Site icon Suddi Belthangady

ಪಿಲಿಗೂಡು: ಶ್ರೀ ಚಾಮುಂಡೇಶ್ವರಿ ದೇವ‍‍ಸ್ಥಾನದ ಲಲಿತಾ ಸಹಸ್ರನಾಮ ಹೋಮ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಪಿಲಿಗೂಡು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಜ‌‌.15ರಂದು ವೇದಮೂರ್ತಿ ಕೆ.ಎಂ. ಸುಬ್ರಹ್ಮಣ್ಯ ಮುಚ್ಚಿನ್ನಾಯ ಇವರ ವೈದಿಕ ನೇತೃತ್ವದಲ್ಲಿ 101 ಎಳನೀರು ಅಭಿಷೇಕ ನವಕ ಕಲಶ ಅಭಿಷೇಕ, ಲಲಿತ ಸಹಸ್ರನಾಮ ಹೋಮ ಹಾಗೂ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಹಾಗೂ ಸಂಜೆ 7 ರಿಂದ ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿ ಹಿತ್ಲು ಮಂಗಳೂರು ಅವರಿಂದ ಯಕ್ಷಗಾನ ಬಯಲಾಟ ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಂಕ್ರಾಂತಿಯ ಪ್ರಯುಕ್ತ ನಡೆಯದ ಪೂಜಾ ಕಾರ್ಯಕ್ರಮದ ನಂತರ ಬಿಡುಗಡೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಅರ್ಚಕ ವೃಂದದವರು ಗೌರವಾಧ್ಯಕ್ಷರಾದಂತಹ ಪದ್ಮನಾಭ ಶಿಲ್ಪಿ ಭಜನ ಮಂಡಳಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಗೌರವ ಸಲಹೆಗಾರರು ಕುಣಿತ ಭಜನಾ ಗುರು ನಾಗೇಶ ಬಿ. ನೆರಿಯ ಮತ್ತು ಮಿತ್ರ ಮಂಡಳಿಯ ಸದಸ್ಯರು ಮತ್ತು ಊರವರು ಭಾಗವಹಿಸಿದ್ದರು.

Exit mobile version