ಬಂದಾರು: ಶಿವಫ್ರೆಂಡ್ಸ್ ಕುರಾಯ -ಖಂಡಿಗ ಮೈರೋಳ್ತಡ್ಕ -ಬಂದಾರು ಗ್ರಾಮ ಆಶ್ರಯದಲ್ಲಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ 10ನೇ ವರ್ಷದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ, ಪುರುಷರ ಮತ್ತು ಮಹಿಳೆಯರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ ಡಿ.14ರಂದು ಶಿವಫ್ರೆಂಡ್ಸ್ ಕ್ರೀಡಾಂಗಣದಲ್ಲಿ ನೆರವೇರಿತು.
ಬೆಳಗ್ಗೆ ಪ್ರಗತಿಪರ ಕೃಷಿಕರಾದ ಶ್ರೀಪತಿ ಭಟ್ ಮುಂಡೂರು ಅವರು ದೀಪ ಪ್ರಜ್ವಲನೆಗೊಳಿಸಿ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಶಿವಫ್ರೆಂಡ್ಸ್ ಕುರಾಯ ಖಂಡಿಗದ ಅಧ್ಯಕ್ಷ ಸುಂದರ ಗೌಡ ಖಂಡಿಗ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕರಾದ ಡೊoಬಯ್ಯ ಗೌಡ ಖಂಡಿಗ, ನಿರಂಜನ ಗೌಡ ನಡುಮಜಲು, ಬಂದಾರು ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿಎ ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಳ, ಉದಯ ಎಂ.ಸಿ.ಕೆ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಿವಫ್ರೆಂಡ್ಸ್ ಕುರಾಯ ಖಂಡಿಗದ ಅಧ್ಯಕ್ಷ ಸುಂದರ ಗೌಡ ಖಂಡಿಗ ಅಧ್ಯಕ್ಷತೆ ವಹಿಸಿದ್ದರು. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಧರ್ಮಸ್ಥಳ ಪೊಲೀಸ್ ಠಾಣೆ ಉಪ ನೀರಿಕ್ಷಕ ಸಮರ್ಥ್ ಆರ್ ಗಾಣಿಗೇರ, ಮುಗೇರಡ್ಕ ಮೊಗ್ರು ದ.ಕ.ಜಿ.ಪ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಮಾಧವ ಗೌಡ ದೊರ್ತೋಡಿ, ವಾಣಿ ಪಿ.ಯು ಕಾಲೇಜು ವಾಣಿಜ್ಯ ವಿಭಾಗ ಮುಖ್ಯಸ್ಥ ಶಂಕರ್ ರಾವ್ ಅವರನ್ನು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ಶಿವಫ್ರೆಂಡ್ಸ್ ಸಂಘದ ಸಮಾಜ ಮುಖಿ ಚಟುವಟಿಕೆ, ಹಾಗೂ ಶಿವಫ್ರೆಂಡ್ಸ್ ಸಂಘವು ಮಾಡಿರುವ 10 ವರ್ಷದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಅಶೋಕ್ ಕುಲಾಲ್ ಕಣಿಯೂರು -ಸಮಾಜಸೇವೆ, ಜಯರಾಮ ಶೆಟ್ಟಿ ಪದ್ಮುಂಜ ನಿವೃತ್ತ ಕಾರ್ಯದರ್ಶಿ ಹಾಲು ಉತ್ಪಾದಕರ ಸಹಕಾರಿ ಸಂಘ ಪದ್ಮುಂಜ, ತೀರ್ಥೇಶ್ ವಿಟ್ಲ ರಾಷ್ಟಮಟ್ಟದ ಕಬಡ್ಡಿ ಕ್ರೀಡಾಪಟು, ಯಕ್ಷಿತಾ ಜೆ. ದಂಡುಗ ರಾಷ್ಟ ಮಟ್ಟದ ವಾಲಿಬಾಲ್ ಕ್ರೀಡಾಪಟು, ರಕ್ಷಿತಾ ಜೆ. ದಂಡುಗ ರಾಷ್ಟ ಮಟ್ಟದ ವಾಲಿಬಾಲ್ ಕ್ರೀಡಾಪಟು, ಶ್ರಾವ್ಯ ಮೊಗ್ರು ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು, ಅದಿತಿ ಮುಗೆರೋಡಿ ಯೋಗದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಲ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಯಶವಂತ ಗೌಡ ಬೆಳಾಲು, ಪದ್ಮುಂಜ ಸಿ ಎ ಬ್ಯಾಂಕ್ ನಿವೃತ್ತ ಕಾರ್ಯನಿರ್ವಾಣಾಧಿಕಾರಿ ರಘುಪತಿ ಭಟ್ ಅನಾಬೆ, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಪರಮೇಶ್ವರಿ ಕೆ. ಗೌಡ, ಸುಚಿತ್ರ ಮುರ್ತಾಜೆ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ, ಧರ್ಮಸ್ಥಳ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಉಪಸ್ಥಿತರಿದ್ದರು.
ಸುಷ್ಮಾ ಜಯ ಪೂಜಾರಿ ಮುರ್ತಾಜೆ ಸನ್ಮಾನ ಪತ್ರ ವಾಚಿಸಿದರು. ಹೆಚ್ಚಿನ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ತೃಷಾ, ತೃಪ್ತಿ, ಸಾನ್ವಿ ಪ್ರಾರ್ಥನೆಗೈದು, ಡೊoಬಯ್ಯ ಗೌಡ ಖಂಡಿಗ ಸ್ವಾಗತಿಸಿ, ಭರತೇಶ್ ಗೌಡ ನೆಲ್ಲಿದಕಂಡ ನಿರೂಪಿಸಿ ಧನ್ಯವಾದವಿತ್ತರು.

