ಪಟ್ರಮೆ: ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ “ಕ್ಷೀರ ವಾರಿಧಿ” ಇದರ ಉದ್ಘಾಟನಾ ಸಮಾರಂಭವು ಡಿ.14ರಂದು ಅನಾರು ಪಟ್ರಮೆಯ ಸಮರ್ಪಣಾ ಸಭಾಭವನದಲ್ಲಿ ನಡೆಯಲಿದೆ.
ನೂತನ ಕಟ್ಟಡ ಉದ್ಘಾಟನೆಯನ್ನು ಮಂಗಳೂರು ದ.ಕ.ಜಿ.ಪ.ಸ.ಹಾ.ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಅವರು ನೆರವೇರಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ರಾಜ್ಯ ಸಭಾ ಸದಸ್ಯ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದಾರೆ. ನಾಮಫಲಕ ಉದ್ಘಾಟನೆಯನ್ನು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅನಾರು ಪಟ್ರಮೆಯ ಮೊಕ್ತೇಸರ ನಿತೇಶ್ ಬಲ್ಲಾಳ್ ಉಳಿಯಬೀಡು ನೆರವೇರಿಸಲಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಾಣಿಜ್ಯ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ.
ಶಾಸಕ ಹರೀಶ್ ಪೂಂಜ ಕಾರ್ಯಾಲಯ ಉದ್ಘಾಟನೆ ಮಾಡಲಿದ್ದಾರೆ. ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಆಡಳಿತ ಮಂಡಳಿ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ. ದಾಸ್ತಾನು ಕೊಠಡಿ ಉದ್ಘಾಟನೆಯನ್ನು ಮಂಗಳೂರು ದ.ಕ.ಜಿ.ಸ.ಹಾ.ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್ ಇರ್ವತ್ತೂರು ನೆರವೇರಿಸಲಿದ್ದಾರೆ. ಹಾಲು ಸಂಗ್ರಹ ಕೊಠಡಿ ಉದ್ಘಾಟನೆಯನ್ನು ಮಂಗಳೂರು ದ.ಕ.ಜಿ.ಸ.ಹಾ.ಒಕ್ಕೂಟದ ನಿರ್ದೇಶಕ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ನೆರವೇರಿಸಲಿದ್ದಾರೆ
ಅದೇ ದಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಮರ್ಪಣಾ ಸಭಾಭವನದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದೇವಪಾಲ ಅಜ್ರಿ ಉಳಿಯಬೀಡು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ| ಡಿ. ವೀರೇಂದ್ರ ಹೆಗ್ಗಡೆ, ನಿತೇಶ್ ಬಲ್ಲಾಳ್, ರವಿರಾಜ್ ಹೆಗ್ಡೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್, ಉದಯ ಎಸ್. ಕೋಟ್ಯಾನ್ ಇರ್ವತ್ತೂರು, ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಸುಚರಿತ ಶೆಟ್ಟಿ, ಜಯರಾಮ ರೈ ಬಳ್ಳಜ್ಜ, ಸವಿತಾ ಎನ್. ಶೆಟ್ಟಿ, ಪ್ರಭಾಕರ ಆರಂಬೋಡಿ, ಚಂದ್ರಶೇಖರ ರಾವ್, ಭರತ್ ನೆಕ್ರಾಜೆ, ವಿವೇಕ್ ಡಿ, ಕುಶಾಲಪ್ಪ ಗೌಡ, ರ್ದೇಶಕರು, ಡಿಸಿಸಿ ಬ್ಯಾಂಕ್, ಅಧ್ಯಕ್ಷರು ಕೊಕ್ಕಡ ಸಿ.ಎ. ರವಿರಾಜ ಉಡುಪ, ಹಾಗೂ ಮನೋಜ್ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಿರಣ್‌ಚಂದ್ರ ಪುಷ್ಪಗಿರಿ, ಪದ್ಮನಾಭ ಶೆಟ್ಟಿ ಅರ್ಕಜೆ, ಡಾ| ಸತೀಶ್ ರಾವ್, ಎಸ್.ಎಂ. ರಘು, ಡಾ. ಜಿತೇಂದ್ರ ಪ್ರಸಾದ್, ರಾಜೇಶ್ ಪಿ. ಕಾಮತ್, ಅನಿಲ್ ಕುಮಾರ್, ಪ್ರತಿಮಾ ಬಿ.ವಿ. ಹಾಗೂ ಶ್ರೀನಿವಾಸ್ ರಾವ್ ಅವರ ಗೌರವ ಉಪಸ್ಥಿತಿ ಇರಲಿದೆ ಎಂದು ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪುರಂದರ ಎಸ್. ಸೂರ್ಯತ್ತಾವು ತಿಳಿಸಿದ್ದಾರೆ.

