Site icon Suddi Belthangady

ಡಿ.14: ಬಂದಾರು ಶಿವಫ್ರೆಂಡ್ಸ್ ಕುರಾಯ-ಖಂಡಿಗ ವಾಲಿಬಾಲ್ ಅಸೋಶಿಯೇಷನ್: 10ನೇ ವರ್ಷದ ವಾಲಿಬಾಲ್ ಪಂದ್ಯಾಟ, ಹಗ್ಗಜಗ್ಗಾಟ ಪಂದ್ಯಾಟ ಹಾಗೂ ತ್ರೋಬಾಲ್ ಪಂದ್ಯಾಟ ಮತ್ತು ಸಾಧಕರಿಗೆ ಸನ್ಮಾನ

ಬಂದಾರು: ಗ್ರಾಮ ಶಿವಫ್ರೆಂಡ್ಸ್ ಕುರಾಯ -ಖಂಡಿಗ ಮೈರೋಳ್ತಡ್ಕ ಆಶ್ರಯದಲ್ಲಿ ತಾಲೂಕು ವಾಲಿಬಾಲ್ ಅಸೋಶಿಯೇಷನ್ ಸಹಯೋಗದೊಂದಿಗೆ 10ನೇ ವರ್ಷದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ, ಪುರುಷರ ಮತ್ತು ಮಹಿಳೆಯರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ ಮತ್ತು ಸಾಧಕರಿಗೆ ಸನ್ಮಾನ ಡಿ.14ರಂದು ಶಿವಫ್ರೆಂಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 9ಗಂಟೆಗೆ ಪಂದ್ಯಕೂಟ ಉದ್ಘಾಟನೆ, ಸಂಜೆ 6ಗಂಟೆಗೆ ಶಾಸಕ ಹರೀಶ್ ಪೂoಜ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version