Site icon Suddi Belthangady

ಶಾಸಕ ಹರೀಶ್ ಪೂಂಜರ ಜನಸ್ಪಂದನಾ ಕಾರ್ಯಕ್ರಮ: ಜನರ ಸಮಸ್ಯೆಗೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

ಇಂದಬೆಟ್ಟು: ಡಿ.8ರಂದು ಇಂದಬೆಟ್ಟು ಚರ್ಚ್ ಹಾಲ್ ಸಭಾಂಗಣದಲ್ಲಿ ಬೆಳ್ತಂಗಡಿಯ ಜನಪ್ರಿಯ ಶಾಸಕ ಹರೀಶ್ ಪೂಂಜರವರ ಅಧ್ಯಕ್ಷತೆಯಲ್ಲಿ ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ಲಿಂಗಾಂತ್ಯಾರು, ಬೆದ್ರಪಲ್ಕೆ, ಎರ್ಮಲ ಭಾಗದ ಜನರು ತಿಳಿಸಿದ ಬೇಡಿಕೆಯಂತೆ ಹರೀಶ್ ಪೂಂಜಾ ರವರ ಸೂಚನೆ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳಾದ ವಲಯ ಅರಣ್ಯ ಅಧಿಕಾರಿ ತ್ಯಾಗರಾಜ್ T N, ಉಪ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಕೆ. ಹಾಗೂ ಗಸ್ತು ಅರಣ್ಯಪಾಲಕ ಪ್ರತಾಪ್ ಡಿ.11ರಂದು ಆಗಮಿಸಿ ವಾಸ್ತವ ಸ್ಥಿತಿಯನ್ನು ಅವಲೋಕಿಸಿದರು.

ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಪಂಚಾಯತ್ ಸದಸ್ಯ ಶ್ರೀಕಾಂತ್ ಎಸ್.. ಇಂದಬೆಟ್ಟು, ಗ್ರಾಮಸ್ಥರಾದ ವಿ.ಜೆ ದೇವಸಿ ಎರ್ಮಲ, ರಾಮ ಮೊಯಿಲಿ ಬಂಗಾಡಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Exit mobile version