Site icon Suddi Belthangady

ದೈಪಿಲ ಸ್ಪೋರ್ಟ್ಸ್ ಕ್ಲಬ್ ನಿಂದ ಶಿಶಿರ್ ಜಯವಿಕ್ರಮ್ ಗೆ ಸನ್ಮಾನ

ಕರಾಯ: ದೈಪಿಲ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜನೆ ಮಾಡಿದ ಸಾರ್ವಜನಿಕ ಕ್ರೀಡಾ ಕೂಟದಲ್ಲಿ
ಹದಿನಾಲ್ಕು ವರ್ಷದೊಳಗಿನ ವಯೋಮಾನದ ಬಾಲಕರ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾ ಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಕೂಟದ ಸರ್ವಾಂಗೀಣ ಆಟಗಾರ ಪ್ರಶಸ್ತಿ ಪಡೆದು ಹಿಮಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟ(sgfi)ಗೆ ಆಯ್ಕೆಯಾದ ಶಿಶಿರ್ ಜಯವಿಕ್ರಮ್ ನನ್ನು ಗೌರವಿಸಿ ಸನ್ಮಾನಿಸಸಲಾಯಿತು.

ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮವನ್ನು
ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್, ಕರಾಯ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ್ ಕೊಲ್ಲಿ ನೆರವೇರಿಸಿದರು.

ಅದ್ಯಕ್ಷತೆಯನ್ನು ಉಮಾನಾಥ ಕೋಟ್ಯಾನ್ ಆಚಾರಿಕೋಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಮುಗ್ಗ ಗುತ್ತಿನ ಪ್ರಶಾಂತ್ ಕಂಡೆತ್ಯಾರ್, ಬಾರ್ಯ ಗ್ರಾಮ ಪಂಚಾಯತ್ ಸದಸ್ಯ ಧರ್ಣಪ್ಪ ಗೌಡ, ಪಂಚಾಯತ್ ಸದಸ್ಯ ನವೀನ್ ಕುಮಾರ್ ಪಂಜಿಕುಡೇಲು, ಸುಧಾ ಉಮೇಶ್ ದೈಪಿಲ , ಸಿಎ ಬ್ಯಾಂಕ್ ಅಧ್ಯಕ್ಷ ಜಯಾನಂದ ಕಲ್ಲಾಪು ,ಬಾಲಕೃಷ್ಣ ಶೆಟ್ಟಿ ಸುಣ್ಣಾಜೆ, ಪ್ರಶಾಂತ್ ಶಾಂತಿ ದೈಪಿಲ, ದೈಪಿಲ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗುಣಕರ ಅಗ್ನಾಡಿ ಸ್ವಾಗತಿಸಿದರು. ಸಾರ್ವಜನಿಕರಿಗೆ ವಾಲಿಬಾಲ್, ಕಬಡ್ಡಿ, ಇತರ ವೈಯಕ್ತಿಕ ಕ್ರೀಡಾ ಸ್ಪರ್ಧೆಗಳು ನಡೆಯಿತು. ದೈಹಿಕ ಶಿಕ್ಷಕ ವಿನಯ ಕುಮಾರ್ ಕಲ್ಲಾಪು ಕಾರ್ಯಕ್ರಮ ನಿರ್ವಹಿಸಿದರು.

Exit mobile version