Site icon Suddi Belthangady

ನಿಡ್ಲೆ: ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರತಿಭಾ ದಿನಾಚರಣೆ: ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿನ ಪ್ರತಿಭಾ ದಿನಾಚರಣೆಯ ಸಂದರ್ಭದಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ ನ ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ಪೂರ್ವರಂಗ ಮತ್ತು ಯಕ್ಷಗಾನ ಮೇದಿನಿ ನಿರ್ಮಾಣ ಪ್ರದರ್ಶನಗೊಂಡಿತು. ಒಟ್ಟು 30 ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಟ್ರಸ್ಟ್‌ನ ಸಂಚಾಲಕ ವಾಸುದೇವ ಐತಾಳ್ ಅವರು ಪಟ್ಲ ಫೌಂಡೇಶನ್ ನಿಂದ ಶಾಲೆಗಳಲ್ಲಿ ನಡೆಯುವ ಯಕ್ಷ ಶಿಕ್ಷಣ ಕಾರ್ಯಕ್ರಮ ಬಗ್ಗೆ ತಿಳಿಸುತ್ತಾ ನಿಡ್ಲೆ ಶಾಲೆಯಲ್ಲಿ ಮೂರು ವರ್ಷದಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು ಮಕ್ಕಳು ಭಾಗವಹಿಸುವಂತೆ ಪೋಷಕರು ಕೂಡ ಪ್ರೇರೇಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಫೌಂಡೇಶನ್ ವತಿಯಿಂದ ರೂ. 15000 ನ ಚೆಕ್ ನೀಡಿದರು. ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷ ಶಿಕ್ಷಕರಾದ ಈಶ್ವರ ಪ್ರಸಾದ್‌, ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಎಸ್‌ ಡಿ ಎಮ್ ಸಿ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಯಕ್ಷ ಗುರುಗಳಾದ ಈಶ್ವರ ಪ್ರಸಾದ್‌ ಅವರನ್ನು ಗೌರವಿಸಲಾಯಿತು.

Exit mobile version