್ಯಕ್ರಮಕ್ಕೂ ಮೊದಲು ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ರೈತ ಬಾಂಧವರ ಬೃಹತ್ ಜಾಥಾ ನಡೆಯಿತು.
ಈ ಜಾಥಾದಲ್ಲಿ ಕೃಷಿ ಯಂತ್ರೋಪಕರಣಗಳು, ಎತ್ತು, ಕೋಣಗಳು, ಹಿಂದಿನ ಕಾಲದಲ್ಲಿ ರೈತರು ಬಳಸುತ್ತಿದ್ದ ಮರದ ಚಕ್ರದ ಗಾಡಿಗಳು, ರೈತನ ವೇಷದಾರಿಗಳು ವಿಶೇಷ ಮೆರುಗು ನೀಡಿದರು. ಶಾಸಕ ವಸಂತ ಬಂಗೇರ ಅವರೇ ಹಸಿರು ನಿಶಾನೆ ತೋರಿ ಜಾಥಾ ಉದ್ಘಾಟಿಸಿದ್ದಲ್ಲದೆ ಸುಮಾರು ೧ ಕಿ. ಮೀ ದೂರ ಕಾಲ್ನಡಿಗೆಯಲ್ಲೇ ಸಾಗಿಬಂದು ರೈತರಲ್ಲಿ ಹೊಸ ಹುರುಪು ಮೂಡಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.