ನಾರಾವಿ: ಗುರುವಾಯನಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಮಾರ್ಗದರ್ಶನದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಾರಾವಿ ವಲಯದ ನಾರಾವಿ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಟ್ಯೂಷನ್ ತರಗತಿ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಾವರ್ಮ್ ಜೈನ್ ಉದ್ಘಾಟನೆ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲ, ಪ್ರಸ್ತಾವಿಕ ತಾಲೂಕು ಸಮನ್ವಯ ಅಧಿಕಾರಿ ಸುಗುಣ ಶೆಟ್ಟಿ ಮಾಡಿದರು. ಶಾಲಾ ಶಿಕ್ಷಕರು ವಲಯ ಮೇಲ್ವಿಚಾರಕಿ ವಿಶಾಲ, ಪಂಚಾಯತ್ ಸದಸ್ಯ ಉದಯ ಹೆಗ್ಡೆ, ಶಾಲಾ ನಾಯಕ್ ಪ್ರತೀಕ್, ಎಸ್.ಡಿ.ಎಮ್.ಸಿ.ಉಪಾಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು. ಆನಂದ ಭಟ್ ನಿರೂಪಿಸಿದರು. ಸೇವಾಪ್ರತಿನಿಧಿ ಹರಿನಾಕ್ಷಿ ಧನ್ಯವಾದವಿತ್ತರು.

