Site icon Suddi Belthangady

ಶಶಾಂಕ್ ಬೊಲ್ಮರಿಗೆ ಪಿ.ಹೆಚ್‌‌.ಡಿ ಪದವಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಬಿ. ವೋರ್ (ರಿಟೇಲ್ & ಸದ್ಯ ಚೇನ್ ಮ್ಯಾನೇಜೆಂಟ್) ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶಶಾಂಕ್ ಬೊಲ್ಮ ಅವರು ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಡಾ. ಕಾವ್ಯಶ್ರೀ ಅವರ ಮಾರ್ಗದರ್ಶನದಲ್ಲಿ ಶಶಾಂಕ್ ಬೊಲ್ಮ ಸಂಶೋಧನೆ ನಡೆಸಿದ್ದಾರೆ. “ಅನಜಿಂಗ್ ದಿ ಅಡ್ವಾನ್ಸ್ ಮೆಂಟ್ ಆಫ್ ಮೈಕ್ರೋ ಎಂಟರ್ಪ್ರೈಸಸ್ ಫಿನಾನ್ಸ್ ಬೈ ದಿ ಮೈಕ್ರೋ ಯುನಿಟ್ ಡೆವಲಪ್ಟೆಂಟ್ ಅಂಡ್ ರಿಫಿನಾನ್ಸ್ ಏಜನ್ಸಿ (ಮುದ್ರಾ ಸ್ಟೀಮ್): ಎ ನ್ನಡಿ ವಿದ್ ರೆಫರೆನ್ಸ್ ಟು ದಕ್ಷಿಣ ಕನ್ನಡ ಡಿಸ್ಟ್ರಿಕ್ಸ್” ಎಂಬ ಮಹಾಪ್ರಬಂಧವನ್ನು ಮಂಡಿಸುವ ಮೂಲಕ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಶಶಾಂಕ್ ಬೊಲ್ಮ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ಬೊಲ್ಮ ಗ್ರಾಮದ ನಿವಾಸಿಯಾಗಿರುವ ಶಶಾಂಕ್ ಅವರು ಬೊಲ್ಮ ಸಂಜೀವ ಗೌಡ ಹಾಗೂ ಗೀತಾ ದಂಪತಿಯ ಪುತ್ರ.

Exit mobile version