ಉಜಿರೆ: ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞ ಡಾ| ಪ್ರತೀಕ್ಷ್ ಪಿ ಕಾಲು ಮತ್ತು ಮೊಣಕಾಲು ಅಸ್ಚಸ್ಥತೆ ಚಿಕಿತ್ಸೆ ಬಗ್ಗೆ ವಿಶೇಷ ಭಾಷಣ
ಕೆನರಾ ಆರ್ಥೋಪೆಡಿಕ್ ಸೊಸೈಟಿ ಸಹಯೋಗದೊಂದಿಗೆ ಮುಕ್ಕಾದ ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಮೂಳೆಚಿಕಿತ್ಸಾ ವಿಭಾಗವು ಇತ್ತೀಚೆಗೆ ಆಯೋಜಿಸಿದ್ದ ಕಾಲು ಮತ್ತು
ಕಣಕಾಲು ಅಸ್ಚಸ್ಥತೆಗಳ ಸಮಗ್ರ ಪರಿಶೀಲನೆಯ ಕುರಿತಾದ ನಿರಂತರ ವೈದ್ಯಕೀಯ ಶಿಕ್ಷಣ ಅಧಿವೇಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞ ಡಾ| ಪ್ರತೀಕ್ಷ್ ಪಿ. ಅವರು ಮಧ್ಯದ ಪಾದದಲ್ಲಿರುವ ಮೂಳೆಗಳ, ಕೀಲುಗಳ ಮತ್ತು ಅಸ್ಥಿರಜ್ಜುಗಳಿಗೆ ಆಗುವ ಹಾನಿ ಮತ್ತು ಅದರ ಚಿಕಿತ್ಸೆಯ ಬಗ್ಗೆ ವಿಶೇಷ ಭಾಷಣ ಮಂಡಿಸಿದರು.
ಫೂಟ್ ಅಂಡ್ ಆಂಕ್ಲ್ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಅವರು ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆಚಿಕಿತ್ಸಾ ತಜ್ಞರಾಗಿದ್ದು ಪಾದ ಮತ್ತು ಪಾದದ ಮಣಿಗಂಟು ಅತ್ಯಾಧುನಿಕ
ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಈಗಾಗಲೇ ಉಜಿರೆ ಎಸ್,ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಕ್ರಪಾದ ಹೊಂದಿರುವ, ನಡೆದಾಡಲು ಕಷ್ಟಪಡುತ್ತಿದ್ದ ಮಗುವಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಮಗು ಸ್ವತಂತ್ರವಾಗಿ ನಡೆದಾಡುವಂತೆ ಮಾಡುವ ಮೂಲಕ ಪ್ರಸಂಸೆಗೆ ಪಾತ್ರರಾಗಿದ್ದರು.
ಪುದುಚೇರಿಯ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆ.29ರಿಂದ 31ರವರೆಗೆ ನಡೆದ ದಕ್ಷಿಣ ಭಾರತೀಯ ರಾಜ್ಯಗಳ ಮೂಳೆಚಿಕಿತ್ಸಾ ಸಂಘದ 24ನೇ ವಾರ್ಷಿಕ ಸಮ್ಮೇಳನ
ಓಂಸಿಸ್ಕಾನ್- 2025 ಸಮ್ಮೇಳನದಲ್ಲಿ ಈ ಹಿಂದೆ ವಿಶೇಷ ಆಹ್ವಾನಿತರಾಗಿ ಪಾದದ ಮೂಳೆಗಳ ಮುರಿತದ ಗಾಯಗಳ ಅತ್ಯಾಧುನಿಕ ಚಿಕಿತ್ಸೆಗಳ ಕುರಿತು ಕೂಡ ಪ್ರಮುಖ ಉಪನ್ಯಾಸ ನೀಡಿದ್ದರು ಎಂದು ಆಸ್ಪತ್ರೆಯ
ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.

