ಬೆಳ್ತಂಗಡಿ: ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ `ಅಮೃತ ಕೊಯ್ಲು’ ಅಮೃತ ಮಹೋತ್ಸವ ಕಾರ್ಯಕ್ರಮ ಡಿ.13 ಮತ್ತು ಡಿ.14ರಂದು ನಡೆಯಲಿದೆ. ಡಿ.13ರಂದು ಬೆಳಿಗ್ಗೆ ಮಲ್ಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಿದಾನಂದ ರಾವ್ ಕೊಲ್ಲಾಜೆ ಧ್ವಜಾರೋಹಣ ಮಾಡಲಿದ್ದಾರೆ. ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಗ್ರಂಥಾಲಯ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ. ಹೈಕೋರ್ಟ್ ವಕೀಲ ಗೋಪಾಲಕೃಷ್ಣ ಭಟ್ ಗಂಥ್ರಾಲಯ ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ನಿವೃತ್ತ ಸೆಲೆಕ್ಷನ್ ಗ್ರೇಡ್ ಅಂಚೆ ಅಧೀಕ್ಷಕ ಉಮೇಶ್ ನೀರಾರಿ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಲೋಕೇಶ್ ಗೌಡ ಪಾಂಬೇಲು ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲ ಬಿ.ಕೆ ಧನಂಜಯ್ ರಾವ್ ಆಶಯ ನುಡಿ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ ಬಿ.ಕೆ, ಹೈಕೋರ್ಟ್ ವಕೀಲ ಕರುಣಾಕರ ಪಾಂಬೇಲು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ವಕೀಲ ಇಸ್ಮಾಯಿಲ್ ಉಣ್ಣಾಲು, ಧರ್ಮಸ್ಥಳ ಎಸ್.ಕೆ.ಡಿ.ಆರ್.ಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ನಿವೃತ್ತ ಶಿಕ್ಷಕ ಧರ್ಣಪ್ಪ ಗೌಡ, ನಿವೃತ್ತ ತಹಶೀಲ್ದಾರ್ ಜಿ.ಸೋಮೇ ಗೌಡ, ತಂತ್ರಿ ನಂದ ಕುಮಾರ್, ಬೆಳ್ತಂಗಡಿ ಸಮೂಹ ಸಂಪನ್ಮೂಲ ವ್ಯಕ್ತಿ ವಾರಿಜ ಪಿ., ಲೆಕ್ಕಪರಿಶೋಧಕ ಮೋಹನ್ ಆಚಾರ್ಯ, ಕೊಯ್ಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ, ಕೊಯ್ಯೂರು ಫ್ಯಾಕ್ಸ್ ಅಧ್ಯಕ್ಷ ರವೀಂದ್ರನಾಥ್ ಗೌಡ ಪಿ., ಅದೂರು ಪೆರಾಲ್ ಲೋಹಿತಾಶ್ವ, ಪುಂಜಾಲಕಟ್ಟೆ ಸ.ಪ್ರ.ದ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಶೈಲೇಶ್ ಕುಮಾರ್ ಡಿ.ಹೆಚ್, ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ವೆಂಕಣ್ಣ ಕೊಯ್ಯೂರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಕಸ್ತೂರಿ, ಆದೂರು ಪೆರಾಲ್ ಮಹಾಮ್ಮಾಯಿ ಸೇವಾ ಸಮಿತಿಯ ಅಧ್ಯಕ್ಷ ಪರಮೇಶ್ವರ್ ಗೌಡ, ಕೊಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ್, ಕೊಯ್ಯೂರು ಪ್ಯಾಕ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತ್ ಕೃಷ್ಣ ಭಟ್, ಕೊಯ್ಯೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಯಶವಂತ ಗೌಡ ಉಪಸ್ಥಿತಿ ಇರಲಿದ್ದಾರೆ.
ರಾತ್ರಿ 7ರಿಂದ ಸಭಾ ಕಾರ್ಯಕ್ರಮ: ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಉಸ್ತುವಾರಿ ಸಚಿವ ದಿನೇಶ್ ಗೂಂಡುರಾವ್ ಮಾಡಲಿದ್ದಾರೆ. ಸ್ಪೀಕರ್ ಯುಟಿ ಖಾದರ್ ಉಪಸ್ಥಿತರಿರಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳಲಿದ್ದಾರೆ. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜ್ಯ ಸಭೆ ಸಂಸದ ಡಾ.ಡಿ.ವೀರೇಂದ್ರ ಹೆಗ್ಗಡೆ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ, ಬದುಕು ಕಟ್ಟೋಣ ತಂಡದ ಸಂಚಾಲಕ ಕೆ.ಮೋಹನ್ ಕುಮಾರ್, ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಆರಿಕೋಡಿ ಶ್ರೀ ಚಾಮುಂಡೇಶ್ವರ ದೇವಸ್ಥಾನದ ಧರ್ಮದರ್ಶಿ ಹರೀಶ್ ಆರಿಕೋಡಿ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್ ಭೋಜೆಗೌಡ, ಐವನ್ ಡಿಸೋಜಾ, ಕೆ.ಪ್ರತಾಪ್ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಡಾ. ಧನಂಜಯ ಸರ್ಜಿ, ಕಿಶೋರ್ ಕುಮಾರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕೊಯ್ಯೂರು ಗ್ರಾ.ಪಂ ಅಧ್ಯಕ್ಷೆ ದಯಾಮಣಿ, ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಗೌಡ, ಕೊಯ್ಯೂರು ಗ್ರಾ.ಪಂ ಸದಸ್ಯರಾ ಹೇಮಾವತಿ, ಇಸುಬು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿನಯ್ ಕೆ, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಭಟ್, ಪ್ರಚಂಡ ಭಾನು ಭಟ್, ಬಾಲಕೃಷ್ಣ ಪೂಜಾರಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ವಿಜಯ ಕುಮಾರ್, ಅ.ಮ. ಸಮಿತಿಯ ಕಾರ್ಯಾಧ್ಯಕ್ಷ ಮಹಮ್ಮದ್ ಹಾರೂನ್, ಅ.ಮ. ಸಮಿತಿಯ ಪ್ರಧಾನ ಸಂಚಾಲಕ ದಾಮೋದರ್ ಗೌಡ, ಬೆಳ್ತಂಗಡಿ ಸಂಯೋಜನಾಧಿಕಾರಿ ಬಸವಲಿಂಗಪ್ಪ, ಶಿಕ್ಷಣ ಸಂಯೋಜನಾಧಿಕಾರಿ ಚೇತನಾಕ್ಷಿ, ಮುಖ್ಯ ಶಿಕ್ಷಕ ಬಳಿರಾಮ ಲಮಾಣಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಗೌಡ, ಹಿರಿಯ ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸಾಲಿಯಾನ್, ಅಮೃತ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಚೇತನ್ ಚಂದಪ್ಪ ಗೌಡ ಉಪಸ್ಥತಿ ಇರಲಿದ್ದಾರೆ.

