Site icon Suddi Belthangady

ಕೊಯ್ಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ-ಕನ್ನಡಕ್ಕೆ ಪ್ರೋತ್ಸಾಹವನ್ನು ಕೊಡಬೇಕು: ಉಮೇಶ್ ನೀರಾರಿ

ಬೆಳ್ತಂಗಡಿ: ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಕೊಯ್ಲು ಅಮೃತ ಮಹೋತ್ಸವ ಕಾರ್ಯಕ್ರಮ ಡಿ.13 ಮತ್ತು ಡಿ.14 ರಂದು ನಡೆಯಲಿದ್ದು, ಡಿ.13 ರಂದು ಇಂದು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಿದಾನಂದ ರಾವ್ ಕೊಲ್ಲಾಜೆ ಧ್ವಜಾರೋಹಣ ಮಾಡಿದರು. ಹೈಕೋರ್ಟ್ ವಕೀಲ ಗೋಪಾಲಕೃಷ್ಣ ಭಟ್ ಗಂಥ್ರಾಲಯ ಕೊಠಡಿ ಹಾಗೂ ಗಂಥ್ರಾಲಯ ಉದ್ಘಾಟನೆ ಮಾಡಿದರು. ನಿವೃತ್ತ ಸೆಲೆಕ್ಷನ್ ಗ್ರೇಡ್ ಅಂಚೆ ಅಧೀಕ್ಷಕ ಉಮೇಶ್ ನೀರಾರಿ ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಮಾಡಿದರು.

ಬಳಿಕ ಮಾತನಾಡಿದ ಉಮೇಶ್ ನೀರಾರಿ ಕನ್ನಡಕ್ಕೆ ಪ್ರೋತ್ಸಾಹವನ್ನು ಕೊಡಬೇಕು. ಉದ್ಯೋಗ ಸಿಕ್ಕಿದ ಮೇಲೆ ನಮ್ಮ ಊರು ಮತ್ತು ಶಾಲೆಯನ್ನು ಮರೆಯಬಾರದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮಾಡಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರು.

ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಲೋಕೇಶ್ ಗೌಡ ಪಾಂಬೇಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ ಬಿ.ಕೆ, ಹೈಕೋರ್ಟ್ ವಕೀಲ ಕರುಣಾಕರ ಪಾಂಬೇಲು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಧರ್ಮಸ್ಥಳ ಎಸ್.ಕೆ.ಡಿ.ಆರ್.ಪಿ ಪ್ರಾದೇಶಿಕ ನಿರ್ದೇಶಕ ಮಹಾಬಲ ಕುಲಾಲ್, ನಿವೃತ್ತ ಶಿಕ್ಷಕ ಧರ್ಣಪ್ಪ ಗೌಡ, ನಿವೃತ್ತ ತಹಶೀಲ್ದಾರ್ ಜಿ.ಸೋಮೇ ಗೌಡ, ತಂತ್ರಿ ನಂದ ಕುಮಾರ್, ಮಂಗಳೂರು ಲೆಕ್ಕಪರಿಶೋಧಕ ಮೋಹನ್ ಆಚಾರ್ಯ, ಕೊಯ್ಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ, ಕೊಯ್ಯೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವೀಂದ್ರನಾಥ್ ಗೌಡ ಪಿ, ಅದೂರು ಪೆರಾಲ್ ಭಜನಾ ಮಂಡಳಿಯ ಅಧ್ಯಕ್ಷ ಲೋಹಿತಾಶ್ವ, ಪುಂಜಾಲಕಟ್ಟೆ ಸ.ಪ್ರ.ದ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಶೈಲೇಶ್ ಕುಮಾರ್ ಡಿ.ಹೆಚ್, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಅಶೋಕ್ ಭಟ್ ಅಗ್ರಸಾಲೆ, ಬಿ.ಬಾಲಕೃಷ್ಣ ಪೂಜಾರಿ, ಪ್ರಚಂಡಭಾನು ಭಟ್ ಪಾಂಬೇಲು, ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ವೆಂಕಣ್ಣ ಕೊಯ್ಯೂರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಕಸ್ತೂರಿ, ಕೊಯ್ಯೂರು ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಭಟ್, ಕೊಯ್ಯೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಯಶವಂತ ಗೌಡ, ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಸನ್ಮಾನ: ಹೈಕೋರ್ಟ್ ವಕೀಲ ಪಿ‌.ಕರುಣಾಕರ ಪಾಂಬೇಲು ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ್ ಎಂ. ಅವರನ್ನು ಸನ್ಮಾನಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯ ಬಳಿರಾಮ ಲಮಾಣಿ ಸ್ವಾಗತಿಸಿ, ಶಾಲೆಯ ಶಿಕ್ಷಕ ರಮೇಶ್ ವಿ.ಎಸ್ ವರದಿ ವಾಚನ ಮಾಡಿದರು. ಶಿಕ್ಷಕರಾದ ವಾಣಿಶ್ರೀ ಹಾಗೂ ಅನುಷಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ದೇವಪ್ಪ ವಂದಿಸಿದರು.

Exit mobile version