ಬೆಳ್ತಂಗಡಿ, ಉಜಿರೆ, ಮಡಂತ್ಯಾರು ವರ್ಣ ರಂಜಿತ ಜೇಸಿ ಸಪ್ತಾಹಕ್ಕೆ ವೈಭವದ ಚಾಲನೆ

Advt_NewsUnder_1
Advt_NewsUnder_1
Advt_NewsUnder_1

  jci newಬೆಳ್ತಂಗಡಿಯ ಜೇಸಿ ಕಾರ್ಯಕ್ರಮವನ್ನು ಪೀತಾಂಬರ ಹೇರಾಜೆ ಹಾಗೂ ತುಳುಚಿತ್ರ ನಟ ಅರ್ಜುನ್ ಕಾಪಿಕಾಡ್ ದೀಪ ಬೆಳಗಿಸಿ ಉದ್ಘಾಟಿಸುತ್ತಿರುವುದು.

ಬೆಳ್ತಂಗಡಿ : ಸೆ. 9 ರಿಂದ 15 ರ ವರೆಗೆ ಜೆ.ಸಿ.ಐ. ಮಂಜುಶ್ರಿ ವತಿಯಿಂದ ಗ್ರಾಂಡ್ ಪ್ರಿಕ್ಸ್-2015ಎಂಬ ಶಿರೋನಾಮೆಯಡಿ, ಮಡಂತ್ಯಾರು ಜೆಸಿಐ ವತಿಯಿಂದ ಬೆಳ್ಳಿತೇರು ಶಿರೋನಾಮೆಯಡಿ ಹಾಗೂ ಜೆ.ಸಿ.ಐ. ಉಜಿರೆ ವತಿಯಿಂದ ಹೀಗೇ ತಾಲೂಕಿನ ಮೂರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದೇ ದಿನಾಂಕಗಳಲ್ಲಿ ಸಂಭ್ರಮದ ಜೇಸಿ ಸಪ್ತಾಹ ನಡೆಯಲಿದೆ. ಮೂರೂ ಸಂಸ್ಥೆಗಳಲ್ಲೂ ಸೆ. 9ರಂದು ವರ್ಣರಂಜಿತ ಉದ್ಘಾಟನೆ ನೆರವೇರಿತು.
ಬೆಳ್ತಂಗಡಿ ಜೇಸಿ ಸಪ್ತಾಹ:
ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದ ಆಶಾ ಸಾಲಿಯಾನ್ ಸಭಾಂಗದಲ್ಲಿ ನಡೆಯುವ ಜೇಸಿ ಸಪ್ತಾಹವನ್ನು ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ ಉದ್ಘಾಟಿಸಿದರು. ಜೆಸಿಐ ಅಧ್ಯಕ್ಷ ಚಿದಾನಂದ ಇಡ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆ.ಸಿ.ಐ. ವಲಯಾಧ್ಯಕ್ಷ ಕೃಷ್ಣಮೋಹನ್ ಪಿ. ಎಸ್, ಖ್ಯಾತ ಚಲನ ಚಿತ್ರ ನಟ ಅರ್ಜುನ್ ಕಾಪಿಕಾಡ್, ನೋಟರಿ ನ್ಯಾಯವಾದಿ ಭಗೀರಥ ಜಿ ಮುಖ್ಯ ಅತಿಥಿಯಾಗಿದ್ದರು. ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಸ್ಮಿತೇಶ್ ಬಾರ್ಯ ಅವರಿಗೆ ಸಾಧನಾ ಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಬಳಿಕ ಡ್ಯಾನ್ಸ್- ಡ್ಯಾನ್ಸ್ ಎಂಬ ಫಿಲ್ಮಿ ಡ್ಯಾನ್ಸ್ ಸ್ಪರ್ಧೆ ನಡೆಯಿತು. ಕೇಶವ ಪೈ, ತುಕರಾಮ ಬಿ. ಕಾರ್ಯಕ್ರಮ ನಿರ್ದೇಶನ ನೀಡಿದರು. ವಸಂತ ಶೆಟ್ಟಿ ಶ್ರದ್ಧಾ, ಸ್ವರೂಪ್, ಮಂಜುನಾಥ ರೈ, ಪ್ರೀತಂ, ಸ್ವಾತಿ, ಟುವಿತ್, ರತೀಶ್ ರಾವ್ ಸಂಯೋಜಕರಾಗಿದ್ದರು. ಜೆ.ಸಿ.ಐ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್, ಸಂಯೋಜಕ ಜಿತೇಶ್ ಕುಮಾರ್, ದೇವಿಪ್ರಸಾದ್,
