Site icon Suddi Belthangady

ಉಜಿರೆ: ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ

ಉಜಿರೆ: ಎಸ್.ಡಿ.ಎಂ ಮಲ್ಟಿಷ್ಪೆಷಾಲಿಟಿ ಆಸ್ಪತ್ರೆಯ 2026ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿಯನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಿ.16ರಂದು ಬಿಡುಗಡೆಗೊಳಿಸಿದರು.

ನಿತ್ಯ ಪಂಚಾಂಗದೊಂದಿಗೆ ಸಂದರ್ಶನ ವೈದ್ಯರ ಲಭ್ಯತೆಯ ವಿವರ, ಆಸ್ಪತ್ರೆಯ ರಜಾ ದಿನಗಳ ವಿವರ, ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳು, ಮುಖ್ಯ ವಿಷಯಗಳನ್ನು ಬರೆದಿಡಲು ಪ್ರತ್ಯೇಕ ಜಾಗ ಹೊಂದಿರುವ ಕ್ಯಾಲೆಂಡರ್ ಇದಾಗಿದೆ. ಇದರಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ಉಜಿರೆ ಎಸ್.ಡಿ.ಎಂ ಮಲ್ಟಿಷ್ಪೆಷಾಲಿಟಿ ಆಸ್ಪತ್ರೆಯ ಸಂಪೂರ್ಣ ಮಾಹಿತಿ ಹಾಗೂ ಅಪಾಯಿಂಟ್‌ಮೆಂಟ್ ಕೂಡ ಪಡೆಯಲು ಅವಕಾಶ ಇರುತ್ತದೆ. ಅತ್ಯಾಕರ್ಷಕ ಮತ್ತು ಉಪಯುಕ್ತವಾದ ಕ್ಯಾಲೆಂಡರ್ ಇದಾಗಿದ್ದು, ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ., ಪರ್ಚೇಸ್ ಮೆನೇಜರ್ ಅಜಯ ಕುಮಾರ್ ಪಿ.ಕೆ., ಮಾರ್ಕೆಟಿಂಗ್ ಎಕ್ಷ್‌ಕ್ಯೂಟಿವ್ ಸುಮಂತ್ ರೈ, ಮಾನವ ಸಂಪನ್ಮೂಲ ಅಧಿಕಾರಿ ಸೌಮ್ಯ, ಬಿಲ್ಲಿಂಗ್ ಇನ್-ಚಾರ್ಜ್ ದೀಪು, ಸಂಪರ್ಕಾಧಿಕಾರಿ ಚಿದಾನಂದ ಡಿ.ಆರ್. ಉಪಸ್ಥಿತರಿದ್ದರು.

Exit mobile version