Site icon Suddi Belthangady

ಮಚ್ಚಿನ: ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

ಮಚ್ಚಿನ: ಮೊರಾರ್ಜಿ ಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ 5KAR Neval Unit NCC MDRS MACHINA ಮತ್ತು ಪುಂಜಾಲಕಟ್ಟೆ ಆರಕ್ಷಕ ಠಾಣೆ ಅವರ ಸಹಯೋಗದಲ್ಲಿ, ಡಿ.10ರಂದು ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಪುಂಜಾಲಕಟ್ಟೆ ಠಾಣೆಯ SI ಸಿಕಂದರ್ ಪಾಷರವರು ಸುಮಾರು 3ಗಂಟೆಗಳಷ್ಟು ಕಾಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕೆಂದು ಪ್ರೇರೇಪಿಸಿದರು. ಪ್ರಸ್ತುತ ಸಮಾಜದಲ್ಲಿ ಶೂನ್ಯ ಅಪರಾಧ ನಡೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಮೊರಾರ್ಜಿ ಶಾಲೆಯ ಪ್ರಾಂಶುಪಾಲೆ ಅಕ್ಷತಾ ಮತ್ತು ANO ಬೇಬಿ, ಸುಪ್ರೀತಾ ಬಿ.ಎನ್. ಉಪಸ್ಥಿತರಿದ್ದರು

Exit mobile version