ಉಜಿರೆ: ಮಾಚಾರು ಮಸೀದಿ ಸೇತುವೆಯಾ ಹತ್ತಿರ ಕಾರು ಬೈಕ್ ಅಪಘಾತ ಸಂಭವಿಸಿದ ಘಟನೆ ಡಿ.15ರಂದು ನಡೆದಿದೆ. ಬೈಕ್ ಸವಾರ ಮಾಚಾರಿನಿಂದ ಉಜಿರೆ ಕಡೆಗೆ, ಕಾರು ಉಜಿರೆಯಿಂದ ಬೆಳಾಲು ಕಡೆಗೆ ಹೋಗುವ ಸಂದರ್ಭದಲ್ಲಿ ಚಾಲಕರ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ. ಬೈಕ್ ಸವಾರನಿಗೆ ಗಾಯಗಳಾಗಿದ್ದು, ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಚಾರು: ಕಾರು-ಬೈಕ್ ಅಪಘಾತ

