Site icon Suddi Belthangady

ಅಳದಂಗಡಿಯ ಸ್ವರಾಜ್ ಟವರ್ಸ್‌ಲ್ಲಿ ದಿ ದಕ್ಷಿಣ್ ಭವನ್ ಸಸ್ಯಾಹಾರಿ ಹೋಟೆಲ್ ಶುಭಾರಂಭ

ಬೆಳ್ತಂಗಡಿ: ಅಳದಂಗಡಿ ಮುಖ್ಯ ರಸ್ತೆಯ ಸ್ವರಾಜ್ ಟವರ್‌ನಲ್ಲಿ ದಿ ದಕ್ಷಿಣ್ ಭವನ್ ಸಸ್ಯಹಾರಿ ರೆಸ್ಟೋರೆಂಟ್ ಡಿ.12ರಂದು ಉದ್ಘಾಟನೆಗೊಂಡಿದೆ. ಉದ್ಘಾಟನೆಯನ್ನು ಅಳದಂಗಡಿಯ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಅಳದಂಗಡಿ ಚರ್ಚ್ ನ ಫಾದರ್ ಯಲೇ ಯಸ್, ಅಳದಂಗಡಿಯ ವೈದ್ಯ ಎಮ್.ಎನ್ ತುಳುಪುಲೆ, ಹೆಗ್ಡೆ ಪರ್ನೀಚರ್ ಮಾಲಕ ರೋಶನ್ ಹೆಗ್ಡೆ, ನಾಟಿ ವೈದ್ಯ ಬೇಬಿ, ಪ್ರಮುಖರಾದ ಪಡ್ಯೋಡಿ ಅಶೋಕ್ ಕೊಟ್ಯಾನ್, ರಾಜು, ಸೋಮನಾಥ ಬಂಗೇರ, ಶಶಿಧರ, ಅನಿಲ್ ಅಂಚನ್, ಉಪಸ್ಥಿತರಿದ್ದರು.

ಅನಿಲ್ ಅಂಚನ್, ಶರತ್ ಚಂದ್ರ ಮತ್ತು ಸ್ವರಾಜ್ ಮಾಲಿಕತ್ವದ ಈ ಹೋಟೆಲ್ ನಲ್ಲಿ ದಿ ಕ್ಯಾಪ್ತಿ ಮಲ್ಟಿ ಕ್ಯುಸಿನ್ ಇದೆ. ಇಲ್ಲಿ ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಹಾಗೂ ಚೈನೀಸ್ ಫುಡ್‌ಗಳು ಸಿಗಲಿವೆ. ಜೊತೆಗೆ ಬಾಂಕ್ವೆಟ್ ಪಾರ್ಟಿ ಹಾಲ್ ಇದ್ದು ಶುಭ ಸಮಾರಂಭಗಳಿಗೆ ಉತ್ತಮ ಸೇವೆ ಕೊಡಲು ಮುಂದಾಗಿದೆ. ದಿ ಕ್ಯಾಪ್ತಿಯವರದ್ದೇ ಆದ ದಿ ಕ್ಯಾಪ್ತಿ – ಕ್ಯಾಟರರ್ಸ್, ದಿ ಕ್ಯಾಪ್ತಿ ಹೋಮ್ ಫುಡ್ ಪ್ರೊಡಕ್ಸ್‌ಗಳು, ದಿ ಕ್ಯಾಪ್ತಿ ಕಿಚನ್ ಹಳೆಯಂಗಡಿಯ ಪಂಡಿತ್ ಹರಿಭಟ್ ರಸ್ತೆಯ ಕಾಶಿಪಟ್ನಾ ಶಿರ್ತಾಡಿಯಲ್ಲಿ ಉತ್ತಮ ಸೇವೆ ಕೊಡುತ್ತಿದೆ. ಪೆರಾಡಿ ಪ್ಯಾಕ್ಸ್ ಅಧ್ಯಕ್ಷ ಸತೀಶ್ ಕಾಶಿಪಟ್ನಾ ಸ್ವಾಗತಿಸಿ, ವಂದಿಸಿದರು.

Exit mobile version