ಸೌತಡ್ಕ: ಕೊಕ್ಕಡದ ಜನಪ್ರಿಯ ವೈದ್ಯ ಡಾ. ಬಿ. ಮೋಹನದಾಸ ಗೌಡ ಅವರಿಗೆ 90 ವರ್ಷ ತುಂಬಿ ಅವರೀಗ ನವತಿ ಸಂಭ್ರಮದಲ್ಲಿದ್ದಾರೆ. ಡಿ. 14ರಂದು ಕೊಕ್ಕಡದ ಕಾವು ದೇವಸ್ಥಾನದಲ್ಲಿ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ.
ಇದಕ್ಕೂ ಮುನ್ನ ಗೌಡ ಡಾಕ್ಟ್ರು ಡಿ.12ರಂದು ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಸೌತಡ್ಕ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಡಾ. ಮೋಹನದಾಸ ಗೌಡರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದರು. ಅವರಿಗೆ ದೇವರು ಮತ್ತಷ್ಟು ಆರೋಗ್ಯ, ಶಕ್ತಿ ನೀಡಿ ಜನಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

