Site icon Suddi Belthangady

ಶಿಶಿಲ: ಕಾಲೋನಿಯಲ್ಲಿ ಮುಂದುವರೆದ ಕಾಡಾನೆ ಉಪಟಳ-ಗಾಯಗೊಂಡ ಆನೆ ಇರುವ ಶಂಕೆ ವ್ಯಕ್ತ ಪಡಿಸಿದ ಸ್ಥಳೀಯರು

ಶಿಶಿಲ: ಕಳೆದ ಹಲವಾರು ದಿನಗಳಿಂದ ಕಾಡಾನೆಗಳ ತಂಡ ಇಲ್ಲಿನ ಮಲೆ ಕುಡಿಯ ಕಾಲೋನಿಯಯಲ್ಲಿ ಬೀಡು ಬಿಟ್ಟಿದ್ದು ಸುತ್ತಮುತ್ತಲಿನ ತೋಟಗಳಿಗೆ ಧಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಸಹಿತ ಇನ್ನೂ ಹಲವಾರು ಉಪಬೆಳೆಗಳನ್ನು ನಾಶ ಪಡಿಸಿದೆ.

ಡಿ. 15ರಂದು ರಾತ್ರಿಯು ಎಂದಿನಂತೆ ಆನೆಗಳು ತೋಟಕ್ಕೆ ನುಗ್ಗಿದ್ದು ಆನೆಯ ಹೆಜ್ಜೆ ಗುರುತು ಇರುವ ಕಡೆ ರಕ್ತ ಮತ್ತು ಹುಳಗಳು ಪತ್ತೆಯಾಗಿದ್ದು ಇದರಿಂದ ಆನೆಯೊಂದಕ್ಕೆ ಗಾಯವಾಗಿರುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಡಿ. 16ರಂದು ಮುಂಜಾನೆ ಅರಣ್ಯ ಗಸ್ತು ಪಾಲಕ ಸಚಿನ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬೆಳಗಿನ ಹೊತ್ತಲ್ಲಿ ಗಾಯಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಲು ಸಾಧ್ಯವಿಲ್ಲದ ಕಾರಣ ರಾತ್ರಿ ಹೊತ್ತಲ್ಲಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Exit mobile version