ತೆಕ್ಕಾರು: ಗ್ರಾಮದ ಹೆಚ್ಚಿನ ಭಾಗದಲ್ಲಿ ಕೆಲವು ತಿಂಗಳುಗಳಿಂದ ನೆಟ್ವರ್ಕ್ ಸಮಸ್ಯೆಯಿಂದ ಹೈರಾಣಾದ ತೆಕ್ಕಾರು ಜನತೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಏರ್ಟೆಲ್ ಹಾಗೂ ಜಿಯೋ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು ಮರ ಹತ್ತಿ ಮಾತಾಡುವ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಪ್ರಮುಖ ಸಂದೇಶ ಬಂದರೆ ಡೌನ್‌ಲೋಡ್ ಮಾಡಲು ಹರಸಾಹಸ ಪಡಬೇಕಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಈ ಸಮಸ್ಯೆಯಿಂದಾಗಿ ಕೆಲವು ಇಲಾಖೆಯಿಂದ ಬರುವ ಪ್ರಮುಖವಾದ ಮೆಸೇಜ್ ಡೌನ್‌ಲೋಡ್ ಆಗದೆ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಪ್ರಸಂಗವೂ ನಡೆದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಗ್ರಾಮದಲ್ಲಿ ಈಗ ಇರುವ ಟವರ್ ಪವರನ್ನು ಕಡಿಮೆ ಮಾಡಿರಬಹುದು ಅದರಿಂದ ಈ ಸಮಸ್ಯೆ
ಉಂಟಾಗಿರಲೂ ಸಾಧ್ಯತೆ ಇದೆ ಎಂದೂ ಇಲ್ಲಿಯ ಜನರ ಅಭಿಪ್ರಾಯವೂ ಆಗಿದೆ. ಸಮಸ್ಯೆ ಏನಿದ್ದರೂ ಇದಕ್ಕೆ ಸಂಬಂಧ ಪಟ್ಟವರು ತಕ್ಷಣ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

