ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೆತ್ತವರ ಕ್ರೀಡಾಕೂಟವು ಡಿ. 10ರಂದು ಸೇಕ್ರೆಡ್ ಹಾರ್ಟ್ ಕಾಲೇಜು ಕ್ರೀಡಾಂಗಣದಲ್ಲಿ ನೆರವೇರಿತು. ಈ ಕ್ರೀಡಾಕೂಟದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಸ್ವಾ|ದೀಪಕ್ ಲಿಯೋ ಡೇಸರವರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೆತ್ತವರನ್ನು ಉದ್ದೇಶಿಸಿ ಮಾತನಾಡಿ, ಇವತ್ತಿನ ಕ್ರೀಡೋತ್ಸವ ಮನಸ್ಸಿಗೆ ಸಂತೋಷವನ್ನು ನೀಡಲಿ, ಸಂತೋಷದಿಂದ ಬಂದಿದ್ದೀರಿ, ಸಂತೋಷದಿಂದ ಆಡಿ. ಇಂದಿನ ಈ ದಿನ ನಿಮ್ಮ ಜೀವನದಲ್ಲಿ ಅವಿಸ್ಮರಣೀಯ ದಿನವಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈ ರವರು ಆಗಮಿಸಿದ್ದರು. ಅವರು ಹೆತ್ತವರನ್ನು ಉದ್ದೇಶಿಸಿ ಮಾತನಾಡಿ ಇವತ್ತಿನ ಕ್ರೀಡಾಕೂಟ ದ್ವೇಷಕ್ಕೆ ಕಾರಣವಾಗದೆ ಸ್ನೇಹ ಸೌಹಾರ್ದಕ್ಕೆ ಕಾರಣವಾಗಲಿ. ಕ್ರೀಡಾ ಮನೋಭಾವದಿಂದ ಆಡಿ ಪೋಷಕರ ವಾರ್ಷಿಕ ಕೀಡಾ ಕೂಟವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು. ಹೆತ್ತವರು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.
ಈ ಕ್ರೀಡಾಕೂಟದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಹೆತ್ತವರು, ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕ್ರೀಡಾಕೂಟವನ್ನು ಮೇಘಶ್ರೀರವರು ಸ್ವಾಗತಿಸಿ, ಸಹ ಶಿಕ್ಷಕರಾದ ಜೆರಾಲ್ಡ್ ಡಿಸೋಜ ಮತ್ತು ಐಡ ಡಿಕುನ್ಹ ರವರು ನಿರೂಪಿಸಿ, ವಲೇರಿಯನ್ ಡಿಸೋಜರವರು ಧನ್ಯವಾದವನ್ನು ಸಮರ್ಪಿಸಿದರು.

