ಬೆಳ್ತಂಗಡಿ: ಡಿ. 12ರಂದು ಮುಂಬೈ ಮೂಲದ Vakrangee ಸಂಸ್ಥೆಯ ವಿನೂತನ ತಂತ್ರಜ್ಞಾನಗಳನ್ನೊಳಗೊಂಡ UPI MINI ATM ಕೇಂದ್ರವು ಸ್ವರಾಜ್ ಬಂಗೇರರವರ ಮಾಲಕತ್ವದಲ್ಲಿ ಅಳದಂಗಡಿಯ ಸ್ವರಾಜ್ ಟವರ್ಸ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ನೂತನ ATM ಕೇಂದ್ರವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಪೂಜ್ಯ ಡಾ.ಪದ್ಮಪ್ರಸಾದ್ ಅಜಿಲರವರು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಅಳದಂಗಡಿ ಸಂತ ಪೀಟರ್ ಕ್ಲೇವರ್ ಚರ್ಚ್ ನ ಧರ್ಮಗುರು ರೆ/ಫಾ ಎಲೈಯಸ್ ಡಿಸೋಜ, ಡಾ.M.N ತುಳುಪುಲೆ, ಸುಲ್ಕೇರಿ ಶ್ರೀ ರಾಮ ಶಾಲೆಯ ಅಧ್ಯಕ್ಷ ರಾಜು ಮಾಷ್ಟ್ರು, ಕಾಶಿಪಟ್ಣ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಖ್ಯಾತ ನಾಟಿ ವೈದ್ಯರಾದ ಬೇಬಿ ಪೂಜಾರಿ, ಪದ್ಯೋಡಿ ಅಶೋಕ್ ಕೋಟ್ಯಾನ್, ಶಶಿಧರ್ ಶೆಟ್ಟಿ ಅಳದಂಗಡಿ, ನಾರಾವಿ ಹೆಗ್ಡೆ ಫರ್ನಿಚರ್ಸ್ ನ ಮಾಲಕ ರೋಶನ್ ಹೆಗ್ಡೆ, ದಿ ಕ್ಯಾಪ್ಸಿ ಸಮೂಹ ಸಂಸ್ಥೆಯ ದಕ್ಷಿಣ್ ಭವನ್ ಹೋಟೆಲ್ ನ ಮಾಲಕ ಅನಿಲ್ ಅಂಚನ್, ಶರತ್ ಚಂದ್ರ, VAKRANGEE ATM ಕೇಂದ್ರದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಖ್ಯಸ್ಥ ಅಭಿಜಿತ್ ಜೈನ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಪ್ರವೀಣ್ ರವರು ಭಾಗವಹಿಸಿ ನೂತನ UPI ATM ಕೇಂದ್ರಕ್ಕೆ ಶುಭಾಶಂಸನೆಗೈದರು.
ಸ್ವರಾಜ್ ಟವರ್ಸ್ ನ ಮಾಲಕ ಸೋಮನಾಥ ಬಂಗೇರ, ಸ್ವರಾಜ್ ಬಂಗೇರ ಸಹಿತ ಊರ-ಪರ ಊರ ಗ್ರಾಹಕ ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.
ಅಳದಂಗಡಿಯಲ್ಲಿ Vakrangee ಸಂಸ್ಥೆಯ ಪ್ರಪ್ರಥಮ UPI MINI ATM ಕೇಂದ್ರವು ಇದಾಗಿದ್ದು ನೂತನ ATM ಕೇಂದ್ರದಲ್ಲಿ ಎಲ್ಲಾ ಬ್ಯಾಂಕಿನ ಕಾರ್ಡ್ ಗಳ ಮೂಲಕ ನಗದನ್ನು ಪಡೆಯಬಹುದಾದ ವ್ಯವಸ್ಥೆಯ ಜೊತೆಗೆ ಅತ್ಯಂತ ಸರಳ ರೀತಿಯಲ್ಲಿ ತಮ್ಮ ಮೊಬೈಲ್ ನಿಂದ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸ್ಕ್ಯಾನರ್ ಬಳಸಿ ನಗದನ್ನು ಪಡೆಯುವ ವಿನೂತನ ವ್ಯವಸ್ಥೆಯು ಇರಲಿದ್ದು ನೂತನ ಸುಸಜ್ಜಿತ ಕೇಂದ್ರವು ಸಾರ್ವಜನಿಕ ಸೇವೆಗೆ ದಿನದ 24 ಗಂಟೆಯೂ ತೆರೆದಿರುತ್ತದೆ.
ಅಳದಂಗಡಿ ಮತ್ತು ಆಸುಪಾಸಿನ ಗ್ರಾಮಗಳ ಸಾರ್ವಜನಿಕ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ATM ಕೇಂದ್ರದ ಮಾಲಕ ಸ್ವರಾಜ್ ಬಂಗೇರರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