ಪಲ್ಲವಿರಾಜು, ಗಣೇಶ್ ಬಿ ಶಿರ್ಲಾಲು, ಪ್ರಶಾಂತ್ ಲಾಲ, ಪವಿತ್ರ ಚಿದಾನಂದ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿದಿನ ಸಂಜೆ ಸಭಾ ಕಾರ್ಯಕ್ರಮ ಮತ್ತು ದಿನಕ್ಕೊಬ್ಬ ಸಾಧಕರಿಗೆ ಸಾಧನಾ ಶ್ರೀ ಪ್ರಶಸ್ತಿ ನೀಡುವ ಕಾರ್ಯಕ್ರಮ ನಡೆಯಲಿದೆ.
ಮಡಂತ್ಯಾರು ಜೇಸಿ ಸಪ್ತಾಹ:
ಮಡಂತ್ಯಾರು ಜೇಸಿಯು ತಮ್ಮ ಸಪ್ತಾಹವನ್ನು ಬೃಹತ್ ಸ್ವಚ್ಚತಾ ಜಾಥಾ, ಪೈಪ್ ಕಂಪೋಸ್ಟ್ ಕಾರ್ಯಾಗಾರ ನಡೆಸುವ ಮೂಲಕ, ಸಾರ್ವಜನಿಕ ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ನವೀಕರಣ ಗೊಳಿಸಿದ ಶೌಚಾಲಯವನ್ನು ಲೋಕಾರ್ಪಣೆಗೊಳಿಸುವ ಮೂಲಕ ವಿಶಿಷ್ಟವಾಗಿ ತನ್ನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.
ಮುಖ್ಯ ಅತಿಥಿಗಳಾಗಿ ವಲಯಾಧ್ಯಕ್ಷ ಕೃಷ್ಣಮೋಹನ್ ಪಿ. ಎಸ್, ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಜೋಸೆಫ್ ಎನ್.ಎಂ, ಪುಂಜಾಲಕಟ್ಟೆ ಸರಕಾರಿ ಪ್ರೌಢ ಶಾಲೆಯ ಉಪಪ್ರಾಂಶುಪಾಲೆ ಅರ್ಚನಾ ಸಿ.ಪಿ, ಮಡಂತ್ಯಾರು ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಕೆ, ಮಾಲಾಡಿ ಪಂ. ಅಧ್ಯಕ್ಷ ಬೇಬಿ ಸುವರ್ಣ, ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತರಾಗಿ ಮಡಂತ್ಯಾರು ಪಂ. ಪಿಡಿಒ ನಾಗೇಶ್, ಮಾಲಾಡಿ ಪಂ. ಪಿಡಿಒ ರಾಘವೇಂದ್ರ ಪಾಟೀಲ್, ಉದ್ಯಮಿಗಳಾದ ಅನಿಲ್ ಅಧಿಕಾರಿ, ಬಿ. ಹೈದರ್, ಜೆರೋಂ ಡಿಸೋಜಾ, ಅಟೋ ಸಂಘದ ಅಧ್ಯಕ್ಷ ನವೀನ್ ಮೊದಲಾದವರು ಉಪಸ್ಥಿತರಿದ್ದರು. ಜೆ.ಸಿ.ಐ. ಅಧ್ಯಕ್ಷ ಐವನ್ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ಸಂಘಟಕರಾದ ರಾಜೇಶ್ ಪುಂಜಾಲಕಟ್ಟೆ, ವಿನ್ಸೆಂಟ್ ಮೋರಾಸ್, ಶ್ರೀಧರ ಆಚಾರ್ಯ, ಅಜಯ್ ಜೆ. ಶೆಟ್ಟಿ, ಜ್ಯೂಲೆಟ್ ಸಿಕ್ವೇರಾ ಮೊದಲಾದವರು ಸಹಕರಿಸಿದರು.
ಸಂಜೆ ಬೃಹತ್ ಮೆರವಣಿಗೆ ಮತ್ತು ಉದ್ಘಾಟನಾ ಸಮಾರಂಭ ನಡೆಯಿತು. ಮಡಂತ್ಯಾರು ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ಲಾರೆನ್ಸ್ ಮಸ್ಕರೇನ್ಹಸ್ ಉದ್ಘಾಟನೆ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶ್ರೀಧರ ಭಟ್ ಪೇಜಾವರ, ರಾಧಾಕೃಷ್ಣ ಬಂಟ್ವಾಳ, ವರದರಾಜ ಪೈ, ಗ್ರೆಗೋರಿ ಸೇರ, ಉದಯ ಕುಮಾರ್ ಜೈನ್, ಕಿರಣ್ ಕುಮಾರ್ ಶೆಟ್ಟಿ, ಬ್ಲಾನಿ ಡಿಸೋಜಾ, ಬಿ. ನಝೀರ್, ಲ್ಯಾನ್ಸಿ ಡಿಸೋಜಾ ಮೊದಲಾದ ಗಣ್ಯರು ಸಮಾರಂಭಕ್ಕೆ ಮೆರುಗು ನೀಡಿದರು.
ಉಜಿರೆ ಜೇಸಿ ಸಪ್ತಾಹ:
ಉಜಿರೆಯಲ್ಲೂ ಕೂಡ ಸ್ವಚ್ಚತಾ ಅಭಿಯಾನ ನಡೆಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಜೇಸಿ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಎಸ್.ಡಿ.ಎಂ ಪ. ಪೂ. ಕಾಲೇಜಿನ ಪ್ರಾಂಶುಪಾಲ ಎನ್. ದಿನೇಶ್ ಚೌಟ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಶರತ್‌ಕೃಷ್ಣ ಪಡುವೆಟ್ನಾಯ, ಉದ್ಯಮಿಗಳಾದ ಅರುಣ್ ಕುಮಾರ್ ಉಪಸ್ಥಿತರಿದ್ದರು. ಸಂಜೆ ನಡೆದ ಸಭಾ ಕಾರ್ಯಕ್ರಮವನ್ನು ಗುರುದೇವ ಕಾಲೇಜು ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ಉದ್ಘಾಟಿಸಿದರು. ಜೇಸಿ ವಲಯ ಉಪಾಧ್ಯಕ್ಷ ಸತೀಶ್ ಪೂಜಾರಿ, ಚಲನಚಿತ್ರ ನಿರ್ಮಾಪಕ ಚಂದ್ರಹಾಸ ಶೆಟ್ಟಿ, ಇವರುಗಳು ಅತಿಥಿಗಳಾಗಿದ್ದರು. ಯಕ್ಷಗಾನ ಕ್ಷೇತ್ರದ ಮೋಹನ್ ಬೈಪಡಿತ್ತಾಯ, ಸಮಾಜ ಸೇವಕ ಹೆರಾಲ್ಡ್ ಡಿಸೋಜಾ, ಹಮೀದ್(ಆರೋಗ್ಯ ರಕ್ಷಾ ಆಂಬುಲೆನ್ಸ್) ಇವರನ್ನು ಸನ್ಮಾನಿಸಲಾಯಿತು. ಮೂರೂ ಜೇಸಿ ಗಳ ಸಪ್ತಾಹದ ಕಾರ್ಯಕ್ರಮಕ್ಕೆ ಸೆ. ೧೫ ರಂದು ಅಂತಿಮ ತೆರೆ ಬೀಳಲಿದ್ದು ಪ್ರತಿದಿನ ವಿಭಿನ್ನ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.